ಲೈವ್‌ ಟಿವಿ ಶೋನಲ್ಲೇ ಪಂಚ್‌ ಕೊಟ್ಟ ರಾಜಕಾರಣಿಗಳು.. ಪಾಕಿಸ್ತಾನದ ಮಾನ, ಮರ್ಯಾದೆ ಹರಾಜು; ಆಗಿದ್ದೇನು?

author-image
admin
Updated On
ಲೈವ್‌ ಟಿವಿ ಶೋನಲ್ಲೇ ಪಂಚ್‌ ಕೊಟ್ಟ ರಾಜಕಾರಣಿಗಳು.. ಪಾಕಿಸ್ತಾನದ ಮಾನ, ಮರ್ಯಾದೆ ಹರಾಜು; ಆಗಿದ್ದೇನು?
Advertisment
  • 2024ರ ಜನವರಿಗೆ ಪಾಕಿಸ್ತಾನದಲ್ಲಿ ಜಿದ್ದಾಜಿದ್ದಿನ ಸಾರ್ವತ್ರಿಕ ಚುನಾವಣೆ
  • ಚುನಾವಣೆಗೂ ಮುನ್ನ ಪಾಕಿಸ್ತಾನದಲ್ಲಿ ರಾಜಕೀಯ ನಾಯಕರ ಕಿತ್ತಾಟ
  • ಇಮ್ರಾನ್ ಖಾನ್, ನವಾಜ್ ಷರೀಫ್ ಬೆಂಬಲಿಗರ ಮಧ್ಯೆ ಲೈವ್ ಜಗಳ

ಇಸ್ಲಾಮಾಬಾದ್‌: ಪಾಕಿಸ್ತಾನ ಮೊದಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಪರದಾಡುತ್ತಿದೆ. ಪಾಕಿಸ್ತಾನದ ಕೋಟ್ಯಾಂತರ ಮಂದಿ ವಿದೇಶಗಳಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ ಅನ್ನೋ ವರದಿಯಾಗಿದೆ. ತೀವ್ರ ಹಣಕಾಸಿನ ಬಿಕ್ಕಟ್ಟು, ಅರಾಜಕತೆಯ ವಾತಾವರಣದಲ್ಲಿ ಪಾಕಿಸ್ತಾನ ಮುಂದಿನ ಜನವರಿಗೆ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿದೆ. ಈ ಚುನಾವಣೆಗೂ ಮುನ್ನ ಪಾಕಿಸ್ತಾನದಲ್ಲಿ ರಾಜಕೀಯ ನಾಯಕರ ಮೇಲಾಟ, ಹೈಡ್ರಾಮಾಗಳು ಜೋರಾಗಿದೆ.

ಪಾಕಿಸ್ತಾನದಲ್ಲಿ ಚುನಾವಣಾ ರಾಜಕಾರಣ ರಂಗೇರಿದ್ದು, ರಾಜಕೀಯ ಪಕ್ಷಗಳ ಮುಖಂಡರು ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ರಾಜಕಾರಣಿಗಳ ಜಟಾಪಟಿ ಎಷ್ಟರ ಮಟ್ಟಿಗೆ ತಾರಕಕ್ಕೇರಿದೆ ಅಂದ್ರೆ ಲೈವ್ ಟಿವಿ ಶೋನಲ್ಲಿ ಗುದ್ದಾಡಿಕೊಂಡಿದ್ದಾರೆ. ಟಿವಿ ಲೈವ್‌ ಚರ್ಚೆ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಕೈ, ಕೈ ಮಿಲಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ರಸ್ತೆಯಿಂದ ಸೀದಾ ನದಿಗೆ ಜಾರಿದ ಬಸ್.. 25 ಪ್ರಯಾಣಿಕರಿಗೆ ಆಪತ್ತು! ಭಯಾನಕ ವಿಡಿಯೋ ನೋಡಿ

ಪಾಕಿಸ್ತಾನದ ಕಾಲ್‌ ತಕ್‌ ಅನ್ನೋ ಟಿವಿಯ ಕಾರ್ಯಕ್ರಮದಲ್ಲಿ ಈ ಕಿತ್ತಾಟ ನಡೆದಿದೆ. ಲೈವ್‌ ಚರ್ಚೆಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷದ ಶೇರ್ ಅಫ್ಜಲ್ ಮರ್ವಾತ್ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಾರ್ಟಿಯ ಅಫ್ನಾನ್ ಉಲ್ಲಾ ಖಾನ್ ಭಾಗಿಯಾಗಿದ್ದರು.

ಪಿಟಿಐ ಪಕ್ಷದ ಶೇರ್ ಅಫ್ಜಲ್ ಮರ್ವಾತ್ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಹಿಂಸಾಚಾರಕ್ಕೆ ಮುಸ್ಲಿಂ ಲೀಗ್ ಪಕ್ಷವೇ ಕಾರಣ ಎಂದು ಆರೋಪಿಸಿದರು. PML-N ಪಾರ್ಟಿಯ ಅಫ್ನಾನ್ ಉಲ್ಲಾ ಖಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಕೋಪಗೊಂಡ ಅಫ್ಜಲ್ ಮರ್ವಾತ್ ಸಿಟ್ಟಿಗೆದ್ದು ತಲೆಗೆ ಪಂಚ್ ಕೊಟ್ಟಿದ್ದಾರೆ. ಪರಸ್ಪರ ನೂಕಾಟ, ತಳ್ಳಾಟಕ್ಕೆ ಇಳಿದು ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಲೈವ್ ಟಿವಿ ಶೋನಲ್ಲಿ ಇವರಿಬ್ಬರು ಕಿತ್ತಾಟದ ದೃಶ್ಯ ಪ್ರಸಾರವಾಗಿದ್ದು, ನೇರಪ್ರಸಾರದಲ್ಲಿ ಕಿತ್ತಾಡಿದ ದೃಶ್ಯವನ್ನು ನೋಡಿದ ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಾಲ್‌ ತಕ್‌ ಚಾನೆಲ್‌ನಲ್ಲಿ ಚರ್ಚಾ ಕಾರ್ಯಕ್ರಮ ಫೇಮಸ್ ಆಗಿದ್ದು, ಲೈವ್ ಶೋನಲ್ಲಿ ಎರಡೂ ಪಾರ್ಟಿಯ ನಾಯಕರು ಕಿತ್ತಾಡಿಕೊಂಡ ದೃಶ್ಯ ಇಡೀ ದೇಶಾದ್ಯಂತ ವೈರಲ್ ಆಗಿದೆ. ಈ ವೈರಲ್ ವಿಡಿಯೋದಿಂದ ಪಾಕಿಸ್ತಾನದ ಅರಾಜಕತೆಯ ಮುಖವಾಡ ಬಟಾ ಬಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment