ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಆಘಾತ.. ಲಾಹೋರ್​​ನಲ್ಲಿ ಭೀಕರ ಸರಣಿ ಸ್ಫೋಟ..

author-image
Veena Gangani
Updated On
ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಆಘಾತ.. ಲಾಹೋರ್​​ನಲ್ಲಿ ಭೀಕರ ಸರಣಿ ಸ್ಫೋಟ..
Advertisment
  • ಲಾಹೋರ್​ನಲ್ಲಿ ಒಂದಾದ ಮೇಲೆ ಒಂದರಂತೆ ಸರಣಿ ಸ್ಫೋಟ
  • ಆಪರೇಷನ್ ಸಿಂಧೂರದಿಂದ ತತ್ತರಿಸಿ ಹೋಗಿರೋ ಪಾಕಿಸ್ತಾನ
  • ಪಾಕಿಸ್ತಾನಕ್ಕೆ ಎದುರಾಯ್ತು ಭಾರೀ ಅನಾಹುತದ ಮುನ್ಸೂಚನೆ

ಇಸ್ಲಾಮಾಬಾದ್: ಆಪರೇಷನ್ ಸಿಂಧೂರದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ. ಲಾಹೋರ್​ನಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಭಾರೀ ಅನಾಹುತದ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ:ಪಾಕ್​ಗೆ ಮತ್ತೊಂದು ರೀತಿಯಲ್ಲಿ ಕೌಂಟರ್​.. ಆಪರೇಷನ್ ಸಿಂಧೂರ ಬಗ್ಗೆ ತಿಳಿಸಲು ಬಂದ ಈ ಅಧಿಕಾರಿಗಳು ಯಾರು?

ಹೌದು, ಲಾಹೋರ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿದ್ದು, ಸದ್ಯಕ್ಕೆ ಲಾಹೋರ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸ್ಫೋಟಗಳ ನಂತರ, ಲಾಹೋರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂಬ ಮಾಹಿತಿ ಬಂದಿದೆ. ಮತ್ತು ಸ್ಥಳೀಯ ಜನರಲ್ಲಿ ಭಯದ ವಾತಾವರಣ ಮನೆಮಾಡಿದೆ.


">May 8, 2025

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಒಂದಾದ ಮೇಲೆ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment