/newsfirstlive-kannada/media/post_attachments/wp-content/uploads/2025/04/Pak-on-pahalgam-terror.jpg)
ನವದೆಹಲಿ: ಸೇನಾ ಸಮವಸ್ತ್ರದಲ್ಲಿ ಭಾರತದೊಳಗೆ ನುಗ್ಗಿದ್ದ ಉಗ್ರರು ಪಹಲ್ಗಾಮ್‌ನಲ್ಲಿ ಕಂಡು ಕೇಳದ ನರಮೇಧ ನಡೆಸಿದ್ದಾರೆ. ಪ್ರೇಮ ಕಾಶ್ಮೀರದಲ್ಲಿ ಹನಿಮೂನ್‌ಗೆ ಹೋದವರ ಮಾರಣಹೋಮವೇ ನಡೆದು ಹೋಗಿದೆ. ಪ್ರವಾಸಿಗರು ಕೈ ಮುಗಿದು ಬೇಡಿಕೊಂಡರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಕಾಶ್ಮೀರದಲ್ಲಿ ಉಗ್ರರು ಭಾರತೀಯರನ್ನ ಗುಂಡಿಕ್ಕಿ ಕೊಲ್ಲಲು ಪಾಕಿಸ್ತಾನದ ಪ್ರೇರಣೆ, ಉಗ್ರರಿಗೆ ಸಿಕ್ಕ ಬೆಂಬಲವೇ ಕಾರಣ ಅನ್ನೋದು ಇಡೀ ಜಗತ್ತಿಗೆ ಗೊತ್ತಿರುವ ಸತ್ಯ. ಅಷ್ಟೇ ಅಲ್ಲ ಪಹಲ್ಗಾಮ್ ಉಗ್ರರ ದಾಳಿ ಪಾಕಿಸ್ತಾನಕ್ಕೆ ಮೊದಲೇ ಗೊತ್ತಿತ್ತು ಅನ್ನೋ ಸತ್ಯ ಕೂಡ ಇದೀಗ ಬಹಿರಂಗವಾಗಿದೆ.
2 ವಾರದ ಹಿಂದೆ ಬಾಯ್ಬಿಟ್ಟಿದ್ದ ಮುಖಂಡ!
2 ವಾರದ ಹಿಂದೆ ಪಾಕ್ ಮುಖಂಡ ಚೌಧರಿ ಅನ್ವರುಲ್ ಹಕ್ ಅವರು ಮಹತ್ವದ ವಿಚಾರಗಳನ್ನ ಹೇಳಿದ್ದರು. ಸುದ್ದಿಗೋಷ್ಠಿ ನಡೆಸಿದ್ದ ಅನ್ವರುಲ್ ಹಕ್, ಬಲೂಚಿಸ್ತಾನದಲ್ಲಿ ಪಾಕಿಸ್ತಾನಿಗಳ ಜೊತೆ ರಕ್ತದಲ್ಲಿ ಹೋಳಿ ಆಡ್ತೀರಿ. ಇದರ ಬೆಲೆ ದಿಲ್ಲಿಯಿಂದ ಕಾಶ್ಮೀರದವರೆಗೂ ನೀವು ತೆರಬೇಕಾಗುತ್ತೆ ಎಂದಿದ್ದರು.
ಮುಜಾಹಿದ್ದೀನ್ ಉಗ್ರರು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಈಗಾಗಲೇ ಕೆಲಸ ಶುರು ಮಾಡಿದ್ದಾರೆ. ಇನ್ಮುಂದೆ ಮತ್ತಷ್ಟು ಪ್ರಬಲ ದಾಳಿ ಮಾಡ್ತಾರೆ. ಭಾರತದ ಮೇಲೆ ಉಗ್ರರು ಪ್ರಬಲ ದಾಳಿ ಮಾಡೋ ಎಚ್ಚರಿಕೆಯನ್ನು ಚೌಧರಿ ಅನ್ವರುಲ್ ಹಕ್ ನೀಡಿದ್ದರು.
ಇದನ್ನೂ ಓದಿ: VIDEO: ಕನಸಿನಲ್ಲೂ ಊಹಿಸದ ಪ್ರತೀಕಾರ.. ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ 10 ಎಚ್ಚರಿಕೆ
ಭಾರತದೊಳಗೆ ಉಗ್ರರು ದಾಳಿ ಮಾಡೋ ಪಾಕಿಸ್ತಾನದ ಮುಖಂಡ ಮೊದಲೇ ಬಾಯ್ಬಿಟ್ಟಿದ್ದ. ಪಾಕಿಸ್ತಾನದಿಂದ ಬಂದ ಎಚ್ಚರಿಕೆಯನ್ನು ಭಾರತ ಲಘುವಾಗಿ ಪರಿಗಣಿಸಿದ್ದು ಕಾಶ್ಮೀರದಲ್ಲಿ ಪ್ರವಾಸಿಗರ ನರಮೇಧಕ್ಕೆ ಪರೋಕ್ಷವಾಗಿ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ