newsfirstkannada.com

ಪಾಕಿಸ್ತಾನದ ಕಂಪನಿ ಭಾರತದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆಯೇ..? Electoral Bondನ ಸತ್ಯಾಸತ್ಯತೆ ಬಹಿರಂಗ..!

Share :

Published March 16, 2024 at 9:33am

Update March 16, 2024 at 9:43am

    ಮಾರ್ಚ್​ 14 ರಂದು ಎಲೆಕ್ಟೋರಲ್ ಬಾಂಡ್ ಸಾರ್ವಜನಿಕಗೊಳಿಸಲಾಗಿದೆ

    ಪಾಕ್​ನ HUBCO ಕಂಪನಿ ರಾಜಕೀಯ ಪಕ್ಷಕ್ಕೆ ಹಣ ನೀಡಿದೆ ಎಂಬ ವದಂತಿ

    HUB ಒಂದು ಪಕ್ಷಕ್ಕೆ ಕೊಟ್ಟಿರುವ ಹಣ ಎಷ್ಟು ರೂಪಾಯಿ ಗೊತ್ತಾ?

ದೇಶದ ರಾಜಕೀಯ ಪಕ್ಷ ಒಂದಕ್ಕೆ ಪಾಕಿಸ್ತಾನ ಮೂಲದ ಕಂಪನಿಯೊಂದು ದೇಣಿಗೆ ನೀಡಿದೆ ಎಂಬ ಸುದ್ದಿ ಬಿರುಗಾಳಿ ಎಬ್ಬಿಸಿದೆ. ಇದೀಗ ಅದರ ಸತ್ಯಾಸತ್ಯತೆ ಬಹಿರಂಗವಾಗಿದೆ.

ಇದು ಹೌದಾ..?
ಸುಪ್ರೀಂ ಕೋರ್ಟ್​ ಸೂಚನೆಯಂತೆ ಎಸ್​​ಬಿಐ ಮಾರ್ಚ್​ 14 ರಂದು ಎಲೆಕ್ಟೋರಲ್ ಬಾಂಡ್​​ಗಳ ಬಗ್ಗೆ ಡೇಟಾ ನೀಡಿದೆ. ಅದನ್ನು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಅದರಲ್ಲಿ HUB ಪವರ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯೂ ಕೂಡ ದೇಣಿಗೆ ನೀಡಿದೆ. ಪಾಕಿಸ್ತಾನದಲ್ಲಿ ಇದೇ ಹೆಸರಿನಲ್ಲಿ ಕಂಪನಿ ಇರೋದು ನಿಜ. ಆದರೆ ಭಾರತದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿರೋದು ಪಾಕಿಸ್ತಾನ ಮೂಲದ ಕಂಪನಿ ಅಲ್ಲ. ದೆಹಲಿಯ ಗಾಂಧಿ ನಗರದಲ್ಲಿ ನೋಂದಣಿಯಾಗಿರುವ HUB ಪವರ್ ಕಂಪನಿ ಆಗಿದೆ. ಜಿಎಸ್‌ಟಿ ಪೋರ್ಟಲ್‌ನಲ್ಲಿ ಈ ಕಂಪನಿಯ ಬಗ್ಗೆ ಮಾಹಿತಿಯೂ ಲಭ್ಯವಿದ್ದು, 2018ರಲ್ಲಿ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ.

ಪಾಕಿಸ್ತಾನದ ‘ಹಬ್ ಪವರ್ ಕಂಪನಿ ಲಿಮಿಟೆಡ್’ (HUBCO) ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಹಬ್ ಪವರ್ ಪಾಕಿಸ್ತಾನದ್ದಲ್ಲ. ಬದಲಾಗಿ ಭಾರತೀಯ ಕಂಪನಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಎಷ್ಟು ದೇಣಿಗೆ ನೀಡಲಾಗಿದೆ?
ದೆಹಲಿಯಲ್ಲಿ ನೋಂದಣಿಯಾಗಿರುವ ಹಬ್ ಪವರ್ ಕಂಪನಿ 95 ಲಕ್ಷ ರೂಪಾಯಿ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವುದು ಗೊತ್ತಾಗಿದೆ. ಈ ದೇಣಿಗೆಯನ್ನು ಏಪ್ರಿಲ್ 18, 2019 ರಂದು ನೀಡಿದೆ. ಆ ಸಮಯದಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆಗಳು ನಡೆಯುತ್ತಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನದ ಕಂಪನಿ ಭಾರತದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆಯೇ..? Electoral Bondನ ಸತ್ಯಾಸತ್ಯತೆ ಬಹಿರಂಗ..!

https://newsfirstlive.com/wp-content/uploads/2024/03/MONEY.jpg

Load More