Advertisment

ಅಯ್ಯೋ.. 1 ಲೀಟರ್​ ಹಾಲಿನ ಬೆಲೆ 210, ಒಂದು ಕೆಜಿ ಕೋಳಿ ಬೆಲೆ 780.. ಬದುಕೋದೆ ಕಷ್ಟ ಕಣ್ರಿ

author-image
AS Harshith
Updated On
ಅಯ್ಯೋ.. 1 ಲೀಟರ್​ ಹಾಲಿನ ಬೆಲೆ 210, ಒಂದು ಕೆಜಿ ಕೋಳಿ ಬೆಲೆ 780.. ಬದುಕೋದೆ ಕಷ್ಟ ಕಣ್ರಿ
Advertisment
  • ಅಯ್ಯೋ.. ಆಹಾರ ಬೆಲೆ ಏರಿಕೆಯಿಂದ ಕಂಗೆಟ್ಟ ಪಾಕ್​
  • ಹಣದುಬ್ಬರ ಎದುರಿಸುತ್ತಿರೋ ಪಾಕ್​.. ಕೋಳಿ, ದನದ ಮಾಂಸದ ಬೆಲೆ ಗಗನಕ್ಕೆ
  • ಅಂತರಾಷ್ಟ್ರೀಯ ಹಣಕಾಸು ನಿಧಿ ಜೊತೆಗೆ ಮತ್ತೆ ಒಪ್ಪಂದ ಮಾಡಿಕೊಳ್ಳಲು ಮುಂದಾಯ್ತಾ ನೆರೆಯ ದೇಶ?

ನೆರೆಯ ದೇಶ ಪಾಕಿಸ್ತಾನ ಅಕ್ಷರಶಃ ಅರ್ಥಿಕ ಪರಿಸ್ಥಿತಿಯಿಂದ ಎಡವಿದೆ. ಸಂಕಷ್ಟದಲ್ಲಿ ಸಿಲುಕಿದೆ. ದೈನಂದಿನ ಆಹಾರ ಸಾಮಾಗ್ರಿಗಳ ಬೆಲೆಯಂತೂ ಗಗನಕ್ಕೇರಿದ್ದು, ಇದರಿಂದ ಅಲ್ಲಿನ ಜನರು ಜೀವಿಸಲು ಹರಸಾಹಸಪಡುವಂತಾಗಿದೆ. ಈ ನಿಟ್ಟಿನಲ್ಲಿ ಪಾಕ್​ ಅಂತರಾಷ್ಟ್ರೀಯ ಹಣಕಾಸು ನಿಧಿ ಜೊತೆಗೆ ಮತ್ತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

Advertisment

ಮಾಹಿತಿ ಪ್ರಕಾರ, ಪಾಕ್​ನಲ್ಲಿ ಒಂದು ಲೀಟರ್​ ಹಾಲಿನ ಬೆಲೆ 210 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 190 ರೂಪಾಯಿ ಇತ್ತು. ಇದೀಗ 20 ರೂಪಾಯಿ ಏಕಾಏಕಿ ಏರಿಕೆಯಾಗಿದೆ. ಇದರ ಜೊತೆಗೆ ಕೋಳಿ ಮಾಂಸದ ಬೆಲೆ ಕೂಡ ಏರಿಕೆಯಾಗಿದೆ. ಕಳೆದ ವಾರ ಒಂದು ಕೆಜಿ ಕೋಳಿಗೆ 620-650 ಇತ್ತು. ಆದರೆ ಪ್ರಸ್ತುತ ಬೆಲೆ 700-780 ರೂಪಾಯಿಗೆ ಏರಿಕೆಯಾಗಿದೆ.

ಅಂದಹಾಗೆಯೇ ಬ್ರಾಯ್ಲರ್​ ಕೋಳಿಯ ಬೆಲೆ 30-40 ರೂಪಾಯಿ ಏರಿಕೆಯಾಗಿದೆ. ಗ್ರಾಹಕರು ಪ್ರತಿ ಕೆಜಿ ಕೋಳಿಗೆ 480-500 ರೂಪಾಯಿ ಪಾವತಿಸಬೇಕಾದ ಅನಿರ್ವಾಯತೆ ಎದುರಾಗಿದೆ. ಕರಾಚಿಯಲ್ಲಿ ಬೆಲೆಗಳು ನಿರಂತರ ಏರಿಕೆಯಾಗುತ್ತಿದ್ದು, ಅಲ್ಲಿನ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ಹಾಲಿನ ಬೆಲೆ ಮತ್ತು ದನದ ಮಾಂಸದ ಅಭಾವವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಎಲುಬಿಲ್ಲದ ಕೋಳಿ ಮತ್ತು ದನದ ಮಾಂಸದ (ಬೋನ್​ ಲೆಸ್​ ಮಾಂಸ) ಬೆಲೆ ಪ್ರತಿ ಕೆಜಿಗೆ 900-100ಕ್ಕೇರಿದೆ.

ಇದನ್ನೂ ಓದಿ: 100 ರೂಪಾಯಿಗೆ ಮಗು ಮಾರಾಟ.. ಮದ್ಯವ್ಯಸನಿ ತಾಯಿಯಿಂದ 4 ತಿಂಗಳ ಮಗುವಿನ ರಕ್ಷಣೆ

Advertisment

ಸದ್ಯ ಪಾಕಿಸ್ತಾನ ಹಣದುಬ್ಬರವನ್ನು ಎದುರಿಸುತ್ತಿದೆ. ಪಾಕ್​ ವಿದೇಶಿ ವಿನಿಮಯ ಸಂಗ್ರಹವು 1998ರಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಒಂದು ತಿಂಗಳ ಆಮದನ್ನು ಸರಿದೂಗಿಸಲು ಪಾಕ್​ ಕಷ್ಟ ಪಡುತ್ತಿದೆ ಎನ್ನಲಾಗುತ್ತಿದೆ.

ಇದಲ್ಲದೆ ಕಳೆದ ವರ್ಷ ಪಾಕ್​​ನಲ್ಲಿ ಉಂಟಾದ ಪ್ರವಾಹದಿಂದ 1,739 ಜನರು ಬಲಿಯಾಗಿದ್ದಾರೆ. ಅನೇಕ ಮನೆಗಳು ಧ್ವಂಸಗೊಂಡಿವೆ. ಐಎಮ್​ಎಫ್​ ಒಪ್ಪಂದ ಮತ್ತು ಪಾಕ್​ ಸರ್ಕಾರದ ಬಿಕ್ಕಟ್ಟಿನ ಜೊತೆ ಜೊತೆಗೆ ಬೆಲೆಗಳು ಗಗನಕ್ಕೇರಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment