/newsfirstlive-kannada/media/post_attachments/wp-content/uploads/2025/02/Team-India.jpg)
ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್​​ ಇಂಡಿಯಾಗೆ ಪಾಕಿಸ್ತಾನ ಸಾಧಾರಣ ರನ್​ಗಳ ಗುರಿ ನೀಡಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕ್​ ಪರ ಮಾಜಿ ಕ್ಯಾಪ್ಟನ್​​ ಬಾಬರ್ ಆಜಂ ಮತ್ತು ಯುವ ಬ್ಯಾಟರ್​​ ಇಮಾಮ್-ಉಲ್-ಹಕ್ ಜೋಡಿ ಓಪನಿಂಗ್​ ಮಾಡಿತು.
ಬಾಬರ್​ ಅಜಂ ತಾನು ಎದುರಿಸಿದ 26 ಬಾಲ್​ನಲ್ಲಿ 5 ಫೋರ್​ ಸಮೇತ 23 ರನ್​ ಸಿಡಿಸಿ ಔಟಾದ್ರು. ಇಮಾಮ್-ಉಲ್-ಹಕ್ ಕೇವಲ 10 ರನ್​ಗೆ ವಿಕೆಟ್​​ ಒಪ್ಪಿಸಿದರು.
ಬಳಿಕ ಕ್ರೀಸ್​ಗೆ ಬಂದ ಸೌದ್ ಶಕೀಲ್ ಉತ್ತಮ ಇನ್ನಿಂಗ್ಸ್​ ಆಡಿದರು. 76 ಎಸೆತಗಳಲ್ಲಿ 5 ಫೋರ್​ ಸಮೇತ 62 ರನ್​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ ಕ್ಯಾಪ್ಟನ್​​ ಮೊಹಮ್ಮದ್​ ರಿಜ್ವಾನ್​ ಅವರು 77 ಬಾಲ್​ನಲ್ಲಿ 3 ಫೋರ್​ ಸಮೇತ 46 ರನ್​​ ಸಿಡಿಸಿದ್ರು.
ಸಲ್ಮಾನ್ ಆಘಾ 19, ಖುಶ್ದಿಲ್ ಶಾ ಅವರು 2 ಸಿಕ್ಸರ್​ ಸಮೇತ 38 ರನ್​​ ಬಾರಿಸಿದರು. ನಸೀಪ್​ ಶಾ 14, ಹ್ಯಾರೀಸ್​ ರೌಫ್​​ 8, ತಯ್ಯಬ್ ತಾಹಿರ್ 4 ರನ್​​ ಕಲೆ ಹಾಕಿದರು. ಪಾಕ್​ ತಂಡ 49.4 ಓವರ್​​ನಲ್ಲಿ 241 ರನ್​​ ಕಲೆ ಹಾಕಿದ್ದು, ಟೀಮ್​ ಇಂಡಿಯಾ ಸಾಧಾರಣ ಟಾರ್ಗೆಟ್​ ಕೊಟ್ಟಿದೆ.
ಟೀಮ್​ ಇಂಡಿಯಾ ಪರ ಕುಲ್ದೀಪ್​ ಯಾದವ್​ 3, ಹಾರ್ದಿಕ್​ ಪಾಂಡ್ಯ 2, ಹರ್ಷಿತ್​ ರಾಣಾ, ಅಕ್ಷರ್​ ಪಟೇಲ್​​ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್​ ಪಡೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us