ಭಾರತದ ಪಂಚ್​​ಗೆ ಪಾಕ್ ಪ್ರಧಾನಿಗೆ ಪುಕಪುಕ.. ಟ್ವೀಟ್ ಮಾಡಿ ಅಧಿಕಾರಿಗಳಿಗೆ ಏನ್ ಹೇಳಿದ್ರು..?

author-image
Ganesh
Updated On
ಭಾರತದ ಪಂಚ್​​ಗೆ ಪಾಕ್ ಪ್ರಧಾನಿಗೆ ಪುಕಪುಕ.. ಟ್ವೀಟ್ ಮಾಡಿ ಅಧಿಕಾರಿಗಳಿಗೆ ಏನ್ ಹೇಳಿದ್ರು..?
Advertisment
  • ಏಪ್ರಿಲ್ 22 ರಂದು ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ದಾಳಿ
  • ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ
  • ಭಾರತದ ನಿರ್ಣಯ ಗೊತ್ತಾಗುತ್ತಿದ್ದಂತೆಯೇ ಪಾಕ್​ಗೆ ಪುಕಪುಕ..!

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸಿಂಧೂ ನದಿ ನೀರು ಒಪ್ಪಂದ ತಾತ್ಕಾಲಿಕವಾಗಿ ಅಮಾನತಿನಲ್ಲಿಡುವ ಮೂಲಕ ಭಾರತ ಸರ್ಕಾರ ಪಾಕ್​ಗೆ ದೊಡ್ಡ ಆಘಾತ ನೀಡಿದೆ. ಭಾರತದ ಈ ಕ್ರಮಕ್ಕೆ ಹೆದರಿರುವ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆದಿದೆ. ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರೇ ಈ ಬಗ್ಗೆ ಖುದ್ದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ ಪ್ರತೀಕಾರ ಹೇಗೆ? 3 ಹಂತದಲ್ಲಿ ಪಾಕ್‌ ಸೊಕ್ಕು ಮುರಿಯಲು ನಿರ್ಧಾರ

ಭಾರತ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಲು ಗುರುವಾರ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆಯಲಾಗುವುದು ಎಂದಿದ್ದಾರೆ. ನಿನ್ನೆ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಭದ್ರತಾ ಸಮಿತಿ (CCS)ಯ ತುರ್ತು ಸಭೆ ನಡೆಯಿತು. ಈ ವೇಳೆ ಪಹಲ್ಗಾಮ್‌ ದಾಳಿಗೆ ಸಂಬಂಧಿಸಿ ಮಹತ್ವದ ಚರ್ಚೆ ಆಗಿದೆ. ಬಳಿಕ ಪಾಕ್​ಗೆ ಪಾಠ ಕಲಿಸಲು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮೋದಿ ಮೀಟಿಂಗ್​ನಲ್ಲಿ ತೆಗೆದುಕೊಂಡ ನಿರ್ಧಾರಗಳು..!

  • ಸಿಂಧೂ ನದಿ ನೀರು ಒಪ್ಪಂದ ಈ ಕ್ಷಣದಿಂದಲೇ ಅಮಾನತಿನಲ್ಲಿ ಇಡಲಾಗುತ್ತೆ
  •  ಭಾರತ ಪಾಕಿಸ್ತಾನ ಗಡಿಯ ಅಠಾರಿ ಚೆಕ್‌ಪೋಸ್ಟ್‌ ಈ ಕ್ಷಣದಿಂದಲೇ ಕ್ಲೋಸ್‌
  •  ಪಾಕಿಸ್ತಾನಕ್ಕೆ ಹೋಗಿರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು
  •  SAARC ವೀಸಾ ಅಡಿ ಪಾಕಿಸ್ತಾನದ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ
  •  ಈ ಹಿಂದೆ ಪಾಕ್ ನಾಗರಿಕರಿಗೆ ನೀಡಲಾಗಿರುವ ವಿಶೇಷ ವೀಸಾಗಳೂ ರದ್ದು
  •  ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು
  •  ಪಾಕ್‌ನ ರಾಯಭಾರ ಕಚೇರಿ ಅಧಿಕಾರಿಗಳಿಗೆ ಭಾರತ ಬಿಡಲು ವಾರದ ಗಡುವು
  •  ಪಾಕ್‌ನ 3 ಸೇನೆಯ ಅಡ್ವೈಸರ್‌ಗಳಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ
  •  ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್‌ನಲ್ಲಿರೋ ಅಧಿಕಾರಿಗಳೂ ವಾಪಸ್‌
  •  ಭಾರತದ ಮೂರು ಸೇನೆಯ ಅಡ್ವೈಸರ್‌ಗಳಿಗೆ ಭಾರತಕ್ಕೆ ಮರಳೋಕೆ ಸೂಚನೆ
  •  ಭಾರತದಲ್ಲಿರೋ ಪಾಕ್‌ ರಾಯಭಾರ ಕಚೇರಿಯ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ
  •  ಭೂ ಸೇನೆ, ವಾಯು, ನೌಕಾ ಸೇನೆಗಳಿಗೆ ಹದ್ದಿನ ಕಣ್ಗಾವಲಿಡೋಕೆ ಸೂಚನೆ

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ BSF ಕೂಂಬಿಂಗ್ ತೀವ್ರ; ಓರ್ವ ಯೋಧ ಹುತಾತ್ಮ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment