Advertisment

ಚೀನಿಯರ ಮೇಲೆಯೇ ಪಾಕ್​ ಭಯೋತ್ಪಾದಕರಿಂದ ಅಟ್ಯಾಕ್​​.. ಉಗ್ರರ ಆತ್ಮಾಹುತಿ ದಾಳಿಗೆ ಐವರು ಬಲಿ

author-image
Veena Gangani
Updated On
ಚೀನಿಯರ ಮೇಲೆಯೇ ಪಾಕ್​ ಭಯೋತ್ಪಾದಕರಿಂದ ಅಟ್ಯಾಕ್​​.. ಉಗ್ರರ ಆತ್ಮಾಹುತಿ ದಾಳಿಗೆ ಐವರು ಬಲಿ
Advertisment
  • ಚೀನಿಯರ ಮೇಲೆ ಪಾಕಿಸ್ತಾನ ಉಗ್ರರ ದಾಳಿಯೇಕೆ?
  • ಚೀನಿಯರನ್ನು ಗುರಿಯಾಗಿಸಿ ನಡೆದ ಮೂರನೇ ದಾಳಿ
  • ದಾಳಿಯ ಹೊಣೆ ಹೊತ್ತ ಪಾಕ್​ನ ಲಿಬರೇಷನ್ ಆರ್ಮಿ

ಪಾಕಿಸ್ತಾನ ಗಡಿಯಿಂದ ಭಾರತಕ್ಕೆ ನುಗಿ ದುಷ್ಕೃತ್ಯ ಎಸಗಿದ್ದ ಉಗ್ರರು ಇದೀಗ ಪಾಕಿಸ್ತಾನಕ್ಕೆ ಕಂಟಕವಾಗಿದ್ದಾರೆ. ಅದರಲ್ಲೂ ತಮ್ಮ ನೆಲದಲ್ಲಿ ಚೀನಾದ ಬಂಡವಾಳ ಹೂಡಿಕೆಯನ್ನು ವಿರೋಧಿಸುತ್ತಿರುವ ಬಲೂಚಿಸ್ತಾನ್‌ ಉಗ್ರರು ಆತ್ಮಹುತಿ ದಾಳಿ ಮಾಡಿ ಐವರು ಚೀನಿಯರನ್ನ ಹತ್ಯೆಗೈದಿದ್ದಾರೆ.

Advertisment

publive-image

ಇದನ್ನೂ ಓದಿ: ಆಡುಜೀವಿತಂ’ ಒಂದು ಅದ್ಭುತ.. ಪೃಥ್ವಿರಾಜ್​ ಸುಕುಮಾರನ್ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

ವಿಶ್ವಕ್ಕೆ ಭಯೋತ್ಪಾದನೆಯ ವಿಷಬೀಜ ಬಿತ್ತಿದ ದೇಶ ಪಾಕಿಸ್ತಾನ. ಭಾರತಕ್ಕೆ ಉಗ್ರರ ಕರಿಛಾಯೆ ಬೀಳುವಂತೆ ಮಾಡಿರೋ ಪಾಪಿ ಪಾಕಿಸ್ತಾನಕ್ಕೆ ಈಗ ತನ್ನ ಮಡಿಲೊಳಗೆ ಸಾಕಿದ ನರಹಂತಕರಿಂದ ನರಕಯಾತನೆ ಅನುಭವಿಸುತ್ತಿದೆ. ತಮ್ಮ ನೆಲದಲ್ಲಿ ಚೀನಾ ಹೂಡಿಕೆ ವಿರೋಧಿಸುತ್ತಿರುವ ಬಲೂಚಿಸ್ತಾನದ ಉಗ್ರರು ಆತ್ಮಹುತಿ ದಾಳಿ ನಡೆಸಿ ಪಾಕಿಸ್ತಾನಿ ಸರ್ಕಾರಕ್ಕೇನೇ ಬಿಸಿ ಮುಟ್ಟಿಸುತ್ತಿದ್ದಾರೆ.

ಉಗ್ರರ ಆತ್ಮಾಹುತಿ ದಾಳಿ.. ಐವರು ಚೀನಿಯರು ಸಾವು!

ಮಾಡಿದುಣ್ಣೋ ಮಾರಾಯಾ ಎಂಬ ಹಳೇ ಗಾದೆಯಂತೆ, ಪಾಕಿಸ್ತಾನದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಸ್ಫೋಟಕಗಳನ್ನು ತುಂಬಿಸಿದ ವಾಹನವನ್ನು ಸೂಸೈಡ್​ ಬಾಂಬರ್​​​​ ಚೀನೀ ಇಂಜಿನಿಯರ್​​ಗಳಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ಐದು ಚೀನಿ ಇಂಜಿನಿಯರ್​​ಗಳು ಸೇರಿದಂತೆ ವಾಹನ ಚಲಾಯಿಸುತ್ತಿದ್ದ ಓರ್ವ ಪಾಕಿಸ್ತಾನಿ ಡ್ರೈವರ್​ ಸಾವನ್ನಪ್ಪಿದ್ದಾನೆ.

Advertisment

ಕಳೆದ ಹಲವು ದಿನಗಳಲ್ಲಿ ಪಾಕಿಸ್ತಾನದಲ್ಲಿ ಚೀನಿಯರನ್ನು ಗುರಿಯಾಗಿಸಿಕೊಂಡು ನಡೆದ ಮೂರನೇ ದಾಳಿ ಇದಾಗಿದ್ದು, ಈ ದಾಳಿಗೂ ಮುನ್ನ ಪಾಕಿಸ್ತಾನದ ಎರಡನೇ ವಾಯುಪಡೆಯ ನೆಲದ ಮೇಲೆ ಕೂಡ ಉಗ್ರರು ದಾಳಿ ನಡೆಸಿದ್ದರು. ದಾಳಿಯ ಆಘಾತವನ್ನು ಚೇತರಿಸಿಕೊಳ್ಳುವ ಮುನ್ನವೇ ಚೀನಾದ ಪ್ರಜೆಗಳ ಮೇಲೆ ದಾಳಿ ನಡೆಸಿದ್ದು, ದಾಳಿಯ ಸಂಪೂರ್ಣ ಹೊಣೆಯನ್ನು ಬಲೂಚಿಸ್ತಾನದ ಲಿಬರೇಷನ್​ ಆರ್ಮಿ ಹೊತ್ತಿದೆ.

publive-image

ಚೀನಿಯರ ಮೇಲೆ ಉಗ್ರರ ದಾಳಿಯೇಕೆ?

ಪಾಕಿಸ್ತಾನದಲ್ಲಿ ಚೀನಾ ಬಂಡವಾಳ ಹೂಡಿಕೆ ಮಾಡಿ ಪಾಕಿಸ್ತಾನದ ಮಹತ್ವದ ಅಣೆಕಟ್ಟನ್ನು ಚೀನಾ ನಿರ್ಮಿಸುತ್ತಿದೆ. ಇದನ್ನ ವಿರೋಧಿಸುತ್ತಿರುವ ಬಲೂಚಿಸ್ತಾನ ಉಗ್ರ ಸಂಘಟನೆ, ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡುತ್ತಿರುವ ಚೀನಾ ಇಂಜಿನಿಯರ್​​ಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಸುತ್ತಿದೆ. 2021ರಲ್ಲೂ ಇದೇ ರೀತಿ ಉಗ್ರರು ದಾಳಿ ನಡೆಸಿದ್ದರು ಘಟನೆಯಲ್ಲಿ ಸುಮಾರು 9 ಚೀನಾ ಪ್ರಜೆಗಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಇನ್ನು, ಆತ್ಮಾಹುತಿ ದಾಳಿಗೆ ಸಂಬಂಧಿಸದಂತೆ ಪಾಕಿಸ್ತಾನಿ ಸೇನೆ ಕಾರ್ಯಚರಣೆ ನಡೆಸಿ ನಾಲ್ಕು ಮಂದಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕ್​ ಸೇನೆ ತಿಳಿಸಿದೆ. ಒಟ್ಟಿನಲ್ಲಿ ಉಗ್ರರನ್ನು ಪೋಷಿಸಿ ವಿಶ್ವದ ತುಂಬೆಲ್ಲಾ ಉಗ್ರರ ವಿಷಬೀಜ ಬಿತ್ತಿದ್ದ ಪಾಕಿಸ್ತಾನಕ್ಕೆ ಈಗ ಅದೇ ಉಗ್ರರೇ ಕಂಟಕವಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment