ಭಾರತದ ಮೇಲೆ ಮಿಸೈಲ್ ದಾಳಿಗೆ ಪಾಕ್ ಯತ್ನ.. ಹೊಡೆದುರುಳಿಸಿದ ನಮ್ಮ ಏರ್​ ಡಿಫೆನ್ಸ್​ ಸಿಸ್ಟಮ್..!

author-image
Ganesh
Updated On
ಭಾರತದ ಮೇಲೆ ಮಿಸೈಲ್ ದಾಳಿಗೆ ಪಾಕ್ ಯತ್ನ.. ಹೊಡೆದುರುಳಿಸಿದ ನಮ್ಮ ಏರ್​ ಡಿಫೆನ್ಸ್​ ಸಿಸ್ಟಮ್..!
Advertisment
  • ಭಾರತದ ಮೇಲೆ ಮಿಸೈಲ್ ದಾಳಿಗೆ ಪಾಕಿಸ್ತಾನ ಯತ್ನ
  • ಮಿಸೈಲ್​ ಹೊಡೆದುರುಳಿಸಿದ ಭಾರತದ ಏರ್​ ಡಿಫೆನ್ಸ್​ ಸಿಸ್ಟಮ್​
  • ಪಂಜಾಬ್​ನ ಅಮೃತ್​ಸರ್ ಬಳಿ ಕ್ಷಿಪಣಿ ಹೊಡೆದು ಕೌಂಟರ್

ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನ ತತ್ತರಿಸಿ ಹೋಗಿದೆ. ಬಾಲ ಸುಟ್ಟ ಬೆಕ್ಕಿನಂತೆ ಆಗಿರುವ ಪಾಕ್, ಇದೀಗ ಭಾರತದ ಮೇಲೆ ದಾಳಿ ಮಾಡುವಂತಹ ಮೊಂಡು ಪ್ರಯತ್ನ ಮಾಡ್ತಿದೆ. ಅಂತೆಯೇ ಪಂಜಾಬ್​ನ ಅಮೃತಸರ ಬಳಿ ಕ್ಷಿಪಣಿ ಅಟ್ಯಾಕ್​ಗೆ ಪ್ರಯತ್ನಿಸಿತ್ತು.

ಆದರೆ ಅದು ನಮ್ಮ ಏರ್​ ಡಿಫೆನ್ಸ್ ಸಿಸ್ಟಮ್​ಗೆ ಗೊತ್ತಾಗಿದೆ. ಕೂಡಲೇ ಅಲರ್ಟ್​ ಆದ ಸೇನೆ ಏರ್ ಡಿಫೆನ್ಸ್ ಸಿಸ್ಟಮ್​ ಮೂಲಕ ಹೊಡೆದು ಹಾಕಲಾಗಿದೆ. ಇದೀಗ ಪಾಕಿಸ್ತಾನದ ಕ್ಷಿಪಣಿಯನ್ನು ಭಾರತದ ಏರ್​ ಡಿಫೆನ್ಸ್ ಸಿಸ್ಟಮ್​ ಹೊಡೆದು ಹಾಕಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಚೀನಾ ಒಂದೇ ಅಲ್ಲ, ಯುದ್ಧ ನಡೆದ್ರೆ ಪಾಕ್​ಗೆ ಯಾರೆಲ್ಲ ಬೆಂಬಲ ಇದೆ? ಭಾರತಕ್ಕೆ ಎಷ್ಟು ಶತ್ರುಗಳಿದ್ದಾರೆ..

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಕಳೆದ ಮಂಗಳವಾರ ತಡರಾತ್ರಿ ಭಾರತದ ಸೇನೆ ಆಪರೇಷನ್ ಸಿಂಧೂರ್ ನಡೆಸಿತ್ತು. ಭಾರತೀಯ ಭೂ ಸೇನೆ ಹಾಗೂ ವಾಯುಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕ್​ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಂಡಿವೆ. ಒಟ್ಟು 21 ಉಗ್ರರ ನೆಲೆಗಳ ಮೇಲೆ ಭಾರತ ಅಟ್ಯಾಕ್ ಮಾಡಿ ಛಿದ್ರಛಿದ್ರ ಮಾಡಿದೆ. ಈ 21 ಉಗ್ರ ನೆಲೆಗಳಲ್ಲಿ 9 ಉಗ್ರರ ಪ್ರಮುಖ ಅಡುಗುತಾಣಗಳಾಗಿದ್ದವು.

ಆಪರೇಷನ್ ಸಿಂಧೂರ್​​ನಿಂದ ಕಂಗೆಟ್ಟಿರುವ ಪಾಕ್, ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳೋದಾಗಿದೆ. ಅಂತೆಯೇ ಭಾರತದ ಮೇಲೆ ಮೂರ್ಖ ಪ್ರಯತ್ನ ಮಾಡ್ತಿದೆ ಪಾಪಿ ಪಾಕಿಸ್ತಾನ.

ಇದನ್ನೂ ಓದಿ: ಎಲ್ಲಾ ಪೀಸ್ ಪೀಸ್..​! ಮುರಿದುಬಿದ್ದ ಭಯದ ಮನೆಗಳು.. ಎಲ್ಲೆಲ್ಲೂ ಸ್ಮಶಾನ ಗಾಬರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment