/newsfirstlive-kannada/media/post_attachments/wp-content/uploads/2025/04/pakistan-flood-emergency.jpg)
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಅಮಾನತು ಮಾಡಿದೆ. ಭಾರತದ ಈ ‘ಜಲ’ಯುದ್ಧ ಆರಂಭಿಸಿದ್ದಕ್ಕೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.
ಸಿಂಧೂ ಒಪ್ಪಂದ ಅಮಾನತು ಜೊತೆಗೆ ಭಾರತ, ಪಾಕಿಸ್ತಾನಕ್ಕೆ ಝೇಲಂ ನದಿಯ ನೀರು ಬಿಡುಗಡೆ ಮಾಡಿದೆ. ಭಾರತ ಏಕಾಏಕಿ ನೀರು ಬಿಟ್ಟಿದ್ದರಿಂದ ಮುಜಾಫರಾಬಾದ್ ಭಾಗದಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.
1992ರಲ್ಲಿ ಈ ರೀತಿ ದೊಡ್ಡ ಪ್ರಮಾಣದ ನೀರು ಬಿಡುಗಡೆ ಮಾಡಿತ್ತು. ಇದೀಗ ಯಾವುದೇ ಸೂಚನೆ ನೀಡದೇ ಭಾರತ ಝೇಲಂ ನದಿ ನೀರನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ ಎಂದು ಜನರು ಹೇಳುತ್ತಿದ್ದಾರೆ. ಪಾಕಿಸ್ತಾನದ ಮುಜಾಫರಾಬಾದ್ ಭಾಗದ ಜನರಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲೂ ಬ್ರೇಕಿಂಗ್ ನ್ಯೂಸ್ ಆದ ಸಿಎಂ ಸಿದ್ದರಾಮಯ್ಯ ಹೇಳಿಕೆ; ವಿಡಿಯೋ ಫುಲ್ ವೈರಲ್!
ಭಾರತ ಉರಿ ಡ್ಯಾಂನಿಂದ ಝೇಲಂ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡಿದೆ. ಈ ಭಾರೀ ಪ್ರಮಾಣದ ನೀರು ಬಿಡುಗಡೆಗೆ ಪಾಕ್ ಕಂಗಾಲಾಗಿದೆ. ಮುಜಾಫರ್ ಬಾದ್ ಸೇರಿ ಹಲವೆಡೆ ಭಾರೀ ಪ್ರಮಾಣದ ನೀರು ಬರ್ತಿರೋದು ಜನರಿಗೆ ಭೀತಿ ತಂದಿದೆ. ಮುಜಾಫರ್ ಬಾದ್ನಲ್ಲಿ ಅಲರ್ಟ್ ನೀಡುವ ಜೊತೆಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಭಾರತದಲ್ಲಿ ಹುಟ್ಟುವ ಝೇಲಂ ನದಿ ಕಾಶ್ಮೀರ ಮಾರ್ಗವಾಗಿ ಪಾಕಿಸ್ತಾನಕ್ಕೆ ಹರಿಯುತ್ತದೆ. ಉರಿ ಡ್ಯಾಂನಿಂದ ಝೇಲಂಗೆ ಹೆಚ್ಚು ಪ್ರಮಾಣದ ನೀರು ರಿಲೀಸ್ ಆಗಿದೆ. ಈ ಭಾರೀ ಪ್ರಮಾಣದ ನೀರು ಹರಿದು ಬರ್ತಿರೋದ್ರಿಂದ ಪಾಕ್‌ಗೆ ಟೆನ್ಷನ್ ಹೆಚ್ಚಾಗಿದೆ.
ಮುಜಾಫರ್ ಬಾದ್ ಸೇರಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಜನರಿಗೆ ಪ್ರವಾಹದ ಜೊತೆಗೆ ಭಾರೀ ಪ್ರಮಾಣದ ಬೆಳೆ ನಷ್ಟವಾಗೋ ಭೀತಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ