newsfirstkannada.com

24 ಗಂಟೆಯಲ್ಲಿ ಇರಾನ್ ಮೇಲೆ ಪಾಕ್​ನ ಪ್ರತೀಕಾರದ ದಾಳಿ; ಹೇಗಿದೆ 2 ದೇಶಗಳ ಸಂಬಂಧ?

Share :

Published January 18, 2024 at 10:17am

Update January 18, 2024 at 10:21am

    ಪಾಕಿಸ್ತಾನ-ಇರಾನ್​ ಮಧ್ಯೆ ಹದಗೆಟ್ಟ ಸಂಬಂಧ

    ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸಾವು

    ಉಗ್ರರನ್ನು ಗುರಿಯಾಗಿಸಿ ದಾಳಿ ಮಾಡಿದ್ದ ಇರಾನ್

ಬಲೂಚಿಸ್ತಾನದಲ್ಲಿ (Balochistan) ಇರಾನ್ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ಡೆಡ್ಲಿ ಅಟ್ಯಾಕ್​​ಗೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡಿದೆ. ಇರಾನ್ ದಾಳಿ ನಡೆಸಿದ 24 ಗಂಟೆಗಳಲ್ಲಿ ಪಾಕಿಸ್ತಾನ ಇರಾನ್‌ನಲ್ಲಿನ ಭಯೋತ್ಪಾದಕ ಘಟಕಗಳ ಮೇಲೆ ದಾಳಿ ಮಾಡಿದೆ.

ಮಂಗಳವಾರ ರಾತ್ರಿ ಇರಾನ್ ನಡೆಸಿದ್ದ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿತ್ತು. ಜೊತೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಇರಾನ್ ನಡೆಸಿದ ದಾಳಿಗೆ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ.

ಪಾಕ್ ದಾಳಿಗೂ ಮೊದಲು ಮಾತನಾಡಿದ್ದ ಇರಾನ್‌ನ ವಿದೇಶಾಂಗ ಸಚಿವ ಅಮೀರ್.. ಉಭಯ ದೇಶಗಳ ಮಧ್ಯೆ ಸಹೋದರ ಸಂಬಂಧ ಇದೆ. ಪಾಕ್ ಭೂ-ಭಾಗದ ಮೇಲೆ ಇರಾನ್ ದಾಳಿ ನಡೆಸಿರೋದು ನಿಜ. ಆದರೆ ಪಾಕಿಸ್ತಾನದ ನಾಗರಿಕರ ಮೇಲೆ ಅಲ್ಲ, ಪಾಕಿಸ್ತಾನದಲ್ಲಿ ಅಡಗಿರುವ ಇರಾನ್ ಭಯೋತ್ಪಾದಕರ ಮೇಲೆ ಎಂದು ಇರಾನ್ ಹೇಳಿತ್ತು. ಜೈಶ್ ಉಲ್-ಅದ್ಲ್ ಇರಾನ್ ಭಯೋತ್ಪಾದಕ ಸಂಘಟನೆಯಾಗಿದೆ. ಪಾಕಿಸ್ತಾನದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಈ ಉಗ್ರರು ಆಶ್ರಯ ಪಡೆದುಕೊಂಡಿದ್ದಾರೆ.

ಪಾಕ್-ಇರಾನ್ ಸಂಬಂಧ ಹೇಗಿದೆ?

ಪಾಕಿಸ್ತಾನ ಮತ್ತು ಇರಾನ್ ನಡುವೆ ಆಗಾಗ ಕಿರಿಕ್ ನಡೆಯುತ್ತಲೇ ಇರುತ್ತದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಮೊದಲಿನಿಂದಲೂ ಅಷ್ಟಕಷ್ಟೇ. ಇರಾನ್ ಜೊತೆ ಪಾಕಿಸ್ತಾನ ಗಡಿಗಳನ್ನು ಹಂಚಿಕೊಂಡಿದೆ. ಇಬ್ಬರ ಮಧ್ಯೆ ಯಾವುದೇ ಪರಸ್ಪರ ಅವಲಂಬಿತ ಸಂಬಂಧ ಇಲ್ಲ. ಇರಾನ್ ಶಿಯಾ ಬಹುಸಂಖ್ಯಾತ ರಾಷ್ಟ್ರವಾದರೆ ಪಾಕಿಸ್ತಾನ ಸುನ್ನಿ ಬಹುಸಂಖ್ಯಾತ ರಾಷ್ಟ್ರವಾಗಿದೆ. ಎರಡೂ ದೇಶಗಳು ಕಾಲಕಾಲಕ್ಕೆ ಭಯೋತ್ಪಾದಕ ದಾಳಿಯ ಬಗ್ಗೆ ಪರಸ್ಪರ ಆರೋಪ ಮಾಡುತ್ತಲೇ ಇರುತ್ತವೆ. ಪಾಕಿಸ್ತಾನವು ಗಡಿಯಾಚೆಯಿಂದ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದೆ ಎಂದು ಇರಾನ್ ಅನೇಕ ಬಾರಿ ಆರೋಪಿಸುತ್ತಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

24 ಗಂಟೆಯಲ್ಲಿ ಇರಾನ್ ಮೇಲೆ ಪಾಕ್​ನ ಪ್ರತೀಕಾರದ ದಾಳಿ; ಹೇಗಿದೆ 2 ದೇಶಗಳ ಸಂಬಂಧ?

https://newsfirstlive.com/wp-content/uploads/2024/01/PAK-3.jpg

Load More