newsfirstkannada.com

ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಮಾಜಿ ಕಮಾಂಡರ್ ಹತ್ಯೆ.. ಶೂಟ್​ ಮಾಡಿ ಕೊಂದಿದ್ಯಾರು?

Share :

Published November 9, 2023 at 8:25pm

Update November 9, 2023 at 8:13pm

    ಉಗ್ರ ಸಂಘಟನೆಗೆ ಯುವಕರನ್ನ ನೇಮಕ ಮಾಡಿಕೊಳ್ತಿದ್ದ ಕಮಾಂಡರ್

    ಇಂದು ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಗನ್​ನಿಂದ ಶೂಟ್ ಮಾಡಿ ಪರಾರಿ!

    ಉದ್ಯೋಗದ ಹೆಸರಲ್ಲಿ ಯುವಕರನ್ನು ನೇಮಿಸಿಕೊಂಡು ಉಗ್ರ ತರಬೇತಿ

ಪಾಕಿಸ್ತಾನ ಸದ್ಯ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದು ದಿನಸಿ ವಸ್ತುಗಳನ್ನು ಖರೀದಿಸಲು ಅಲ್ಲಿನ ಜನ ಕಷ್ಟ ಪಡುತ್ತಿದ್ದಾರೆ. ಮೊದಲಿನಿಂದಲು ಭಯೋತ್ಪಾದನೆಯನ್ನ ಪೋಷಣೆ ಮಾಡುತ್ತಿರುವ ಪಾಪಿ ಪಾಕಿಸ್ತಾನ ನಿತ್ಯ ತನ್ನ ಸುತ್ತಾಲಿನ ರಾಷ್ಟ್ರಗಳ ಮೇಲೆ ಒಂದಲ್ಲ, ಒಂದು ರೀತಿ ದಾಳಿ ಮಾಡುತ್ತಿರುತ್ತದೆ. ಸದ್ಯ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್​ನನ್ನು ಗನ್​ನಿಂದ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ.

ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್​ ಖಾನ್​ ಅಲಿಯಾಸ್​ ಅಕ್ರಮ್ ಘಾಜಿ ಕೊಲೆಯಾದವನು. ಪಾಕಿಸ್ತಾನದ ಬಜೌರ್​ ಜಿಲ್ಲೆಯಲ್ಲಿ ಅಪರಿಚಿತನೊಬ್ಬ ಗನ್​ನಿಂದ ಮಾಜಿ ಕಮಾಂಡರ್ ಅಕ್ರಮ್​ ಖಾನ್​ನನ್ನು ಶೂಟ್ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಕೊಲೆಯಾಗಿರುವ ಅಕ್ರಮ್​ ಖಾನ್, 2018 ರಿಂದ 2020ರಲ್ಲಿ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯಲ್ಲಿ ಕಮಾಂಡರ್ ಆಗಿ ಕೆಲಸ ಮಾಡಿದ್ದಾನೆ. ಈ ವೇಳೆ ಉಗ್ರ ಸಂಘಟನೆಗೆ ಬೇಕಾದ ಯುವಕರನ್ನು ಉದ್ಯೋಗದ ಹೆಸರಲ್ಲಿ ನೇಮಕ ಮಾಡಿಕೊಂಡು ಅವರಿಗೆ ಭಯೋತ್ಪಾದನೆ ಬಗ್ಗೆ ತರಬೇತಿ ಕೊಡುತ್ತಿದ್ದನು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಮಾಜಿ ಕಮಾಂಡರ್ ಹತ್ಯೆ.. ಶೂಟ್​ ಮಾಡಿ ಕೊಂದಿದ್ಯಾರು?

https://newsfirstlive.com/wp-content/uploads/2023/11/PAK_Akram_Khan.jpg

Load More