/newsfirstlive-kannada/media/post_attachments/wp-content/uploads/2025/05/PAK-ARMY.jpg)
ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂಬ ಎನ್ನಲಾಗಿದೆ. ಪಾಕ್ಗೆ ಭಾರತ ಆಗಾಗ ಎಚ್ಚರಿಕೆ ನೀಡುತ್ತಿದ್ದರೂ, ವಿಶ್ವದ ನಾಯಕರುಗಳಿಂದ ಬುದ್ಧಿ ಹೇಳಿಸಿದರೂ ತನ್ನ ನರಿಬುದ್ಧಿಯನ್ನು ಮಾತ್ರ ಬಿಡಲಿಲ್ಲ.
ಇದನ್ನೂ ಓದಿ: ಆಪರೇಷನ್ ಸಿಂಧೂರ್; ಭಾರತದಿಂದ ಮಹತ್ವದ ಸುದ್ದಿಗೋಷ್ಟಿ, ಹೈಲೈಟ್ಸ್..!
ಇದೀಗ ಪಹಲ್ಗಾಮ್ ದಾಳಿಯ ಪ್ರತಿಯಾಗಿ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಇಷ್ಟಿದ್ದೂ ಪಾಕ್ ನಾಯಿ ಬಾಲ ಡೊಂಕು ಎಂಬಂತೆ ವರ್ತಿಸುತ್ತಿದೆ. ಆಪರೇಷನ್ ಸಿಂಧೂರ್ ದಾಳಿಯಲ್ಲಿ ಹಲವು ಉಗ್ರರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಉಗ್ರರ ಆರೋಗ್ಯ ವಿಚಾರಿಸಲು ಪಾಕ್ ಸೇನಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಜೈಷ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರರನ್ನ ಪಾಕ್ ಸೇನಾಧಿಕಾರಿಯೊಬ್ಬ ಭೇಟಿಯಾಗಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿ ಆಸ್ಪತ್ರೆಗೆ ಬಂದು ಉಗ್ರರ ಕೈಕುಲುಕಿ ಮಾಹಿತಿ ಪಡೆಯುತ್ತಿರೋದನ್ನು ಗಮನಿಸಬಹುದಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್.. ಭಾರತ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಭರತ್ ಭೂಷಣ್ ತಂದೆ
ಮಾತ್ರವಲ್ಲ, ಜಮ್ಮು-ಕಾಶ್ಮೀರದ ಪೂಂಚ್ನಲ್ಲಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಭಾರತದ 8 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇನ್ನು ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಚರಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದೆ. ಸುದ್ದಿಗೋಷ್ಟಿಯಲ್ಲಿ ನೀಡಿದ ಮಾಹಿತಿಯಂತೆ ಆಪರೇಷನ್ ಸಿಂಧೂರ್ನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿಯಾಗಿದೆ. ಪಾಕ್ ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ಆಗಿಲ್ಲ. ಸಾಮಾನ್ಯ ನಾಗರಿಕರಿಗೂ ಯಾವುದೇ ಹಾನಿ ಮಾಡಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಪಾಕ್, ಭಾರತದ ನಾಗರಿಕರ ಮೇಲೆ ದಾಳಿ ಮಾಡಿದೆ.
ಇದನ್ನೂ ಓದಿ: ಟಾರ್ಗೆಟ್ 9! ಆಪರೇಷನ್ ಸಿಂಧೂರ ರೋಚಕ ವಿಡಿಯೋ ರಿಲೀಸ್ ಮಾಡಿದ ಸೇನೆ VIDEO
Pak Army officer visited hospital to check on Casualties. listen to the slogan from 10 second onwards.#Pakistanpic.twitter.com/TLZtu1quYQ
— Swastika Sruti (@SrutiSwastika) May 7, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ