/newsfirstlive-kannada/media/post_attachments/wp-content/uploads/2023/08/KOHLI_VS_PAK.jpg)
ಇಂಡೋ, ಪಾಕ್ ಹೈವೋಲ್ಟೇಜ್ ಮ್ಯಾಚ್ಗೆ 6 ದಿನ ಬಾಕಿಯಿದೆ. ಫ್ಯಾನ್ಸ್ ಎದೆಯಲ್ಲಿ ಮಾತ್ರ ಈಗಾಗಲೇ ಢವಢವ ಶುರುವಾಗಿದೆ. ಅಭಿಮಾನಿಗಳು ಗೆಲುವಿನ ಜಪ ಮಾಡ್ತಿದ್ದಾರೆ. ಆನ್ ಫೀಲ್ಡ್ ಬ್ಯಾಟಲ್ಗೂ ಮುನ್ನ ಆಫ್ ದಿ ಫೀಲ್ಡ್ನಲ್ಲಿ ನಡೆಯುತ್ತಿರುವ ವಾಗ್ಬಾಣಗಳು ಪಂದ್ಯದ ಕಾವು ಹೆಚ್ಚಿಸ್ತಿವೆ. ಇದರ ನಡುವೆ ಪಾಕ್ ಅಭಿಮಾನಿಗಳು ನೀಡಿರುವ ಒಂದು ಕರೆ, ಇಂಡೋ ಪಾಕ್ ಪಂದ್ಯದ ರಂಗನ್ನ ಮತ್ತಷ್ಟು ಹೆಚ್ಚಿಸಿದೆ.
ಆಟಗಾರರಿಗೆ ಫ್ಯಾನ್ಸ್ ವಾರ್ನಿಂಗ್
ಇಂಡೋ ಪಾಕ್ ಮ್ಯಾಚ್ಗೆ ಕ್ರಿಕೆಟ್ ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಪಾಕ್ ಅಭಿಮಾನಿಗಳು ಮಾತ್ರ, ಟೀಮ್ ಇಂಡಿಯಾ ಎದುರು ಸಿಟ್ಟಿಗೆ ಬಿದಿದ್ದಾರೆ. ಬಿಸಿಸಿಐ, ಪಾಕ್ಗೆ ತೆರಳದ ಬಗ್ಗೆ ಅಸಮಾಧಾನಗೊಂಡಿರುವ ಪಾಕ್ ಫ್ಯಾನ್ಸ್, ಪಾಕ್ ತಂಡದ ಆಟಗಾರರಿಗೆ ಖಡಕ್ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕೊಹ್ಲಿ ಹಾಗೂ ಟೀಮ್ ಇಂಡಿಯಾ ಆಟಗಾರರನ್ನ ಅಪ್ಪಿಕೊಳ್ಳದಂತೆ ಎಚ್ಚರಿಸಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲ. ಪಾಕ್ ಆಟಗಾರರ ಸ್ನೇಹದ ಬಗ್ಗೆ ಮಾಜಿ ಆಟಗಾರ ಮೊಯಿನ್ ಖಾನ್ ಸಹ ಕೆಂಡಕಾರಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಜೊತೆ ಸ್ನೇಹ ಬೆಳಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ICC ನಿಯಮ ದಿಕ್ಕರಿಸಿ ಪಿಸಿಬಿ ವಿವಾದ; IND vs PAK ಪಂದ್ಯ ಬಗ್ಗೆ ಪಾಕ್ ಪ್ರಧಾನಿ ತನ್ನ ಆಟಗಾರರಿಗೆ ಏನಂದ್ರು?
ಫ್ರೆಂಡ್ಲಿ ಆಗಿರುವುದು ಸರಿಯಲ್ಲ
ಭಾರತೀಯ ಆಟಗಾರರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಮೈದಾನದಲ್ಲಿ ಅವರೊಂದಿಗೆ ಫ್ರೆಂಡ್ಲಿ ಆಗಿರುವುದು ಸರಿಯಲ್ಲ. ಏಕೆಂದರೆ ಕ್ರಿಕೆಟ್ನಲ್ಲಿ ಪೈಪೋಟಿ ಇದ್ದರೆ ಮಾತ್ರ ಗೆಲ್ಲುವ ಹುಮ್ಮಸ್ಸು ಇರುತ್ತದೆ. ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಬಂದಾಗಲೆಲ್ಲ ಪಾಕ್ ಆಟಗಾರರ ಹೆಗಲು ತಟ್ಟಿ ಮಾತನಾಡುತ್ತಾರೆ. ಇಲ್ಲಿ ನಾವು ಎದುರಾಳಿ ಆಟಗಾರರಾಗಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬೇಕು-ಮೊಯಿನ್ ಖಾನ್, ಮಾಜಿ ಆಟಗಾರ
ಇತ್ತಿಚೆಗೆ ನಡೆದ ಐಸಿಸಿ ಈವೆಂಟ್ಸ್ಗಳಲ್ಲಿ ಸ್ಲೆಡ್ಜಿಂಗ್, ಆಟಗಾರರ ಟಾಕ್ವಾರ್ಗಿಂತ ಉಭಯ ತಂಡಗಳ ಆಟಗಾರರ ಸ್ನೇಹವೇ ಹೆಚ್ಚಾಗಿ ಕಾಣ್ತಿತ್ತು. ಪರಸ್ಪರ ಉಭಯ ಕುಶಲೋಪರಿ ವಿಚಾರಿಸುತ್ತ, ಬಹುಮಾನಗಳನ್ನು ನೀಡುತ್ತ ಇಂಡೋ, ಪಾಕ್ ಬ್ಯಾಟಲ್ಗೆ ಫ್ರೆಂಡ್ಶಿಪ್ ಟಚ್ ನೀಡಿದ್ರು.
ಇದನ್ನೂ ಓದಿ: ಯಾವ ದೇಶದಲ್ಲಿ ಅತಿಹೆಚ್ಚು ದೀರ್ಘಾಯುಷಿಗಳು ಇದ್ದಾರೆ; ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್