ಹಿಂದೂಸ್ಥಾನ ಕರುಣೆ ತೋರದಿದ್ದರೆ ನಾವು ಹಸಿವಿನಿಂದ ಸಾಯುತ್ತೇವೆ.. ಸತ್ಯ ಒಪ್ಪಿಕೊಂಡ ಪಾಕ್ ಸಂಸದ!

author-image
admin
Updated On
ಹಿಂದೂಸ್ಥಾನ ಕರುಣೆ ತೋರದಿದ್ದರೆ ನಾವು ಹಸಿವಿನಿಂದ ಸಾಯುತ್ತೇವೆ.. ಸತ್ಯ ಒಪ್ಪಿಕೊಂಡ ಪಾಕ್ ಸಂಸದ!
Advertisment
  • ಸಿಂಧೂ ನದಿ ನೀರು ಹಂಚಿಕೆಯ ಅಮಾನತ್ತಿಗೆ ಹೆದರಿದ ಪಾಕಿಸ್ತಾನ
  • ಪಾಕಿಸ್ತಾನದ 10ರಲ್ಲಿ 9 ಮಂದಿ ಇಂಡಸ್ ನದಿ ಪಾತ್ರದಲ್ಲಿ ವಾಸ ಇದ್ದಾರೆ
  • ಪಾಕಿಸ್ತಾನದ ಡ್ಯಾಂ, ಪವರ್ ಪ್ರಾಜೆಕ್ಟ್‌ಗಳೆಲ್ಲಾ ಇಂಡಸ್ ನದಿ ಪಾತ್ರದಲ್ಲಿವೆ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರದ ಸಮರ ಸಾರಿದ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನಕ್ಕೆ ಭಾರತ ಒಂದೊಂದೇ ಶಾಕಿಂಗ್ ನಿರ್ಧಾರಗಳನ್ನ ಕೊಡುತ್ತಾ ಬಂದಿದೆ. ಪಾಕ್ ವಿರುದ್ಧ ಭಾರತ ಕೈಗೊಂಡ ಮೊದಲ ದಿಟ್ಟ ನಿರ್ಧಾರದಲ್ಲಿ ಸಿಂಧೂ ನದಿ ನೀರು ಹಂಚಿಕೆಯ ಅಮಾನತು ಬಹುಮುಖ್ಯವಾಗಿದೆ.

ಜಸ್ಟ್ ಒಂದೇ ತಿಂಗಳಲ್ಲಿ ಭಾರತ ಸಿಂಧೂ ನದಿ ನೀರನ್ನು ನಿಲ್ಲಿಸುವ ಘೋಷಣೆ ಮಾಡಿರುವುದಕ್ಕೆ ಪಾಕಿಸ್ತಾನಕ್ಕೆ ಭವಿಷ್ಯದ ಭಯ ಕಣ್ಣೆದುರು ಬಂದಿದೆ. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಸಂಸದ ಸೈಯ್ಯದ್ ಅಲಿ ಜಾಫರ್ ಅವರು ಈ ಬಗ್ಗೆ ಮಾತನಾಡಿದ್ದು, ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ.

publive-image

‘ನಾವು ಹಸಿವಿನಿಂದ ಸಾಯಬೇಕಾಗುತ್ತೆ’
ನಾವು ಇಂಡಸ್ ನದಿ ನೀರು ಸಮಸ್ಯೆ ಬಗೆಹರಿಸದೇ ಇದ್ದರೆ ಹಸಿವಿನಿಂದ ಸಾಯುತ್ತೇವೆ. ಪಾಕಿಸ್ತಾನದಲ್ಲಿ ಶೇ.90ರಷ್ಟು ಫಸಲು ಇಂಡಸ್ ನದಿ ನೀರನ್ನೇ ಅವಲಂಭಿಸಿದೆ. ಈಗ ನಮ್ಮ ಮೇಲೆ ವಾಟರ್ ಬಾಂಬ್ ಬಿದ್ದಿದೆ ಎಂದು ಪಾಕ್ ಸಂಸದ ಸೈಯ್ಯದ್ ಅಲಿ ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಫೋನ್ ನಂಬರ್‌ ಸಿಕ್ಕ ಮೇಲೆ ಪವಿತ್ರಾ ಗೌಡ ಹೊಸ ವರಸೆ.. ಕುತೂಹಲ ಮೂಡಿಸಿದ ಪೋಸ್ಟ್‌; ಏನದು? 

ಆ ವಾಟರ್ ಬಾಂಬ್ ಅನ್ನು ನಾವು ನಿಷ್ಕ್ರಿಯಗೊಳಿಸಬೇಕು. ಇಂಡಸ್ ನದಿ ಪಾತ್ರವೇ ನಮ್ಮ ಜೀವನಾಡಿ. ಪಾಕಿಸ್ತಾನದ 10ರಲ್ಲಿ 9 ಮಂದಿ ಇಂಡಸ್ ನದಿ ಪಾತ್ರದಲ್ಲಿ ವಾಸ ಇದ್ದಾರೆ. ಪಾಕಿಸ್ತಾನದ ಡ್ಯಾಂ, ಪವರ್ ಪ್ರಾಜೆಕ್ಟ್‌ಗಳೆಲ್ಲಾ ಇಂಡಸ್ ನದಿ ಪಾತ್ರದಲ್ಲಿವೆ. ಪಾಕಿಸ್ತಾನದಲ್ಲಿ ನೀರಿನ ಸಮಸ್ಯೆ ಬಗೆಹರಿಸದೇ ಇದ್ದರೆ, ನಾವು ಹಸಿವಿನಿಂದ ಸಾಯಬೇಕಾಗುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment