/newsfirstlive-kannada/media/post_attachments/wp-content/uploads/2023/09/IND-vs-PAK.png)
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಾಳೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಪಾಕಿಸ್ತಾನ ದೂರುಗಳನ್ನು ಹೊತ್ತು ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಮೊರೆ ಹೋಗಿದೆ.
ಆಗಿದ್ದೇನು..?
ಫೆಬ್ರವರಿ 20 ರಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯದ ನೇರ ಪ್ರಸಾರದ ವೇಳೆ ಟಿವಿ ಮತ್ತು ಆ್ಯಪ್ನಲ್ಲಿ ಪಾಕಿಸ್ತಾನದ ಹೆಸರು ಇಲ್ಲದಿರೋದಕ್ಕೆ ಕಿಡಿಕಾರಿದೆ. ಉಳಿದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನೇರ ಪ್ರಸಾರದ ವೇಳೆ ‘ಚಾಂಪಿಯನ್ಸ್ ಟ್ರೋಫಿ-2025 ಪಾಕಿಸ್ತಾನ’ ಎಂದು ಬರೆಯಲಾಗಿತ್ತು. ಆದರೆ ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ‘ಚಾಂಪಿಯನ್ಸ್ ಟ್ರೋಫಿ-2025’ ಎಂದಷ್ಟೇ ಬರೆಯಲಾಗಿತ್ತು.
ಇದರಿಂದ ಕೋಪಿಸಿಕೊಂಡಿರುವ ಪಿಸಿಬಿ, ಅದರ ಬಗ್ಗೆ ವಿವರಣೆ ಕೇಳಿದೆ. ಅಲ್ಲದೇ ಐಸಿಸಿಗೆ ದೂರು ನೀಡಿರುವ ಪಾಕ್, ಮುಂದಿನ ಪಂದ್ಯಗಳಲ್ಲಿ ಕಡ್ಡಾಯವಾಗಿ ಪಾಕಿಸ್ತಾನದ ಹೆಸರು ಇರುವಂತೆ ಆಶ್ವಾಸನೆ ಪಡೆದುಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: Champions Trophy; ತಂಡ ಸೇಫ್ ಆಗಿರಬೇಕು ಎಂದ್ರೆ ಕೊಹ್ಲಿ, ರೋಹಿತ್ ಹೀಗೆ ಮಾಡಬಾರದು!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್