newsfirstkannada.com

ಶೋಯೆಬ್​ ಮಲಿಕ್​ನ 2ನೇ ಪತ್ನಿ ಸನಾ ಜಾವೇದ್ ಯಾರು..? ಇವರ ಮೂಲ ಭಾರತದ ಹೈದರಾಬಾದ್..!

Share :

Published January 20, 2024 at 1:14pm

  ಸಾನಿಯಾ ಮಿರ್ಜಾಗೆ ಕೈಕೊಟ್ಟು ಪಾಕ್​ ನಟಿಯ ಕೈ ಹಿಡಿದ ಮಲಿಕ್

  ಸನಾ ಜಾವೇದ್ ಮೂಲ ಯಾವುದು.. ಇವರ ಎಜುಕೇಶನ್ ಏನು..?

  ಕ್ರಿಕೆಟರ್​ನನ್ನ ಮದುವೆಯಾದ ಸನಾಳಿಗೆ ಈ ಮೊದಲೇ ಮದುವೆ ಆಗಿತ್ತಾ?

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಪತಿ ಪಾಕ್​ನ ಮಾಜಿ ಕ್ರಿಕೆಟರ್ ಶೋಯೆಬ್ ಮಲಿಕ್ ಇದೀಗ ಮತ್ತೊಂದು ಮದುವೆಯಾಗಿದ್ದಾರೆ. ಸದ್ಯ ಶೋಯೆಬ್ ಮಲಿಕ್ ಮತ್ತು ಅವರ 2ನೇ ಪತ್ನಿ ಪಾಕ್​ನ ಜನಪ್ರಿಯ ನಟಿ ಸನಾ ಜಾವೇದ್ ವಿವಾಹದ ಫೋಟೋಗಳು ವೈರಲ್ ಆಗಿವೆ. ಇಷ್ಟಕ್ಕೂ ಈ ಸನಾ ಜಾವೇದ್ ಯಾರು?

ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ 2ನೇ ಮದುವೆಯಾಗಿರುವ ಸನಾ ಜಾವೇದ್ ಪಾಕ್​ನ ಸೀರಿಯಲ್​, ಸಿನಿಮಾಗಳಲ್ಲಿ ಅಭಿನಯಿಸುವ ಜನಪ್ರಿಯ ನಟಿ. ಹೀಗಾಗಿಯೇ ಇವರಿಗೆ ಪಾಕ್​ನಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಈ ನಟಿಯ ಮೂಲ ಬಂದು ಹೈದರಾಬಾದ್ ಎಂದು ಹೇಳಲಾಗುತ್ತಿದ್ದು, ಭಾರತದಿಂದ ಸೌದಿ ಅರೇಬಿಯಾಕ್ಕೆ ವಲಸೆ ಹೋಗಿ ನಂತರ ದಿನಗಳಲ್ಲಿ ಪಾಕ್​ನಲ್ಲಿ ನೆಲಸಿದ್ದಾರೆ ಎನ್ನಲಾಗುತ್ತಿದೆ.

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪಾಕಿಸ್ತಾನದ ದಂಪತಿಗೆ ಜನನ

ಸನಾ ಜಾವೇದ್ 1993 ಜೂನ್ 6 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪಾಕಿಸ್ತಾನ ದಂಪತಿಗೆ ಜನಿಸಿದರು. ಜೆಡ್ಡಾದಲ್ಲೇ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಾಲಾ, ಕಾಲೇಜ್ ಪೂರ್ಣಗೊಳಿಸಿದರು. ಇದರ ಬಳಿಕ ದಂಪತಿ ಮಗಳ ವಿದ್ಯಾಭ್ಯಾಸಕ್ಕಾಗಿ ಪಾಕ್​ನ ಕರಾಚಿಗೆ ಬಂದು ನೆಲಸಿದರು. ಕರಾಚಿ ವಿಶ್ವವಿದ್ಯಾಲಯದಿಂದ ಸನಾ ಜಾವೇದ್ ಪದವಿ ಪಡೆದರು ಎಂದು ಹೇಳಲಾಗಿದೆ.

ಸೀರಿಯಲ್​ನಲ್ಲಿ ಅಭಿನಯ

ಮಾಡೆಲಿಂಗ್ ಆಗಿದ್ದ ಸನಾ ಅವರು ದೂರದರ್ಶನದ ಜಾಹೀರಾತುಗಳಲ್ಲಿ ಮೊದಲು ಕಾಣಿಸಿಕೊಂಡರು. ಇದಾದ ಬಳಿಕ 2012ರಲ್ಲಿ ಮೇರಾ ಪೆಹ್ಲಾ ಪ್ಯಾರ್‌ನಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು. ಇದರಲ್ಲಿ ಸಕ್ಸಸ್​ ಆದ ತಕ್ಷಣ ಅದೇ ವರ್ಷದಲ್ಲಿ ಶೆಹರ್-ಎ-ಝಾತ್‌ನಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದರು. 2016ರಲ್ಲಿ ಜರಾ ಯಾದ್ ಕರ್‌ ಟಿವಿ ಶೋನಲ್ಲಿ ನಟಿಸಿ ಜಾಹಿದ್ ಅಹ್ಮದ್ ಮತ್ತು ಯುಮ್ನಾ ಜೈದಿ ಎದುರು ಪ್ರತಿಸ್ಪರ್ಧಿ ಪಾತ್ರದಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದರು.

ಪಾಕ್ ಸಿನಿಮಾರಂಗಕ್ಕೆ ಎಂಟ್ರಿ

ಇದಾದ ಬಳಿಕ ಅವರಿಗೆ ಸಿನಿಮಾ ಆಫರ್​ಗಳು ಬರಲು ಶುರುವಾದವು. ಹೀಗಾಗಿ 2017ರಲ್ಲಿ ಮೆಹರುನಿಸಾ ವಿ ಲಬ್ ಯು ಎನ್ನುವ ಕಾಮಿಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಡೆಬ್ಯೂ ಮಾಡಿದರು. ಜಾವೇದ್ ಬಿಲಾಲ್ ಅಶ್ರಫ್ ಅವರೊಂದಿಗೆ ರಂಗ್ರೇಜಾ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದರು. ಖಾನಿ ಎನ್ನುವ ಸಿನಿಮಾದಲ್ಲೂ ಅಭಿನಯ ಮಾಡಿ ಮೆಚ್ಚುಗೆಗೆ ಪಾತ್ರರಾದರು. 2020ರಲ್ಲಿ ಡಂಕ್ ಸೀರಿಯಲ್​ನಲ್ಲಿ ಅಭಿನಯಿಸಿದ್ದು ಪಾಕ್​ನಲ್ಲಿ ಹೆಚ್ಚು ಸದ್ದು ಮಾಡಿದೆ.

ಸನಾ ಜಾವೇದ್ ಮೊದಲ ವಿವಾಹ

ಸನಾ ಜಾವೇದ್ 2020ರ ಅಕ್ಟೋಬರ್​​ನಲ್ಲಿ ಪಾಕ್​ನ ಸಿಂಗರ್, ಆ್ಯಕ್ಟರ್, ಉಮೈರ್ ಜಸ್ವಾಲ್​ರನ್ನ ಕರಾಚಿಯಲ್ಲಿ ಅದ್ಧೂರಿಯಾಗಿ ಮದುವೆಯಾದರು. ಇವರಿಬ್ಬರು ಮದುವೆಯಾದ ಬಳಿಕ ಇಬ್ಬರ ನಡುವಿನ ಸಂಬಂಧ ಹಳಸಿತ್ತು ಎಂದು ಹೇಳಲಾಗುತ್ತಿತ್ತು. ಹೀಗಾಗಿ ಇಬ್ಬರ ಮಧ್ಯೆ ಸಾಕಷ್ಟು ವೈಮನಸ್ಸುಗಳು ಮೂಡಿ ಬೇರೆ ಬೇರೆಯಾಗಿದ್ದರು. ಇದಾದ ಮೇಲೆ ಸದ್ಯ ಇದೀಗ ನಟಿ ಸನಾ ಜಾವೇದ್ ಪಾಕ್​ನ ಸ್ಟಾರ್ ಮಾಜಿ ಕ್ರಿಕೆಟರ್​ ಶೋಯೆಬ್ ಮಲಿಕ್​ರನ್ನು 2ನೇ ವಿವಾಹವಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೋಯೆಬ್​ ಮಲಿಕ್​ನ 2ನೇ ಪತ್ನಿ ಸನಾ ಜಾವೇದ್ ಯಾರು..? ಇವರ ಮೂಲ ಭಾರತದ ಹೈದರಾಬಾದ್..!

https://newsfirstlive.com/wp-content/uploads/2024/01/SANA_JAVEDH.jpg

Load More