newsfirstkannada.com

ಅಯೋಧ್ಯೆ ರಾಮಮಂದಿರದ ಮೇಲೆ ಪಾಕಿಸ್ತಾನ ಧ್ವಜ.. ಫೋಟೋ ಹರಿಬಿಟ್ಟಂತೆ ಮುಸ್ಲಿಂ ಯುವಕ ಅರೆಸ್ಟ್​

Share :

Published January 22, 2024 at 6:47am

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹರಿಬಿಟ್ಟ ಮುಸ್ಲಿಂ ಯುವಕ

    ಹಸಿರು ಬಣ್ಣದ ಧ್ವಜದ ಚಿತ್ರ ಹಾಕಿ ಬಾಬ್ರಿಮಜ್ಜೀದ್ ಎಂದು ಬರೆದು ಪೋಸ್ಟ್

    ಎಫ್ ಐಆರ್‌ ದಾಖಲಿಸುವಂತೆ ಹಿಂದೂ ಸಂಘಟನೆಗಳಿಂದ ಆಕ್ರೋಶ

ಗದಗ: ದೇಶದಾದ್ಯಂತ ಜನರು ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿದ್ದಾರೆ. ಹೀಗಿರುವಾಗ ಅಯೋಧ್ಯೆ ರಾಮಮಂದಿರ ಫೋಟೋದ ಮೇಲೆ ಪಾಕಿಸ್ತಾನ ಧ್ವಜವನ್ನಿಟ್ಟು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮುಸ್ಲಿಂ ಯುವಕನಿಂದ ಈ ಕೃತ್ಯ ನಡೆದಿದೆ.

ತೌಜುದ್ದೀನ್ ದಫೇದಾರ್ ಅ‌ನ್ನೋ ಯುವಕ ಈ ರೀತಿಯ ಕೃತ್ಯವೆಸಗಿದ್ದಾನೆ. ಅಯೋಧ್ಯೆ ರಾಮಮಂದಿರ ಗೋಪುರದ‌‌ ಮೇಲೆ ಹಸಿರು ಧ್ವಜ ಹಾಕಿ ಪೋಸ್ಟ್ ಮಾಡಿದ್ದಾನೆ. ಮುಸ್ಲಿಂ ಧರ್ಮದ‌ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬ್ರಿಮಜ್ಜೀದ್ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಈ ಘಟನೆ ಮುನ್ನೆಲೆಗೆ ಬಂದಂತೆ ತಕ್ಷಣ ತೌಜುದ್ದೀನನ್ನ ಗಜೇಂದ್ರಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವಕನ ಮೇಲೆ ಎಫ್ ಐಆರ್‌ ದಾಖಲಿಸುವಂತೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಭಜರಂಗದಳ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ತಡರಾತ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರು ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮಮಂದಿರದ ಮೇಲೆ ಪಾಕಿಸ್ತಾನ ಧ್ವಜ.. ಫೋಟೋ ಹರಿಬಿಟ್ಟಂತೆ ಮುಸ್ಲಿಂ ಯುವಕ ಅರೆಸ್ಟ್​

https://newsfirstlive.com/wp-content/uploads/2024/01/Gadag-1.jpg

Load More