newsfirstkannada.com

ಮೈದಾನದಲ್ಲಿ ಬದ್ಧ ವೈರಿಯಂತೆ ಇರುತ್ತಿದ್ದ ಪಾಕ್​ನ ಮಾಜಿ ವೇಗಿ ಅಖ್ತರ್​, ಸಚಿನ್​ರನ್ನು ಗುಣಗಾನ ಮಾಡಿದ್ದೇಕೆ..?

Share :

Published August 20, 2023 at 8:44am

  ಮಿಡಲ್​ ಆರ್ಡರ್​ ಬ್ಯಾಟಿಂಗ್​ನಲ್ಲಿ ಯುವರಾಜ್​ ಸಿಂಗ್ ಬೆಸ್ಟ್

  ಪಾಕಿಸ್ತಾನದ​ ವೇಗಿ ಈ ರೀತಿ ಗುಣಗಾನ ಮಾಡಲು ಏನು ಕಾರಣ?

  ಲಿಟ್ಲ್ ಮಾಸ್ಟರ್ ಸಚಿನ್ ವಿಶ್ವದ ಸರ್ವಕಾಲಿಕ ಗ್ರೇಟೆಸ್ಟ್​ ಆಟಗಾರ

ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಶೋಯೆಬ್ ಅಖ್ತರ್ ಅವರು ಸಚಿನ್​ ತೆಂಡೂಲ್ಕರ್​ರನ್ನ ಹಾಡಿ ಹೊಗಳಿದ್ದಾರೆ. ಅವರೊಬ್ಬ ಸರ್ವಶ್ರೇಷ್ಠ ಹಾಗೂ ಅಸಾಧಾರಣ ಪ್ರತಿಭೆ ಹೊಂದಿದ್ದು ವಿಶ್ವದಲ್ಲಿಯೇ ಸಚಿನ್​ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪಾಕ್​ ಬೌಲರ್​ ಗುಣಗಾನ ಮಾಡಿದ್ದಾರೆ.

ಕ್ರಿಕೆಟ್​ ಲೋಕದಲ್ಲಿ 24 ವರ್ಷಗಳ ಕಾಲ ಸುದೀರ್ಘವಾಗಿ ಆಡಿದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್ ವಿಶ್ವದ ಹಲವಾರು ಫೇಮಸ್​ ಬೌಲರ್​ಗಳ ಎಸೆತಗಳನ್ನ ತಮ್ಮ ಬ್ಯಾಟ್​ನಿಂದ ಎದುರಿಸಿದ್ದಾರೆ. ಇಲ್ಲಿವರೆಗೂ ಸಚಿನ್​ ಟೆಸ್ಟ್​ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ ಗಳಿಸಿದವರಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಲಿಟ್ಲ್ ಮಾಸ್ಟರ್ ಅನ್ನು ಸರ್ವಕಾಲಿಕ ಗ್ರೇಟೆಸ್ಟ್​ ಆಟಗಾರ ಎಂದು ಕರೆಯುವುದಕ್ಕೆ ಶೋಯೆಬ್ ಅಖ್ತರ್ ಕಾರಣ ಕೂಡ ಕೊಟ್ಟಿದ್ದಾರೆ.

ಮಾಜಿ ಕ್ರಿಕೆಟರ್ ಸಚಿನ್ ಮತ್ತು ಪಾಕ್​ ವೇಗಿ ಅಖ್ತರ್

ಶೇನ್​ ವಾರ್ನ್​, ಮೆಕ್​ಗ್ರಾತ್​, ವಾಸೀಂ ಅಕ್ರಂ ಸೇರಿದಂತೆ ವೆಸ್ಟ್​ ಇಂಡೀಸ್​, ದ.ಆಫ್ರಿಕಾ ಬೌಲರ್​ಗಳನ್ನು ತೆಂಡೂಲ್ಕರ್​ ಎದುರಿಸಿದ್ದಾರೆ. 10 ವರ್ಷಗಳ ನಂತರ ವಿಶ್ವದ ವೇಗದ ​ಬೌಲರ್​ಗಳಾದ ನಾನು, ಬ್ರೆಟ್​ ಲೀ, ಡೇಲ್ ಸ್ಟೈನ್ ಸೇರಿದಂತೆ ಇತರೆ ಬೌಲರ್​ಗಳ ಎಸೆತಗಳನ್ನು ಎದುರಿಸಿದ್ದಾರೆ. ಇಷ್ಟೊಂದು ಸುದೀರ್ಘವಾಗಿ ಆಡುವುದು ಸಾಮಾನ್ಯವಲ್ಲ. ಸಚಿನ್ ತೆಂಡೂಲ್ಕರ್ ನಿಸ್ಸಂದೇಹವಾಗಿ ಸಜ್ಜನರ ಆಟವನ್ನು ಆಡಿದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು. ಹೀಗಾಗಿ ಅವರನ್ನು ನಾನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದಿದ್ದೇನೆ ಎಂದು ಅಖ್ತರ್ ಹೇಳಿದ್ದಾರೆ. ಮಿಡಲ್​ ಆರ್ಡರ್​ನಲ್ಲಿ ಆಡುವ ಉತ್ತಮ ಬ್ಯಾಟ್ಸ್​ಮನ್ ಎಂದರೆ ಅದು ಯುವರಾಜ್​ ಸಿಂಗ್​ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮೈದಾನದಲ್ಲಿ ಬದ್ಧ ವೈರಿಯಂತೆ ಇರುತ್ತಿದ್ದ ಪಾಕ್​ನ ಮಾಜಿ ವೇಗಿ ಅಖ್ತರ್​, ಸಚಿನ್​ರನ್ನು ಗುಣಗಾನ ಮಾಡಿದ್ದೇಕೆ..?

https://newsfirstlive.com/wp-content/uploads/2023/08/SACHIN_BATTING.jpg

Load More