ತನ್ನ ಪ್ರಜೆಗಳನ್ನೇ ಸ್ವೀಕರಿಸದ ಪಾಕ್, ಗಡಿಯಲ್ಲಿ ಕಣ್ಣೀರು ಇಡುತ್ತ ಕೂತ ನಾಗರಿಕರು..!

author-image
Veena Gangani
Updated On
ತನ್ನ ಪ್ರಜೆಗಳನ್ನೇ ಸ್ವೀಕರಿಸದ ಪಾಕ್, ಗಡಿಯಲ್ಲಿ ಕಣ್ಣೀರು ಇಡುತ್ತ ಕೂತ ನಾಗರಿಕರು..!
Advertisment
  • ಕ್ಷಣ ಕ್ಷಣಕ್ಕೂ ಸ್ಥಳಗಳನ್ನ ಬದಲಾಯಿಸುತ್ತಿದ್ದಾರೆ ಉಗ್ರರು
  • ‘ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಹಾಕುತ್ತೇವೆ’
  • ತನ್ನ ಪ್ರಜೆಗಳನ್ನೇ ತಾನು ಸ್ವೀಕರಿಸದ ಪಾಪಿ ಪಾಕಿಸ್ತಾನ

ಪಹಲ್ಗಾಮ್​ನಲ್ಲಿ 26 ಮಂದಿ ಹಿಂದೂಗಳ ನರಮೇಧ ಮಾಡಿದ ಉಗ್ರರನ್ನು ಬೇಟೆಯಾಡಲು ಸೈನಿಕರು ಸಿಂಹಗಳಂತೆ ದಟ್ಟ ಕಾನನದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ವೇಳೆ ಅಮಿತ್ ಶಾ ಉಗ್ರರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಭಯೋತ್ಪಾದಕರನ್ನು ಸುಮ್ಮನೆ ಬಿಡಲ್ಲ ಅಂತ ಅವಾಜ್ ಹಾಕಿದ್ದಾರೆ.

publive-image

ಪಹಲ್ಗಾಮ್‌ನಲ್ಲಿ 26 ಹಿಂದೂಗಳ ನರಮೇಧ ನಡೆಸಿದ ಉಗ್ರರ ರುಂಡ ಚೆಂಡಾಡಲು ಭಾರತ ಸೇನೆ ಸಿದ್ಧವಾಗಿದೆ. ಇದಕ್ಕಾಗಿ ಕಣಿವೆ ರಾಜ್ಯದ ಕಾನನಗಳಲ್ಲಿ ಸೈನಿಕರು ಇನ್ನಿಲ್ಲದಂತೆ ರಕ್ತಪಿಪಾಸುಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಆದ್ರೆ ಕ್ಷಣ ಕ್ಷಣಕ್ಕೆ ಉಗ್ರರು ಸ್ಥಳ ಬದಲಾಯಿಸುತ್ತಿದ್ದಾರೆ. ಆದ್ರೂ ಛಲದಂಕಮಲ್ಲನಂತೆ ಯೋಧರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದನ್ನೂ ಓದಿ:ಭಾರತದ ಗಡಿಯಲ್ಲಿ ಸಂಪೂರ್ಣ ಗೋಧಿ ಕಟಾವು ಮುಗಿಸಿದ ರೈತರು; ಪಾಕ್‌ಗೆ ಮತ್ತೊಂದು ಸ್ಪಷ್ಟ ಸೂಚನೆ!

publive-image

ಅಲ್ಲದೇ ಭಾರತೀಯ ಸೇನೆ ಗಡಿಯಲ್ಲಿ ಸೇನಾ ವಾಹನಗಳನ್ನು ನಿಲ್ಲಸುತ್ತಿದ್ದಂತೆ ಪಾಕ್ ಪತರಗುಟ್ಟಿದೆ. ಸೇನೆಗೆ ಪರಮಾಧಿಕಾರ ಕೊಟ್ಟು ಪ್ರತೀಕಾರಕ್ಕೆ ಭಾರತ ಸಿದ್ಧತೆ ನಡೆಸಿರುವ ಹೊತ್ತಲ್ಲೇ ರಣಹೇಡಿ ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ರಕ್ಷಣೆಗಾಗಿ ಅಮೆರಿಕ ಹಾಗೂ ಚೀನಾ ಮೊರೆಹೋಗಿದೆ. ಆದ್ರೆ ಅಮೆರಿಕ ಸೊಪ್ಪು ಹಾಕದಿದ್ದಕ್ಕೆ ಮತ್ತಷ್ಟು ಕಂಗಾಲಾಗಿದೆ. ಸದ್ಯ ಅಖಾಡಕ್ಕೆ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು ಪಾಕ್​ಗೆ ಢವ ಢವ ಶುರುವಾಗಿದೆ.

ಕೇಂದ್ರ ಗೃಹ ಸಚಿವ ಉಗ್ರರಿಗೆ ಹಾಗೂ ಉಗ್ರರ ಪೋಷಕ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಒಬ್ಬ ಭಯೋತ್ಪಾದಕನನ್ನೂ ಬಿಡಲ್ಲ, ನುಗ್ಗಿ ಹೊಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಡುಗಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಉಗ್ರರನ್ನು ಸಂಹಾರ ಮಾಡುತ್ತೇವೆ ಎಂದು ಪ್ರತಿಜ್ಞೆಗೈದಿದ್ದಾರೆ. ಕೇಂದ್ರದಲ್ಲಿರುವುದು ಮೋದಿ ಸರ್ಕಾರ. ದೇಶದ ಪ್ರತಿ ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ. ಆ ಸಂಕಲ್ಪ ಈಡೇರುತ್ತದೆ ಅಂತಾನೂ ಶಂಖನಾದ ಮೊಳಗಿಸಿದ್ದಾರೆ.

publive-image

ಯಾರಾದರೂ ಹೇಡಿತನದ ದಾಳಿ ಮಾಡಿ ಅದು ತಮಗೆ ಸಿಕ್ಕಿದ ದೊಡ್ಡ ಗೆಲುವು ಎಂದು ಭಾವಿಸಿದರೆ ಒಂದು ವಿಷಯ ಅರ್ಥಮಾಡಿಕೊಳ್ಳಿ. ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಸರ್ಕಾರ. ಯಾರನ್ನೂ ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಮತ್ತು ಆ ಸಂಕಲ್ಪ ಈಡೇರುತ್ತದೆ.

ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತನ್ನ ಪ್ರಜೆಗಳನ್ನೇ ಸ್ವೀಕರಿಸದ ಪಾಕ್, ಭಾರತ ಬಿಡಲು ಗಡುವು ವಿಸ್ತರಣೆ
ಇನ್ನು, ಪರಮಪಾಪಿ ಪಾಕಿಸ್ತಾನಕ್ಕೆ ತನ್ನದೇ ಪ್ರಜೆಗಳೇ ಬೇಡವಾಗಿದೆ. ಪಾಕ್​ ನಾಗರಿಕರನ್ನು ಭಾರತ ಕಳಿಸಿದ್ರೂ ಅವರನ್ನ ಪಾಕ್​ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅನೇಕ ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ಪ್ರವೇಶಿಸಲು ವಾಘಾ-ಅಟ್ಟಾರಿ ಗಡಿ ತಲುಪಿದ್ದಾರೆ. ಆದರೂ ಪಾಕ್ ಸರ್ಕಾರ ಅವರನ್ನು ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿಸುತ್ತಿಲ್ಲ. ಹೀಗಾಗಿ ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ತೆರಳುವ ದಿನಾಂಕವನ್ನು ಭಾರತ ಸರ್ಕಾರ ವಿಸ್ತರಿಸಿದೆ.

publive-image

ಭಾರತದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿ ನಾಗರಿಕರ ವಿನಂತಿ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಭಾರತ ಗಡುವನ್ನು ವಿಸ್ತರಿಸಿದೆ. ಮುಂದಿನ ಆದೇಶ ಬರುವವರೆಗೆ ಅವಧಿ ವಿಸ್ತರಿಸಲಾಗಿದೆ.
ಒಟ್ಟಾರೆ 26 ಹಿಂದೂಗಳ ನರಮೇಧ ನಡೆಸಿದ ಉಗ್ರರನ್ನು ಸುಮ್ಮನೆ ಬಿಡಲ್ಲ. ಅಲ್ಲದೇ ಭಯೋತ್ಪಾದನೆ ಬೆಂಬಲಿಸುವವರನ್ನೂ ಹೊಡೆಯುತ್ತೇವೆ ಅಂತ ಅಮಿತ್ ಶಾ ಗುಡುಗಿದ್ದಾರೆ. ಮೊದಲೇ ಭಾರತ ದಾಳಿಯ ಭಯದಲ್ಲಿರುವ ಪಾಕಿಸ್ತಾನ ಇದರಿಂದ ಮತ್ತಷ್ಟು ಪತರಗುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment