newsfirstkannada.com

‘ಇದು IPL ಅಲ್ಲ, ಏಷ್ಯಾಕಪ್​; ಈತ ಔಟಾದ್ರೆ ಕೊಹ್ಲಿ ಮೇಲೆ ಹೆಚ್ಚು ಒತ್ತಡ‘- ಪಾಕ್​​ ದಿಗ್ಗಜ

Share :

Published August 28, 2023 at 7:05pm

Update August 28, 2023 at 7:07pm

    ಇದು ಇಂಡಿಯನ್​ ಪ್ರೀಮಿಯರ್​​ ಲೀಗ್​ ಅಲ್ಲ, ಏಷ್ಯಾಕಪ್​​!

    ಟೀಂ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಪಾಕ್​ ಮಾಜಿ ಕ್ರಿಕೆಟರ್

    ಪಾಕ್​​​ ಮಾಜಿ ಕ್ರಿಕೆಟರ್​​ ಸಲ್ಮನ್​ ಬಟ್​ ಕೊಟ್ಟ ಎಚ್ಚರಿಕೆ ಏನು?

ಬಹುನಿರೀಕ್ಷಿತ 2023ರ ಏಷ್ಯಾಕಪ್​​​​ ಟೂರ್ನಿ ಆರಂಭಕ್ಕೆ ಇನ್ನೇನು ಕೇವಲ ಎರಡೇ ದಿನ ಬಾಕಿ ಇದೆ. ಆಗಸ್ಟ್​​​ 30ನೇ ತಾರೀಕಿನಿಂದ ನಡೆಯಲಿರೋ ಈ ಮಹತ್ವದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್​​ ಮತ್ತು ನೇಪಾಳ ತಂಡಗಳು ಭಾಗಿಯಾಗಲಿವೆ. ಬಳಿಕ ಸೆಪ್ಟೆಂಬರ್​​ 2ಕ್ಕೆ ಪಾಕ್​​, ಭಾರತ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಜಗತ್ತೇ ಎದುರು ನೋಡುತ್ತಿದೆ.

ಇನ್ನು, ಪಾಕಿಸ್ತಾನವನ್ನು ಹೇಗಾದರೂ ಸೋಲಿಸಲೇಬೇಕು ಎಂದು ಟೀಂ ಇಂಡಿಯಾ ಭಾರೀ ತಯಾರಿ ನಡೆಸಿಕೊಂಡಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಪಾಕ್​ ಮಾಜಿ ಕ್ರಿಕೆಟರ್​​ ಸಲ್ಮನ್​​​ ಬಟ್​​ ಎಚ್ಚರಿಕೆ ನೀಡಿದ್ದಾರೆ. ಪಾಕ್​​ ತಂಡದ ಈ ಬೌಲರ್​​ಗಳನ್ನು ಎದುರಿಸಲು ಭಾರತದ ಬ್ಯಾಟರ್ಸ್​​​ ಕಷ್ಟವಾಗಲಿದೆ ಎಂದಿದ್ದಾರೆ.

ಪಾಕ್​​ ತಂಡದ ವೇಗಿ ಶಾಹೀನ್ ಬೌಲ್​ ಮಾಡುವಾಗ ಹೊಸ ಚೆಂಡನ್ನು ಸ್ವಿಂಗ್​ ಮಾಡುತ್ತಾರೆ. ಮೊದಲ 2 ಬಾಲ್​ ಸ್ವಿಂಗ್​ ಆಗಲಿದೆ. ಹೀಗಾಗಿ ರೋಹಿತ್​ ಹೊಸ ಚೆಂಡುಗಳನ್ನು ಎದುರಿಸುವಾಗ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ರೋಹಿತ್​ ಔಟಾದ್ರೆ ಕೊಹ್ಲಿ ಮೇಲೆ ಒತ್ತಡ ಬೀಳಲಿದೆ. ರೋಹಿತ್​​​, ಕೊಹ್ಲಿ ಪಾಕ್​ ಬೌಲರ್ಸ್​ಗೆ ಪ್ರಮುಖ ವಿಕೆಟ್​​ಗಳು ಎಂದರು.

ಇದು ಐಪಿಎಲ್​​ ಅಲ್ಲ, ಏಷ್ಯಾಕಪ್​​

ಎಷ್ಟು ಬೇಕಾದ್ರೂ ಐಪಿಎಲ್​​ ಪಂದ್ಯಗಳನ್ನು ಆಡಿ. ಭಾರತ, ಪಾಕ್​​ ಮಧ್ಯದ ಪಂದ್ಯ ಎಂದರೆ ಒತ್ತಡ ಇದ್ದೇ ಇರುತ್ತದೆ. ಅದರಲ್ಲೂ ಒತ್ತಡ ವಿಭಿನ್ನವಾಗಿರಲಿದೆ. ಹೀಗಾಗಿ ಅನುಭವ ಇಲ್ಲದ ಆಟಗಾರರು ಬ್ಯಾಟ್​ ಬೀಸೋದು ಸುಲಭ ಅಲ್ಲ. ಯಾರು ಭಾರತ, ಪಾಕ್​​ ನಡುವಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೋ ಅವರು ಒಳ್ಳೇ ಹೆಸರು ಮಾಡಬಹುದು ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಇದು IPL ಅಲ್ಲ, ಏಷ್ಯಾಕಪ್​; ಈತ ಔಟಾದ್ರೆ ಕೊಹ್ಲಿ ಮೇಲೆ ಹೆಚ್ಚು ಒತ್ತಡ‘- ಪಾಕ್​​ ದಿಗ್ಗಜ

https://newsfirstlive.com/wp-content/uploads/2023/08/VIRAT_KOHLI-2.jpg

Load More