/newsfirstlive-kannada/media/post_attachments/wp-content/uploads/2025/05/CHINA-INDIA.jpg)
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಬಿಕ್ಕಟ್ಟು ಮತ್ತೊಂದು ಲೇವೆಲ್ಗೆ ಹೋಗ್ತಿದೆ. ಎರಡೂ ದೇಶಗಳ ನಡುವಿನ ಘೋರ ಸಂಘರ್ಷ ದೊಡ್ಡ ಅಪಾಯದ ಸೂಚನೆ ನೀಡುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಆಪ್ತಮಿತ್ರ ಚೀನಾ, ಶಾಂತಿಯ ಮಂತ್ರವನ್ನು ರವಾನಿಸಿದೆ. ಹಿಂದಿನಿಂದ ಪಾಕಿಸ್ತಾನವನ್ನು ಛೂ ಬಿಟ್ಟು ಭಾರತದ ವಿರುದ್ಧ ಕತ್ತಿ ಮಸೆಯುವ ಬುದ್ಧಿ ಚೀನಾದ್ದು. ಇದು, ಡ್ರ್ಯಾಗನ್ ದೇಶದ ನಿನ್ನೆ-ಮೊನ್ನೆಯ ಕತೆಯಲ್ಲ! ತನ್ನ ಬೆನ್ನ ಹಿಂದೆ ಚೀನಾ ಇದೆ. ಏನೇ ಮಾಡಿದರೂ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ನರಿಬುದ್ದಿ ತೋರಿಸುವ ಪಾಕಿಸ್ತಾನ, ಆಗಾಗ ಸ್ನೇಹಿತನ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕುತ್ತಿದೆ.
ಪಹಲ್ಗಾಮ್ ದಾಳಿಯ ನಂತರ ಆಗಿದ್ದೂ ಅದೇ. ಪಹಲ್ಗಾಮ್ನಲ್ಲಿ ಉಗ್ರರು 26 ಅಮಾಯಕ ಪ್ರವಾಸಿಗರ ಹಣೆಗೆ ಗುಂಡಿಟ್ಟು ಪೈಶಾಚಿಕ ಕೃತ್ಯ ಮೆರೆದರು. ನಂತರದ ಬೆಳವಣಿಗೆಯಲ್ಲಿ ಎನ್ಐಎ ಅಲ್ಲಿಗೆ ಭೇಟಿ ನೀಡಿತ್ತು. ತನಿಖೆಯಲ್ಲಿ ಉಗ್ರರು ಕೃತ್ಯ ನಡೆಸಲು ಚೀನಾದ Covert Device ಗಳನ್ನು ಬಳಸಿರೋದು ಸಾಬೀತಾಯಿತು. ಈ ಡಿವೈಸ್ಗಳನ್ನು ಉಗ್ರರು ಪಾಕಿಸ್ತಾನಿ ಸೇನೆಯಿಂದ ಪಡೆದುಕೊಂಡಿದ್ದಾರೆ ಎಂಬ ಮಾತಿದೆ.
ಇದನ್ನೂ ಓದಿ: ಪಾಕ್ಗೆ ಮೊಗೆ ಮೊಗೆದು ಅಸ್ತ್ರಗಳ ಕೊಟ್ಟು, ಈಗ ಭಾರತಕ್ಕೆ ಬಿಟ್ಟಿ ಸಲಹೆ ರವಾನಿಸಿದ ಚೀನಾ..!
ಇನ್ನು, ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದತ್ತ ಬೊಟ್ಟು ಮಾಡಿದಾಗ ಉಗ್ರ ಪೋಷಕ ಪಾಕ್, ಹಿಂದೂಸ್ತಾನ್ ಮೇಲೆ ಅಣ್ವಸ್ತ್ರ ದಾಳಿಯ ಬೆದರಿಕೆ ಹಾಕಿತು. ಮೊಂಡು ಬೆದರಿಕೆಗೆ ಬಗ್ಗದ ಭಾರತ, ಆಪರೇಷನ್ ಸಿಂಧೂರ್ ಮೂಲಕ ಉಗ್ರರಿಗೆ ಪಾಠ ಕಲಿಸಿತು. ಇದರಿಂದ ಕೆರಳಿದ ಪಾಕಿಸ್ತಾನ, ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡು ಚೀನಾ ನೀಡಿದ ಅಸ್ತ್ರಗಳನ್ನು ಪ್ರಯೋಗಿಸಿತು.
ಪಾಕ್ಗೆ ವರವಾಗಲಿಲ್ಲ
ಆದರೆ ಇಲ್ಲಿ, ಚೀನಾದ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳು ಪಾಕಿಸ್ತಾನದ ಪಾಲಿಗೆ ವರವಾಗಲಿಲ್ಲ. ಬದಲಾಗಿ ಶಾಪ ಆಗ್ತಿವೆ. ಆಪರೇಷನ್ ಸಿಂಧೂರ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಪಠಾಣ್ಕೋಟ್ ವಾಯುನೆಲೆ ಗುರಿಯಾಗಿಸಿ ಚೀನಾ ನೀಡಿದ್ದ ಕ್ಷಿಪಣಿಗಳನ್ನು ಭಾರತದತ್ತ ಬಿಟ್ಟಿತ್ತು. ಆದರೆ ಭಾರತದ ಸುದರ್ಶನ್ ಅಸ್ತ್ರ ಎಸ್-400, ಸುಲಭವಾಗಿ ಹೊಡೆದು ಹಾಕಿತು. ಅಮೃತಸರದ ಬಳಿ ಪುಡಿಪುಡಿಯಾಗಿ ಬಿದ್ದಿದ್ದ ಮಿಸೈಲ್ನ ಪರಿಶೀಲಿಸಿದಾಗ ಅದು ಚೀನಾ ನಿರ್ಮಿತ ಕ್ಷಿಪಣಿ ಅನ್ನೋದು ಸಾಬೀತಾಯಿತು. ಅಂದರೆ ಭಾರತದ ಅಸ್ತ್ರದ ಮುಂದೆ ಚೀನಾದ ಕ್ಷಿಪಣಿ ಇಲ್ಲಿ ಕೆಲಸ ಮಾಡಲೇ ಇಲ್ಲ.
ಪ್ರತೀಕಾರದ ದಾಳಿಯಾಗಿ ನಿನ್ನೆ ಪಾಕಿಸ್ತಾನದ ಮೇಲೆ ಭಾರತ ಡ್ರೋಣ್ಗಳನ್ನು ಉಡಾಯಿಸಿತು. ಡ್ರೋಣ್ ದಾಳಿಯ ಮೂಲಕ ಪಾಕಿಸ್ತಾನದ ಪ್ರಮುಖ ಮಿಲಿಟರಿ ಬೇಸ್ಗಳನ್ನು ಭಾರತ ಧ್ವಂಸ ಮಾಡಿತು. ವಿಶೇಷ ಅಂದರೆ ಚೀನಾ ನೀಡಿದ್ದ ಏರ್ ಡಿಫೆನ್ಸ್ ಸಿಸ್ಟಮ್ HQ9 ಕೂಡ ಚಿಂದಿಚಿಂದಿಯಾಗಿದೆ. ಲಾಹೋರ್ನಲ್ಲಿ ಇನ್ಸ್ಟಾಲ್ ಆಗಿದ್ದ ಚೀನಾದ HQ9 ಸಿಸ್ಟಮ್ಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಪರಿಣಾಮ ಲಾಹೋರ್ ‘ಭದ್ರತೆಯ ನಿಯಂತ್ರಣ’ ಕಳೆದುಕೊಂಡಿದೆ. ಲಾಹೋರ್ ಭದ್ರತೆಗೆ ಈಗ ಯಾವುದೇ ಕಂಟ್ರೋಲ್ ಇಲ್ಲ. ಆ ಮೂಲಕ ಚೀನಾಗೂ ಇಲ್ಲಿ ದೊಡ್ಡ ಮುಖಭಂಗವಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತ; AWACS ಛಿದ್ರಛಿದ್ರ.. ಏನಿದು..?
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನ ಸಂಜೆ ವೇಳೆಗೆ ಭಾರತದತ್ತ ಕಾಲ್ಕೆದರಿ ಯುದ್ಧಕ್ಕೆ ಬರುವ ಸೂಚನೆ ನೀಡಿತ್ತು. ಚೀನಾ ಕೊಟ್ಟಿದ್ದ ಕ್ಷಿಪಣಿಗಳನ್ನು ಭಾರತದ ಮೇಲೆ ಉಡಾಯಿಸಿತ್ತು. ಆ ಎಲ್ಲಾ ಕ್ಷಿಪಣಿಗಳನ್ನು ಎಸ್-400 ಭಾರತದ ಗಡಿ ದಾಟದಂತೆ ನೋಡಿಕೊಂಡಿದ್ದು ಮಾತ್ರವಲ್ಲದೇ, ಆಕಾಶದಲ್ಲೇ ಅವುಗಳನ್ನ ನಿರ್ಮಾಮ ಮಾಡಿತು.
ಮಾತ್ರವಲ್ಲ, ಪಾಕಿಸ್ತಾನಕ್ಕೆ ಚೀನಾ ನೀಡಿದ್ದ ಯುದ್ಧ ವಿಮಾನಗಳು ಭಾರತದತ್ತ ನುಗ್ಗಿದ್ದವು. ಅವುಗಳನ್ನ ಚಕ-ಚಕನೆ ಹೊಡೆದುರುಳಿಸಿ ಸೇನೆ ಪರಾಕ್ರಮ ಮೆರೆದಿದೆ. ಪಾಕಿಸ್ತಾನ ಮತ್ತು ಚೀನಾ ಇಬ್ಬರು ಸೇರಿ ಅಭಿವೃದ್ಧಿಪಡಿಸಿದ್ದ JF 17 ಯುದ್ಧ ವಿಮಾನಗಳನ್ನು ಹೊಡೆದು ಹಾಕಿದೆ ನಮ್ಮ ಸೇನೆ. ಪಾಕಿಸ್ತಾನದಿಂದ ಬಂದಿದ್ದ 50 ಮಿಸೈಲ್ಗಳು, 60 ಡ್ರೋಣ್ಗಳನ್ನೂ ಫಿನಿಶ್ ಮಾಡಲಾಗಿದೆ.
ಹಾಗೆ ನೋಡಿದ್ರೆ ಪಾಕ್ ಬತ್ತಳಿಕೆಯಲ್ಲಿ ಮಿಸೈಲ್ಗಳು, ಡ್ರೋಣ್ಗಳು ಇರೋದಕ್ಕೆ ಪ್ರಮುಖ ಕಾರಣವೇ ಚೀನಾ. ಚೀನಾ-ಪಾಕಿಸ್ತಾನ ಸೇರಿ ನಿರ್ಮಿಸಿದ ಡ್ರೋಣ್ ಮತ್ತು ಮಿಸೈಲ್ಗಳೇ ಪಾಕ್ನಲ್ಲಿ ಹೆಚ್ಚಿವೆ. ನಮ್ಮ ಬಳಿ ಚೀನಾದ ವೆಪನ್ಸ್ಗಳಿವೆ ಎಂದು ಭಾರತದತ್ತ ನುಗ್ಗಿಸಿ ಪಾಕ್, ತನ್ನ ಮರ್ಯಾದೆ ಕಳೆದುಕೊಳ್ಳುವುದರ ಜೊತೆಗೆ, ಚೀನಾಗೂ ಸೇಫ್ಔಟ್ ಮಾಡ್ತಿದೆ. ಅಲ್ಲದೇ ಅನೇಕ ಬಾರಿ ಉಗ್ರರ ಕಾರ್ಯಾಚಣೆ ವೇಳೆ ಸಿಕ್ಕಿರೋ ಅಸ್ತ್ರಗಳೆಲ್ಲ ಪಾಕಿಸ್ತಾನ ಮತ್ತು ಚೀನಾ ಮೂಲದ್ದಾಗಿವೆ.
ಇದನ್ನೂ ಓದಿ: 3 ಯುದ್ಧ ವಿಮಾನ, 50 ಮಿಸೈಲ್ ಢಮಾರ್.. ಪಾಕಿಸ್ತಾನ ನಿನ್ನೆ ಏನೆಲ್ಲ ಕಳೆದುಕೊಂಡಿತು..?
ಶೇಕಡಾ 81 ರಷ್ಟು ಪಾಕ್ಗೆ ಪೂರೈಕೆ..!
ಎಸ್ಐಪಿಆರ್ಐ (Stockholm International Peace Research Institute) ವರದಿ ಪ್ರಕಾರ, ಪಾಕಿಸ್ತಾನಕ್ಕೆ ಚೀನಾ ಶೇಕಡಾ 81 ರಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡ್ತಿದೆ. ಪಾಕ್ಗೆ ಬೇಕಾಗಿರುವ ಮಿಲಿಟರಿ ಹಾರ್ಡ್ವೇರ್ಗಳನ್ನ ಪೂರೈಕೆ ಮಾಡೋದೇ ಚೀನಾ. ಉಳಿದಂತೆ ನೆದರ್ಲೆಂಡ್ ಶೇಕಡಾ 5.5 ರಷ್ಟು ಮಿಲಿಟರಿ ಅಸ್ತ್ರಗಳನ್ನ ನೀಡಿದ್ರೆ, ಮತ್ತೊಬ್ಬ ಸ್ನೇಹಿತ ಟರ್ಕಿ ಶೇಕಡಾ 3.5 ರಷ್ಟು ಶಸ್ತ್ರಾಸ್ತ್ರಗಳನ್ನ ನೀಡತ್ತಿದೆ.
ಚೀನಾ ಪಾಕ್ಗೆ ಏನೆಲ್ಲ ನೀಡ್ತಿದೆ..?
2019-2023 ಅವಧಿಯಲ್ಲಿ ಪಾಕಿಸ್ತಾನವು ಚೀನಾದಿಂದ ಶೇಕಡಾ 60 ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಚೀನಾ-ಪಾಕಿಸ್ತಾನ ಮಿಲಿಟರಿ ಕೋ-ಆಪರೇಷನ್ ಅಡಿಯಲ್ಲಿ ಪಾಕ್ಗೆ JF-17 ಥಂಡರ್ ಫೈಟರ್ ಜೆಟ್ಗಳನ್ನು ನೀಡಿದೆ. 2015ರಲ್ಲಿ 8 Type-041 Yuan-class ಯುದ್ಧ ಹಡಗುಗಳನ್ನು ಪಡೆದಿದೆ. ಪಾಕಿಸ್ತಾನದಲ್ಲಿರೋ SH-15 155mm ಗನ್ಗಳು ಕೂಡ ಚೀನಾದ್ದೇ ಆಗಿದೆ.
ಇನ್ನು ಪಹಲ್ಗಾಮ್ ದಾಳಿ ಬಳಿಕ ನಡೆದ ಬೆಳವಣಿಗೆ ಗಮನಿಸಿದ ಚೀನಾ ತರಾತುರಿಯಲ್ಲಿ long-range PL-15 ಕ್ಷಿಪಣಿಗಳನ್ನು ನೀಡಿತ್ತು. ಅದರ ಜೊತೆಗೆ PL-15 are BVR ಕ್ಷಿಪಣಿಗಳನ್ನೂ ಒದಗಿದೆ. ಹಾಗೆಯೇ ಮಲ್ಟಿ ರೋಲ್ J-10C ಯುದ್ಧ ವಿಮಾನಗಳನ್ನೂ ಪಾಕಿಸ್ತಾನಕ್ಕೆ ಕೊಟ್ಟಿದೆ. ಆದರೆ, ಚೀನಾದ ಆಯುಧಗಳನ್ನು ತೆಗೆದುಕೊಂಡು ಭಾರತದತ್ತ ನುಗ್ಗುವ ಪಾಕ್ಗೆ ಭಾರೀ ಮುಖಭಂಗ ಆಗ್ತಿದೆ.
ಇದನ್ನೂ ಓದಿ: ಚೀನಾ ನಂಬಿ ಕೆಟ್ಟ ಪಾಕಿಸ್ತಾನ.. ಭಾರತ-ರಷ್ಯಾ ಬಾಂಧವ್ಯಕ್ಕೆ ಅತಿ ದೊಡ್ಡ ಯಶಸ್ಸು; ಮೀಮ್ಸ್ ವಿಡಿಯೋ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ