ಪಾಕಿಸ್ತಾನದ ಕನಸು ಭಗ್ನಗೊಳಿಸಿದ ಭಾರತ.. ಆಪ್ತ ಮಿತ್ರ ಚೀನಾದ ತಂತ್ರವೂ ಇಲ್ಲಿ ಫಲಿಸಲಿಲ್ಲ..!

author-image
Ganesh
Updated On
ಪಾಕಿಸ್ತಾನದ ಕನಸು ಭಗ್ನಗೊಳಿಸಿದ ಭಾರತ.. ಆಪ್ತ ಮಿತ್ರ ಚೀನಾದ ತಂತ್ರವೂ ಇಲ್ಲಿ ಫಲಿಸಲಿಲ್ಲ..!
Advertisment
  • ಪಾಕ್​ಗೆ ಚೀನಾ, ರಷ್ಯಾ ಬೆಂಬಲ ನೀಡಿದ್ದವು
  • ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡ ಟರ್ಕಿ
  • 13 ಹೊಸ ಬ್ರಿಕ್ಸ್​ ಪಾಲುದಾರ ರಾಷ್ಟ್ರ ಘೋಷಣೆ

ಬ್ರಿಕ್ಸ್ (BRICS) ಸದಸ್ಯತ್ವ ಪಡೆಯುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಆಗಿದೆ. ಭಾರತದ ತೀವ್ರ ವಿರೋಧದ ಪರಿಣಾಮ ಬ್ರಿಕ್ಸ್ ಸದಸ್ಯತ್ವದಿಂದ ಪಾಕಿಸ್ತಾನ ವಂಚಿತಗೊಂಡಿದೆ. ಆ ಮೂಲಕ ಬ್ರಿಕ್ಸ್ ಸದಸ್ಯತ್ವ ಇರಲಿ, ಪಾಲುದಾರ ರಾಷ್ಟ್ರಗಳ ಪಟ್ಟಿಯಲ್ಲೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಬ್ರಿಕ್ಸ್ ಪಾಲುದಾರ ರಾಷ್ಟ್ರಗಳ ಪಟ್ಟಿಯಲ್ಲಿ ಟರ್ಕಿ ಸೇರ್ಪಡೆಗೊಂಡಿದೆ. ರಷ್ಯಾ ಇತ್ತೀಚೆಗೆ 13 ಹೊಸ ಪಾಲುದಾರ ರಾಷ್ಟ್ರಗಳನ್ನು ಘೋಷಿಸಿದೆ. ಅಲ್ಜೀರಿಯಾ, ಬೆಲಾರಸ್, ಬೊಲಿವಿಯಾ, ಕ್ಯೂಬಾ, ಇಂಡೋನೇಷಿಯಾ, ಕಝಕಿಸ್ತಾನ್, ಮಲೇಷ್ಯಾ, ಥೈಲ್ಯಾಂಡ್, ಟರ್ಕಿ, ಉಗಾಂಡಾ, ನೈಜೀರಿಯಾ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ ಸೇರಿವೆ. ಈ ದೇಶಗಳು ಜನವರಿ 1, 2025 ರಿಂದ BRICS ಪಾಲುದಾರ ರಾಷ್ಟ್ರಗಳಾಗುತ್ತವೆ. ಚೀನಾ ಮತ್ತು ರಷ್ಯಾದ ಬೆಂಬಲದೊಂದಿಗೆ ಬ್ರಿಕ್ಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕ್​ಗೆ ಆಘಾತ ಆಗಿದೆ.

ಇದನ್ನೂ ಓದಿ:ಕ್ರಿಸ್ಮಸ್, ಹೊಸ ವರ್ಷಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್​ನ್ಯೂಸ್​ ಕೊಟ್ಟ ಸರ್ಕಾರ; ಏನದು?

ಕಾಶ್ಮೀರ ವಿಚಾರದಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ (Recep Tayyip Erdoğan) ಅವರ ನಿಲುವು ಬದಲಾವಣೆಯಿಂದಾಗಿ ಬ್ರಿಕ್ಸ್‌ಗೆ ಪ್ರವೇಶಿಸಲು ಅವಕಾಶ ಸಿಕ್ಕಿದೆ. ಟರ್ಕಿ ಅಧ್ಯಕ್ಷರು ತಮ್ಮ ನಿಲುವು ಬದಲಾವಣೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ವಾದವನ್ನು ಭಾರತ ವಿರೋಧಿಸಿಲ್ಲ. ಹೀಗಾಗಿ ಟರ್ಕಿ ಬ್ರಿಕ್ಸ್​ ಪಾಲುದಾರಿಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಕ್ ನೆಲದಲ್ಲೇ ಟೀಕೆ..!

ಪಾಕಿಸ್ತಾನದ ಈ ವೈಫಲ್ಯವನ್ನು ತನ್ನದೇ ನೆಲದಲ್ಲಿ ಕಟುವಾಗಿ ಟೀಕಿಸಲಾಗುತ್ತಿದೆ. ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ‘ಸಂಪೂರ್ಣ ವೈಫಲ್ಯ’ ಎಂದು ವಿದೇಶಾಂಗ ವ್ಯವಹಾರಗಳ ತಜ್ಞ ಬಾಬರ್ ಹೇಳಿದ್ದಾರೆ. ನೈಜೀರಿಯಾದಂತಹ ದೇಶ ಕೂಡ ಪಾಕ್​ಗಿಂತ ಉತ್ತಮ ಪ್ರದರ್ಶನ ನೀಡಿ ಬ್ರಿಕ್ಸ್ ಪಾಲುದಾರ ರಾಷ್ಟ್ರವಾಯಿತು ಎಂದಿದ್ದಾರೆ.

ಬ್ರಿಕ್ಸ್‌ನಲ್ಲಿ ಭಾರತದ ನಿಲುವು

ಬ್ರಿಕ್ಸ್‌ನಲ್ಲಿ ಹೊಸ ಸದಸ್ಯ ರಾಷ್ಟ್ರಗಳನ್ನು ಸೇರಿಸಲು ಎಲ್ಲಾ ಸಂಸ್ಥಾಪಕ ಸದಸ್ಯರ ಒಪ್ಪಿಗೆ ಅಗತ್ಯ. ಭಾರತವು ಪಾಕಿಸ್ತಾನದ ಹಕ್ಕನ್ನು ಬಲವಾಗಿ ವಿರೋಧಿಸಿದೆ. ಇದರಿಂದಾಗಿ ಪಾಕಿಸ್ತಾನದ ಕನಸಿನ ಬಾಗಿಲು ಬಂದ್​ ಆಗಿದೆ. ಇನ್ನು ಚೀನಾ ಮತ್ತು ರಷ್ಯಾ ಪಾಕಿಸ್ತಾನವನ್ನು ಬೆಂಬಲಿಸಿದ್ದವು ಎಂದು ವರದಿಯಾಗಿದೆ.

ಇದನ್ನೂ ಓದಿ: ಗವಾಸ್ಕರ್​ ಟ್ರೋಫಿಯಲ್ಲಿ ಅಶ್ವಿನ್ ಸ್ಥಾನಕ್ಕೆ ಹೊಸ ಮುಖ.. ಯಾರು ಈ ಯುವ ಆಟಗಾರ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment