newsfirstkannada.com

ನೀರಜ್ ಚೋಪ್ರಾಗೆ ಚಿನ್ನ ಸಿಗುತ್ತಾ? ಡೋಪ್​​ ಟೆಸ್ಟ್​ನಲ್ಲಿ ಸಿಕ್ಕಿಬಿದ್ದರಾ ಪಾಕ್​ನ ನದೀಮ್? ಹೊಸ ಟ್ವಿಸ್ಟ್..!

Share :

Published August 10, 2024 at 8:56am

Update August 10, 2024 at 8:59am

    ಒಲಿಂಪಿಕ್ಸ್​ನ ಜಾವೆಲಿನ್ ಎಸೆತದಲ್ಲಿ ಮೋಸದಾಟ ನಡೆಯಿತೇ..?

    ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರೋ ವಿಷಯ ಏನು?

    ಅರ್ಷದ ನದೀಮ್ ಎಸೆದ 92.97 ಮೀಟರ್ ದೂರದ ಮೇಲೆ ಅನುಮಾನ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ವಿಜಯದ ನಂತರ ಹೊಸ ವಿವಾದ ಒಂದು ಹುಟ್ಟಿಕೊಂಡಿದೆ. ಪಂದ್ಯ ಮುಗಿದ ಬೆನ್ನಲ್ಲೇ ಅರ್ಷದ್ ನದೀಮ್ ಅವರನ್ನು ಡೋಪ್ ಪರೀಕ್ಷೆಗೆ ಒಳಪಡಿಸಲಾಗಿದೆ. ಪಾಕಿಸ್ತಾನದ ಅಥ್ಲೀಟ್ ನಿಷೇಧಿತ ವಸ್ತು ಸೇವಿಸಿ 92.97 ಮೀಟರ್ ಜಾವೆಲಿನ್ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹರಡಿದ ಬೆನ್ನಲ್ಲೇ ನೀರಜ್ ಚೋಪ್ರಾಗೆ ಚಿನ್ನ ಸಿಗಬೇಕು ಎಂಬ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಆದರೆ ಅದರ ಅಸಲಿ ಕತೆ ಬೇರೆಯೇ ಇದೆ.

ಡೋಪ್ ಪರೀಕ್ಷೆ ಎಂದರೇನು?
ಜಗತ್ತಿನ ಬಹುತೇಕ ಕ್ರೀಡಾಕೂಟಗಳಲ್ಲಿ ಡೋಪ್ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಮೂತ್ರ ಮತ್ತು ರಕ್ತದ ಮೂಲಕ ಈ ಪರೀಕ್ಷೆ ಮಾಡಲಾಗುತ್ತದೆ. ಯಾವುದೇ ಅಥ್ಲೀಟ್, ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾತ್ರೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುವ ಡ್ರಗ್​​ಳನ್ನು ಪಡೆದುಕೊಂಡಿದ್ದಾರೆಯೇ ಅಂತಾ ತಿಳಿದುಕೊಳ್ಳುವ ಪರೀಕ್ಷೆ ಅದಾಗಿದೆ. ಇನ್ನು ಅನೇಕ ಒಲಿಂಪಿಕ್ಸ್‌ನಲ್ಲಿ ಹಲವು ಅಥ್ಲೀಟ್‌ಗಳು ಸಿಕ್ಕಿಬಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇರಾನ್‌ನ ಸಜ್ಜದ್ ಸೆಹೆನ್ ಮತ್ತು ನೈಜೀರಿಯಾದ ಬಾಕ್ಸರ್ ಸಿಂಥಿಯಾ ತಪ್ಪಿತಸ್ಥರು ಎಂದು ಸಾಬೀತಾಗಿದೆ.

ಇದನ್ನೂ ಓದಿಮೂಗಿನಿಂದ ರಕ್ತ ಬರುತ್ತಲೇ ಇತ್ತು.. ಆದರೂ ಛಲ ಬಿಡಲಿಲ್ಲ.. ಭಾರತಕ್ಕೆ ಪದಕ ತಂದ್ಕೊಟ್ಟ ಅಮನ್ ಯಾರು

ನದೀಮ್ ಕತೆ ಏನು..?
ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ವಿಚಾರ ಅಷ್ಟೇ. ನೆಟ್ಟಿಗರು ಅರ್ಷದ್ ನದೀಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸ್ತಿದ್ದಾರೆ. ವಾದ ಏನೆಂದು ನೋಡೋದಾದರೆ.. ಫೈನಲ್​​ನಲ್ಲಿ ಪ್ರತಿಯೊಬ್ಬರೂ 88 ಮೀಟರ್‌ಗಳಿಂದ 89 ಮೀಟರ್‌ಗಳ ದೂರದ ವರೆಗೆ ಭರ್ಜಿ ಎಸೆದಿದ್ದಾರೆ. ಆದರೆ ನದೀಮ್ 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಇನ್ನು ಕೆಲವರು ಅರ್ಷದ್ ಫೋಟೋ ಹಂಚಿಕೊಂಡು, ಅವರ ಮುಖ ಡ್ರಗ್ಸ್ ಸೇವಿಸಿದಂತೆಯೇ ಇದೆ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಆಗ್ತಿರುವ ಬೆನ್ನಲ್ಲೇ ಪಾಕ್​ನ ಕೆಲವು ಬೆಂಬಲಿಗರು ನದೀಮ್ ಪರ ಬ್ಯಾಟ್ ಬೀಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್​ನಲ್ಲಿದೆ.

ನೀರಜ್ ಚೋಪ್ರಾಗೆ ಚಿನ್ನ ಸಿಗುತ್ತಾ?
ಡೋಪ್ ಪರೀಕ್ಷೆ ಮಾಡುವ ಅಭ್ಯಾಸ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಸಾಮಾನ್ಯವಾಗಿ ಪದಕ ಗೆದ್ದ ನಂತರ ಕ್ರೀಡಾಪಟುಗಳು ತಕ್ಷಣವೇ ಡೋಪ್ ಪರೀಕ್ಷೆಗೆ ಒಳಗಾಗುತ್ತಾರೆ. ಜಾವೆಲಿನ್ ಥ್ರೋ ಸ್ಪರ್ಧೆ ಮುಗಿದ ಬೆನ್ನಲ್ಲೇ ಪಾಕಿಸ್ತಾನದ ಅರ್ಷದ್ ನದೀಮ್ ಮಾತ್ರವಲ್ಲದೇ ಭಾರತದ ನೀರಜ್ ಚೋಪ್ರಾ ಮತ್ತು ಗ್ರೆನಡಾದ ಆಂಡರ್ಸನ್ ಪೀಟರ್ಸ್ ಕೂಡ ಡೋಪ್ ಪರೀಕ್ಷೆಗೆ ಒಳಗಾಗಿದ್ದರು. ಅಲ್ಲಿಯೇ ರಿಸಲ್ಟ್ ಕೂಡ ಬಂದಿದೆ. ಅರ್ಷದ್ ನದೀಮ್ ಮಾದಕ ದ್ರವ್ಯ ಸೇವನೆ ಅಥವಾ ಇನ್ನಾವುದೇ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿಲ್ಲ. ಅವರ ಡೊಪ್ ಪರೀಕ್ಷೆ ನೆಗೆಟೀವ್ ಬಂದಿದೆ. ಪ್ರೋಟೋಕಾಲ್ ಪ್ರಕಾರ ನಡೆದ ಪರೀಕ್ಷೆಯಲ್ಲಿ ಯಾವುದೇ ಅನುಮಾನಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

https://twitter.com/LogicLitLatte/status/1821634506916257865

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರಜ್ ಚೋಪ್ರಾಗೆ ಚಿನ್ನ ಸಿಗುತ್ತಾ? ಡೋಪ್​​ ಟೆಸ್ಟ್​ನಲ್ಲಿ ಸಿಕ್ಕಿಬಿದ್ದರಾ ಪಾಕ್​ನ ನದೀಮ್? ಹೊಸ ಟ್ವಿಸ್ಟ್..!

https://newsfirstlive.com/wp-content/uploads/2024/08/NEERAJ-CHOPRA-4.jpg

Load More