/newsfirstlive-kannada/media/post_attachments/wp-content/uploads/2024/08/BangaldeshUnderAttack.jpg)
ಬಾಂಗ್ಲಾದೇಶದಲ್ಲಿ ಅರಾಜಕತೆ, ಹಿಂಸಾಚಾರ ಮುಗಿಲು ಮುಟ್ಟಿದೆ. ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನಾಯಕನ ಮಗಳು ದೇಶವನ್ನೇ ಬಿಟ್ಟು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾ ರಾಜೀನಾಮೆ ಕೊಟ್ಟಿರೋದು ಭಾರತದಲ್ಲೂ ಸಂಚಲನ ಸೃಷ್ಟಿಸಿದೆ. ಬಾಂಗ್ಲಾದೇಶದಲ್ಲಿ ಉಂಟಾಗಿರೋ ಗಲಭೆ ಸದ್ಯಕ್ಕೆ ಶಾಂತವಾಗುವ ಲಕ್ಷಣ ಕಾಣುತ್ತಿಲ್ಲ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್ ಹಸೀನಾ ಒಳ ಉಡುಪು ಬಿಡದ ಕಾಮುಕರು
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಮುಂದುವರಿದಿದೆ. ಗಲಭೆ, ಬೆಂಕಿಯಿಂದ ಇದುವರೆಗೂ ಬಾಂಗ್ಲಾದಲ್ಲಿ 119 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ರಾಜಧಾನಿ ಢಾಕಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಈ ವೇಳೆ ಢಾಕಾದಲ್ಲೇ 109 ಮಂದಿ ಪ್ರಾಣ ಬಿಟ್ಟಿದ್ದು, ಶಾಂತಿ ಕಾಪಾಡಲು ಸೇನೆ ಶತಪ್ರಯತ್ನ ಮಾಡುತ್ತಿದೆ.
ಬಾಂಗ್ಲಾ ಹಿಂಸಾಚಾರಕ್ಕೆ ಪಾಕಿಸ್ತಾನ ಪ್ಲಾನ್?
ಶೇಖ್ ಹಸೀನಾ ಅವರ ರಾಜೀನಾಮೆ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗಿದೆ. ಹಿಂದೂಗಳ ಮನೆ, ದೇವಾಲಯಗಳ ಮೇಲೆ ದಾಳಿ ನಡೆಸಿ ಲೂಟಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸದ್ಯದ ಉದ್ವಿಗ್ನತೆಗೆ ಎರಡು ವರ್ಷಗಳಿಂದ ಪ್ಲಾನ್ ಮಾಡಿರೋ ಅನುಮಾನ ವ್ಯಕ್ತವಾಗಿದೆ.
ಪಾಕಿಸ್ತಾನದ ಐಸಿಸ್ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರನ್ನ ಕೆಳಗಿಳಿಸಲು ಎರಡು ವರ್ಷದಿಂದ ಪ್ಲಾನ್ ಮಾಡಿದೆ. ಜಮಾತ್ ಇ ಇಸ್ಲಾಮಿ ಸಂಘಟನೆ ಮೂಲಕ ಈ ಕುತಂತ್ರ ಮಾಡಿರೋ ಸ್ಫೋಟಕ ಸತ್ಯ ಬಯಲಾಗುತ್ತಿದೆ.
ಇದನ್ನೂ ಓದಿ: ಶೇಖ್ ಹಸೀನಾರ ಭಾರತಕ್ಕೆ ಕರೆ ತಂದಿದ್ದೇ ರೋಚಕ.. 2 ರಫೇಲ್ ಜೆಟ್ ಹೇಗೆ ಭದ್ರತೆ ನೀಡಿದ್ವು ಗೊತ್ತಾ?
ಜಮಾತ್ ಇ ಇಸ್ಲಾಮಿ ಸಂಘಟನೆ ಢಾಕಾ, ರಾಜಶಾಹಿ ಸೇರಿದಂತೆ ಹಲವು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಶೇಖ್ ಹಸೀನಾ ವಿರುದ್ಧ ಎತ್ತಿಕಟ್ಟೋ ಕಾರ್ಯ ಮಾಡಿದೆ. ಶೇಖ್ ಹಸಿನಾರನ್ನು ದೇಶ ಬಿಟ್ಟು ಓಡಿಸೋದು ಸರ್ಕಾರ ಅತಂತ್ರಗೊಳಿಸೊದು ಇವರ ಮಾಸ್ಟರ್ ಪ್ಲಾನ್ ಆಗಿತ್ತು.
ಜಮಾತ್ ಇ ಇಸ್ಲಾಮಿ ಸಂಘಟನೆ ತನ್ನ ಕುತಂತ್ರಕ್ಕಾಗಿ ಸೋಷಿಯಲ್ ಮೀಡಿಯಾವನ್ನು ಬಳಕೆ ಮಾಡಿದೆ. ಫೇಕ್ ಅಕೌಂಟ್‌ಗಳನ್ನ ತೆರೆದು ಪ್ರಚೋದನಾಕಾರಿ ಸಂದೇಶ, ಮತ್ತು ವಿಡಿಯೋ ತುಣುಕುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿದೆ. ತದನಂತರ ಹೋರಾಟದ ರೂಪುರೇಷೆ ಎಲ್ಲವೂ ಪ್ರೀಪ್ಲಾನ್ ಮಾಡಿದಂತೆ ನಡೆದಿದೆ ಎನ್ನಲಾಗಿದೆ.
‘ಮುಂದಿನ ಪಾಕಿಸ್ತಾನ ಆಗಲಿದೆ’
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಅವರು ಬಾಂಗ್ಲಾದೇಶ ಮುಂದಿನ ಪಾಕಿಸ್ತಾನ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಾಂಗ್ಲಾದೇಶದ ಜನರಿಗೆ ಯಾವುದೇ ಕೃತಜ್ಞತೆ ಇಲ್ಲ. ಶೇಖ್ ಹಸೀನಾ ಮತ್ತೆ ಬಾಂಗ್ಲಾದೇಶಕ್ಕೆ ಹಿಂದಿರುಗಿ ಬರಲ್ಲ ಎಂದಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತವೇ ಗತಿ; ನಿಲ್ಲದ ಹಿಂಸಾಚಾರ.. ಬಾಂಗ್ಲಾದಲ್ಲಿ ಏನೆಲ್ಲ ಆಗೋಯ್ತು..
ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಸಜೀಬ್ ವಾಜೀದ್ ಅವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಆಗುತ್ತಿದೆ. ನಾನು ನನ್ನ ತಾಯಿ ಶೇಖ್ ಹಸೀನಾ ಜೊತೆ ಮಾತನಾಡಿದೆ. ಬಾಂಗ್ಲಾದೇೆಶದ ಜನರ ಬಗ್ಗೆ ನಿರಾಶೆ ಹೊಂದಿದ್ದಾರೆ. ಶೇಖ್ ಹಸೀನಾಗೆ ಈಗ 77 ವರ್ಷ ವಯಸ್ಸು, ಈ ಅವಧಿ ಬಳಿಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದರು. ಬಾಂಗ್ಲಾದೇಶದ ಇತಿಹಾಸದಲ್ಲಿ ಶೇಖ್ ಹಸೀನಾ ಅವಧಿ ಚಿನ್ನದ ಯುಗ ಎಂದು ಪರಿಗಣಿಸಲಾಗುತ್ತೆ. ಶೇಖ್ ಹಸೀನಾ ತಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯಲಿದ್ದಾರೆ. . ಮಧ್ಯಂತರ ಸರ್ಕಾರದಲ್ಲಿ ಅವಾಮಿ ಲೀಗ್‌ಗೆ ಅವಕಾಶ ಕೊಡಲ್ಲ. ಬಾಂಗ್ಲಾದೇಶವನ್ನ ರಕ್ಷಣೆ ಮಾಡಿ ಸುಸ್ತಾಗಿದೆ. ಬಾಂಗ್ಲಾದೇಶದ ಸಮಸ್ಯೆಯನ್ನ ಬಾಂಗ್ಲಾದೇಶವೇ ನಿಭಾಯಿಸಿಕೊಳ್ಳಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ