/newsfirstlive-kannada/media/post_attachments/wp-content/uploads/2024/11/Champions-Trophy.jpg)
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನು ವಹಿಸಲು ಪಿಸಿಬಿ ಅಂದ್ರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಜ್ಜಾಗಿತ್ತು. ಅದಕ್ಕೆಲ್ಲಾ ತಯಾರಿಯೂ ಕೂಡ ನಡೆಸಿತ್ತು. ಆದ್ರೆ ಈಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆತಿಥ್ಯದಿಂದ ಹಿಂದೆ ಸರಿಯಲು ಸಜ್ಜಾಗಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ. ಈಗಾಗಲೇ ಭಾರತ ತಂಡ ಪಾಕಿಸ್ತಾನದಲ್ಲಿ ನಡೆಯುವ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಹೀಗಾಗಿ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ವರದಿ ಮಾಡಿರುವ ಪ್ರಕಾರ, ಪಾಕಿಸ್ತಾನದ ಸರ್ಕಾರ ಪಿಸಿಬಿಗೆ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಸರಿ ಹೋಗುವವರೆಗೂ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುವ ಯಾವುದೇ ಐಸಿಸಿ ಹಾಗೂ ಏಸಿಯನ್ ಕ್ರಿಕೆಟ್ ಟ್ರೋಫಿ ಪಂದ್ಯಗಳನ್ನು ನಿಲ್ಲಿಸುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಳ್ಳಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೊನೆಗೂ ಮೌನ ಮುರಿದ ಕೆಎಲ್​ ರಾಹುಲ್; LSG ತಂಡದಿಂದ ಹೊರ ಬಂದಿರುವ ಹಿಂದಿನ ಸತ್ಯ ರಿವೀಲ್..!
ಸದ್ಯ ಬಂದಿರುವ ವರದಿ ಪ್ರಕಾರ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದ ಪಕ್ಷದಲ್ಲಿ ತಾನು ಭಾಗವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ಮೇಲೆಯೂ ಐಸಿಸಿ ಬಳಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿಯೇ ನಡೆಸುವ ಬಗ್ಗೆ ಸ್ಪಷ್ಟನೆ ಕೇಳಲಿದೆ. ಅದು ಮಾತ್ರವಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಯಾವುದೇ ಚಕಾರವೆತ್ತಿಲ್ಲ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/11/Champions-Trophy-1.jpg)
ಈಗಾಗಲೇ ಐಸಿಸಿ, ಬಿಸಿಸಿಐ ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸ್ಪಷ್ಟಪಡಿಸಿದೆ. ಅದು ಮಾತ್ರವಲ್ಲದೇ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಹೈಬ್ರಿಡ್ ಮಾದರಿಯ ಪಂದ್ಯಗಳು ನಡೆಸುವ ಬಗ್ಗೆಯೂ ಯಾವ ಮಾತುಕತೆಗಳು ಆಗಿಲ್ಲವೆಂದು ಪಿಸಿಬಿ ಹೇಳಿಕೊಂಡಿದೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಆ ಎರಡು ಪ್ರಶ್ನೆಗೆ ಇನ್ನೂ ಉತ್ತರ ಇಲ್ಲ.. ಬರೀ ಟೆನ್ಶನ್ ಟೆನ್ಶನ್..!
ಕಳೆದ ಏಷ್ಯಾ ಕಪ್​ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗಿತ್ತು. ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಹಾಗೂ ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಿಸಲಾಗಿತ್ತು. ಈಗಾಗಲೇ ಭಾರತದ ನಿರ್ಧಾರವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಐಸಿಸಿಗೆ ಪಿಸಿಬಿ ಇ-ಮೇಲ್ ಕೂಡ ಮಾಡಿದೆ. ಸದ್ಯ ಪಿಸಿಬಿ ಭಾರತದ ವಿಚಾರವಾಗಿ ಪಾಕಿಸ್ತಾನ ಸರ್ಕಾರದಿಂದ ಬರಲಿರುವ ನೀತಿ ಮಾರ್ಗರ್ಶನಗಳೇನು ಎಂಬುದನ್ನು ತಿಳಿಯಲು ಕಾಯುತ್ತಿದೆ. ಮತ್ತೊಂದು ಕಡೆ ಭಾರತ ಕ್ರಿಕೆಟ್ ತಂಡ ಭಾಗವಹಿಸಲು ತಿರಸ್ಕರಿಸಿತ್ತಿರುವುದರ ಬಗ್ಗೆ ಅದರ ನಿರ್ಧಾರವೇನು ಎಂಬದನ್ನು ಕೂಡ ಕಾಯುತ್ತಿದೆ.ಆದ್ರೆ, ಎಲ್ಲಿಯೂ ಕೂಡ ಸರಿಯಾದ ಉತ್ತರ ಸಿಗುವ ನಿರೀಕ್ಷೆಯಂತೂ ಇಲ್ಲ.ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯದಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us