ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದಿಂದ ಏರ್​ಸ್ಟ್ರೈಕ್​.. 15 ಜನರು ಬಲಿ.. ಆಗಿದ್ದೇನು?

author-image
Gopal Kulkarni
Updated On
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದಿಂದ ಏರ್​ಸ್ಟ್ರೈಕ್​.. 15 ಜನರು ಬಲಿ.. ಆಗಿದ್ದೇನು?
Advertisment
  • ಡಿಸೆಂಬರ್ 24ರ ರಾತ್ರಿ ಅಫ್ಘಾನಿಸ್ತಾನದ ಮೇಲೆ ಪಾಕ್​ನಿಂದ ವಾಯುದಾಳಿ
  • ಟಿಟಿಪಿ ಉಗ್ರರಿಗೆ ಆಶ್ರಯ ಕೊಟ್ಟಿದ್ದರ ಹಿನ್ನೆಲೆ ಏರ್​ಸ್ಟ್ರೈಕ್ ನಡೆಸಿರುವ ಪಾಕ್​
  • ವಾಯುದಾಳಿಯಿಂದ ಆಪ್ತಮಿತ್ರರಂತಿದ್ದ ರಾಷ್ಟ್ರಗಳ ನಡುವೆ ದೊಡ್ಡ ಕಂದಕ ಸೃಷ್ಟಿ

ಅಫ್ಘಾನಿಸ್ತಾನದ ಬರ್ಮಲಾ ಜಿಲ್ಲೆಯ ಪಕ್ತಿಕಾ ಪ್ರಾಂತ್ಯದ ಮೇಲೆ ಪಾಕಿಸ್ತಾನ ಸರಣಿ ವಾಯುದಾಳಿ ನಡೆಸಿದೆ. ಡಿಸೆಂಬರ್ 24ರ ರಾತ್ರಿ ಈ ಒಂದು ಏರ್​ಸ್ಟ್ರೈಕ್ ನಡೆದಿದ್ದು, ಮಹಿಳೆಯರು, ಮಕ್ಕಳು ಸೇರಿ ಒಟ್ಟು 15 ಜನರು ಮೃತಪಟ್ಟಿದ್ದಾರೆ, ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಲಮನ್ ಸೇರಿದಂತೆ ಒಟ್ಟು 7 ಗ್ರಾಮಗಳಲ್ಲಿ ಈ ವಾಯುದಾಳಿ ನಡೆಸಲಾಗಿದೆ. ಒಂದೇ ಕುಟುಂಬದ 5 ಜನರು ಈ ಒಂದು ದಾಳಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಸ್ಪಷ್ಟನೆ ನೀಡಿದೆ.

ಅಫಘಾನಿಸ್ತಾನದಲ್ಲಿ ಸದ್ಯ ತಾಲಿಬಾನಿ ಆಡಳಿತವಿದೆ. ಈ ಒಂದು ಘಟನೆಯನ್ನು ಖಂಡಿಸಿರುವ ತಾಲಿಬಾನಿ ಸರ್ಕಾರ. ನಿನ್ನೆ ನಡೆದ ವಾಯುದಾಳಿಯನ್ನು ಪಾಕಿಸ್ತಾನವೇ ನಡೆಸಿದ್ದು ಎಂದು ಆಕ್ರೋಶ ಹೊರಹಾಕಿದ್ದು. ಸರಿಯಾಗಿ ಸೇಡು ತೀರಿಸಿಕೊಳ್ಳುವುದಾಗಿ ಶಪಥವನ್ನು ಮಾಡಿದೆ. ಇದು ನಮ್ಮ ನೆಲದ ಮೇಲಿನ ಸಾರ್ವಭೌಮತ್ವದ ಮೇಲಾದ ದಾಳಿ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ತಾಲಿಬಾನಿ ರಕ್ಷಣಾ ಇಲಾಖೆ ಹೇಳಿದೆ.

publive-image

ಸದ್ಯ ಪಾಕಿಸ್ತಾನ ನಡೆಸಿದ ವಾಯುದಾಳಿಯು ಪಾಕ್ ಮತ್ತು ಅಫ್ಘನ್ ನಡುವಿನ ಬಾಂದ್ಯವನ್ನು ಸಂಪೂರ್ಣವಾಗಿ ಕಡಿದು ಹಾಕಿದೆ.ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನದ ಸೇನೆಯ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಗೆ ಆಶ್ರಯ ನೀಡುತ್ತಿರುವ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಕೆಂಡ ಕಾರುತ್ತಲೇ ಇತ್ತು. ತನ್ನ ಸೈನಿಕರ ಮೇಲಿನ ದಾಳಿಗೆ ಪ್ರತಿಯಾಗಿ ವಾಯುದಾಳಿ ನಡೆಸಲಾಗಿದೆ ಎಂದು ಸದ್ಯ ಸುದ್ದಿಗಳು ಬಂದಿವೆ. ಆದ್ರೆ ಪಾಕಿಸ್ತಾನದ ಈ ಆರೋಪವನ್ನು ಸಾರಸಗಟವಾಗಿ ತಳ್ಳಿ ಹಾಕಿರುವ ಅಫ್ಘನ್ ತಾಲಿಬಾನ್​, ಪಾಕಿಸ್ತಾನ ನಡೆಸಿರುವ ದಾಳಿಯಿಂದ ಬಲಿಯಾಗಿದ್ದು ಸಾರ್ವಜನಿಕರೇ ಹೊರತು ಭಯೋತ್ಪಾದಕರು ಅಲ್ಲ ಎಂದು ಗುಡುಗಿದೆ.

ಇದನ್ನೂ ಓದಿ:ಬ್ರೆಜಿಲ್; ವಸತಿ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡ ವಿಮಾನ! ಜೀವ ಕಳೆದುಕೊಂಡ 10 ಜನರು

ಪಾಕಿಸ್ತಾನ ನಡೆಸಿರುವ ಈ ಒಂದು ದಾಳಿ ಎಲ್ಲಾ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಮತ್ತು ಆಕ್ರಮಣಶೀಲತೆ ಇದನ್ನು ನಾವು ಖಂಡಾತುಂಡವಾಗಿ ಖಂಡಿಸುತ್ತೇವೆ ಎಂದು ಅಫ್ಘನ್ ತಾಲಿಬಾನ್ ಹೇಳಿದೆ. ಈ ಬಗ್ಗೆ ಮಾತನಾಡಿರುವ ಅಪ್ಘನ್​ನ ರಕ್ಷಣಾ ಇಲಾಖೆ. ಈ ಒಂದು ಹೇಡಿಕೃತ್ಯಕ್ಕೆ ಉತ್ತರಿಸಲಾರದೆ ಇರೋದಿಲ್ಲ ಎಂದು ಗುಡುಗಿದೆ.

ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಸ್ಲಾಮಾಬಾದ್, ನೂರಾರು ತೆಹ್ರಿಕ್​ ಇ ತಾಲಿಬಾನ್ ಪಾಕಿಸ್ತಾನದ ಮುಂಖಡರು ಅಫ್ಘಾನಿಸ್ತಾನದಲ್ಲಿರುವುದು ಜಗತ್ತಿಗೆ ಗೊತ್ತಿರುವ ಸತ್ಯ, ಅಫ್ಘಾನಿಸ್ತಾನದ ಗಡಿರೇಖೆಗಳಲ್ಲಿ ಅವರು ಆಶ್ರಯ ಪಡೆದುಕೊಂಡಿದ್ದಾರೆ. ಅಫ್ಘಾನ್​ನ ಅಧಿಕಾರಿಗಳು ಇದನ್ನು ಅಲ್ಲಗಳೆದರೂ ಕೂಡ ಇದು ನಿಜ ಎಂದು ಹೇಳಿದೆ.

ಇದನ್ನೂ ಓದಿ:ಪಾಕಿಸ್ತಾನದ ಕನಸು ಭಗ್ನಗೊಳಿಸಿದ ಭಾರತ.. ಆಪ್ತ ಮಿತ್ರ ಚೀನಾದ ತಂತ್ರವೂ ಇಲ್ಲಿ ಫಲಿಸಲಿಲ್ಲ..!

ಇತ್ತೀಚೆಗಷ್ಟೇ ಪಾಕಿಸ್ತಾನದ ವಿಶೇಷ ಪ್ರತಿನಿಧಿಯಾಗಿ ಮೊಹಮ್ಮದ್​ ಸಾದಿಕ್ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ಬಂದ ಕೆಲವೇ ದಿನಗಳಲ್ಲಿ ಈ ಒಂದು ವಾಯುದಾಳಿ ನಡೆದಿದೆ. ಸಾದಿಕ್ ಕಾಬೂಲ್ ಹಾಗೂ ಇಸ್ಲಾಮಾಬಾದ್​ ನಡುವಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ತಮ್ಮ ಭೇಟಿಯಲ್ಲಿ ಚರ್ಚೆ ಮಾಡಿದ್ದರು. ಅದರ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಭವಿಷ್ಯದಲ್ಲಿ ಈ ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಭಾರೀ ಪೆಟ್ಟುಕೊಟ್ಟಿದೆ.

2022ರಲ್ಲಿ ಟಿಟಿಪಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಹಲವಾರು ಸೈನಿಕರ ಸಾವಿಗೆ ಕಾರಣವಾಗಿದ್ದಲ್ಲದೇ ಡಜನ್​ಗೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಈ ಏರ್​ಸ್ಟ್ರೈಕ್ ನಡೆಸಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment