/newsfirstlive-kannada/media/post_attachments/wp-content/uploads/2025/04/Shahbaz-sharif.jpg)
ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಪಾಕಿಸ್ತಾನದ ಮಗ್ಗಲು ಎಲ್ಲಾ ರೀತಿಯಿಂದಲೂ ಮುರಿಯುತ್ತಿದೆ. ಇದೀಗ ಪಾಕ್​ನಲ್ಲಿ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ವಿಶ್ವ ಬ್ಯಾಂಕ್ ನೀಡಿದ ಮಾಹಿತಿ ಪ್ರಕಾರ, ಪಾಕ್​ನಲ್ಲಿ ಒಂದು ಕೋಟಿ ಜನರು ಹಸಿವಿನಿಂದ ಒದ್ದಾಡ್ತಾರೆ. ಜೂನ್, 2025ಕ್ಕೆ ಪಾಕ್​ನಲ್ಲಿ ಹಣದುಬ್ಬರ ಶೇ.5.5 ರಿಂದ ಶೇ.7.5 ಕ್ಕೆ ಏರಿಕೆಯಾಗುವ ಭೀತಿ ಇದೆ. ಪಾಕ್​ನಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅಕ್ಕಿ ಬೆಲೆ ಪ್ರತಿ ಕೆಜಿಗೆ 340 ರೂಪಾಯಿಗೆ ಏರಿಕೆಯಾಗಿದೆ. ಸದ್ಯ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ಐಎಂಎಫ್​ನಿಂದ 2 ಬಿಲಿಯನ್ ಡಾಲರ್ ಸಾಲ ಪಡೆದಿದೆ. ಇದರಿಂದ ಪಾಕ್​ನಲ್ಲಿ ಹಣದುಬ್ಬರ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ಹಣದುಬ್ಬರ ಏರಿಕೆ ಆಗಿದೆ.
ಇದನ್ನೂ ಓದಿ: ‘ಗುರಿ, ಸಮಯ ನೀವೇ ನಿರ್ಧರಿಸಿ..’ ಮೋದಿ ಮೀಟಿಂಗ್​ನಲ್ಲಿ ತೆಗೆದುಕೊಂಡು 5 ನಿರ್ಧಾರಗಳು ಏನೇನು..?
ಶಾಕ್ ಮೇಲೆ ಶಾಕ್..!
- ಹಣದುಬ್ಬರ ಶೇ.5.5 ರಿಂದ ಶೇ.7.5 ಕ್ಕೆ ಏರಿಕೆಯ ಭೀತಿ
- ಪಾಕ್​ನಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ 340 ರೂಪಾಯಿಗೆ ಏರಿಕೆ
- ಇನ್ನೂ ಚಿಕನ್ ಬೆಲೆ ಪ್ರತಿ ಕೆಜಿಗೆ 800 ರೂಪಾಯಿಗೆ ಏರಿಕೆ
- ಐಎಂಎಫ್​ನಿಂದ 2 ಬಿಲಿಯನ್ ಡಾಲರ್ ಸಾಲ ಪಡೆದಿರುವ ಪಾಕ್
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಕ್​ ಉಗ್ರರಿಂದ ಪ್ರವಾಸಿಗರ ಮೇಲೆ ದಾಳಿ ಆಗಿದೆ. 26 ಅಮಾಯಕರ ಜೀವ ಹೋಗಿದ್ದು, ಭಾರತದಲ್ಲಿ ಪ್ರತೀಕಾರ ಕೂಗು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಪಾಕ್ ವಿರುದ್ಧ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಇದರಿಂದ ಪಾಕ್ ಯುದ್ಧದ ಭೀತಿ ಎದುರಿಸುತ್ತಿದೆ.
ಇದನ್ನೂ ಓದಿ: ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us