POK ಅಂದರೆ ಏನು..? ಕಾಶ್ಮೀರದ ಎಷ್ಟು ಭಾಗವನ್ನು ಪಾಕಿಸ್ತಾನ ಹೊಂದಿದೆ..?

author-image
Ganesh
Updated On
POK ಅಂದರೆ ಏನು..? ಕಾಶ್ಮೀರದ ಎಷ್ಟು ಭಾಗವನ್ನು ಪಾಕಿಸ್ತಾನ ಹೊಂದಿದೆ..?
Advertisment
  • ಪಹಲ್ಗಾಮ್ ದಾಳಿ ಬೆನ್ನಲ್ಲೇ 2 ದೇಶಗಳ ಮಧ್ಯೆ ಉದ್ವಿಗ್ನ
  • ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಸಾವು
  • ಯುದ್ಧದ ಭಯದಲ್ಲಿ ಇರುವ ಪಾಕಿಸ್ತಾನ ಜನರು

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಭಾರತ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡಬಹುದು ಎಂಬ ಭಯದಲ್ಲಿ ಪಾಕಿಸ್ತಾನ ಇದೆ. ಇಷ್ಟೆಲ್ಲ ಭಯದಲ್ಲಿದ್ದರೂ ಕೆದಕಿ ಭಾರತದತ್ತ ಬರೋದನ್ನ ಮಾತ್ರ ಬಿಟ್ಟಿಲ್ಲ. ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನ ಸೇನೆ ಗಡಿಯಲ್ಲಿ ಗುಂಡಿನ ದಾಳಿ ನಡೆಸಿ ಭಾರತವನ್ನು ಕೆಣಕುತ್ತಿದೆ. ಅದಕ್ಕೆ ಭಾರತೀಯ ಯೋಧರೂ ಕೂಡ ತಕ್ಕ ಉತ್ತರ ನೀಡುತ್ತಿದೆ.

ಕಾಶ್ಮೀರದ ಕೆಲವು ಭಾಗಗಳ ವಿಷಯದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಆರಂಭದಿಂದಲೂ ಉದ್ವಿಗ್ನತೆ ಇದೆ. ಪಹಲ್ಗಾಮ್‌ ಭಯೋತ್ಪಾದಕ ದಾಳಿಗೂ ಇದೇ ಕಾರಣ. ಕಾಶ್ಮೀರದ ಕೆಲವು ಭಾಗ ಪಾಕಿಸ್ತಾನದ ಬಳಿಯಿದ್ದು, ಉಳಿದ ಭಾಗ ಭಾರತದ ವ್ಯಾಪ್ತಿಗೆ ಬರುತ್ತದೆ. ಪಾಕಿಸ್ತಾನದೊಂದಿಗೆ ಇರುವ ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಪಿಒಕೆ (POK: Pakistan-Occupied Kashmir) ಅಂದರೆ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಪುಲ್ವಾಮಾ ದಾಳಿ ನಂತರ ಇದೇ ಮೊದಲ ಬಾರಿಗೆ CCPA ಸಭೆ.. ಈ ಸಮಿತಿಯ ಮಹತ್ವ ಏನು?

publive-image

ಕಾಶ್ಮೀರದ ಸುಮಾರು ಶೇಕಡ 35 ರಷ್ಟು ಭಾಗ ಪಾಕಿಸ್ತಾನ ಹೊಂದಿದೆ. ಜಮ್ಮುವಿನ ಬಗ್ಗೆ ಹೇಳೋದಾದರೆ 36, 315 ಚದರ್ ಕಿಲೋ ಮೀಟರ್​ನಲ್ಲಿ ಪಾಕಿಸ್ತಾನದ ಬಳಿ 13,297 ಚದರ್ ಕಿ.ಮೀ ಪಡೆದುಕೊಂಡಿದೆ. ಇದನ್ನು ನಾವು ಪಿಒಕೆ ಎಂದು ಕರೆಯುತ್ತೇವೆ. ಪಾಕಿಸ್ತಾನವು ಜಮ್ಮುವಿನ ಭಿಂಬರ್, ಕೋಟ್ಲಿ, ಮೀರ್ಪುರ್, ಪೂಂಚ್ ಹವೇಲಿ, ಬಾಗ್, ಸುಧಂತಿ, ಮುಜಫರಾಬಾದ್, ಹಟ್ಟಿಯಾನ್ ಮತ್ತು ಹವೇಲಿ ಮುಂತಾದ ಪ್ರದೇಶಗಳನ್ನು ಹೊಂದಿದೆ.

ಪಾಕಿಸ್ತಾನದಲ್ಲಿ ಜಮ್ಮುವಿನ ಈ ಎಲ್ಲಾ ಭಾಗಗಳನ್ನು ‘ಆಜಾದ್ ಕಾಶ್ಮೀರ’ ಎಂದು ಕರೆಯಲಾಗುತ್ತದೆ. ಪಿಒಕೆ ಬಳಿಯ ಕಾಶ್ಮೀರದ ಇನ್ನೊಂದು ಭಾಗವನ್ನು ಗಿಲ್ಗಿಟ್ ಬಾಲ್ಚಿಸ್ತಾನ್ (gilgit baltistan) ಎಂದು ಕರೆಯಲಾಗುತ್ತದೆ. ಇದು ಸುಮಾರು 72,785 ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣದ ಗಿಲ್ಗಿಟ್ ಬಾಲ್ಚಿಸ್ತಾನ್ ಪಾಕಿಸ್ತಾನದ ಒಡೆತನದಲ್ಲಿದೆ. ಇದು ಜಮ್ಮು ಮತ್ತು ಕಾಶ್ಮೀರದ ವಾಯುವ್ಯ ಭಾಗದಲ್ಲಿದೆ. ಪಿಒಕೆ ಗಿಲ್ಗಿಟ್ ಬಾಲ್ಟಿಸ್ತಾನ್ (ಕಾಶ್ಮೀರ) ದ ಹೆಚ್ಚಿನ ಭಾಗವನ್ನು ಹೊಂದಿದೆ.

ಇದನ್ನೂ ಓದಿ: ಉಗ್ರರ ವಿರುದ್ಧದ Operation akraman ಬ್ಲೂ ಪ್ರಿಂಟ್ ರೆಡಿ.. ಟಾರ್ಗೆಟ್​ ಫಿಕ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment