/newsfirstlive-kannada/media/post_attachments/wp-content/uploads/2024/02/imran.jpg)
ಇಸ್ಲಾಮಾಬಾದ್: ದೇಶದ ಗೌಪ್ಯತೆ ಸೋರಿಕೆ ಮಾಡಿದ ಕೇಸ್​ ಸಂಬಂಧ ಈಗಾಗಲೇ 14 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಇಮ್ರಾನ್ ಖಾನ್ ಮತ್ತು ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಖಾನ್ ಮದುವೆಯೇ ಕಾನೂನು ಬಾಹಿರ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಸಂಬಂಧ ಇಬ್ಬರಿಗೂ ತಲಾ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಇಮ್ರಾನ್ ಖಾನ್ ಅವರಿಗೆ 2018ರಲ್ಲಿ ನಡೆದ ಮೂರನೇ ಮದುವೆಯು ಇದಾಗಿದ್ದು. ಆ ಮದುವೆಯೂ ಕಾನೂನು ಉಲ್ಲಂಘಿಸಿದೆ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ಅಚ್ಚರಿ ಎಂದರೆ ಒಂದೇ ವಾರದಲ್ಲಿ ಇಮ್ರಾನ್ ಖಾನ್ ವಿರುದ್ಧ ಪ್ರಕಟಗೊಂಡಿರುವ ಮೂರನೇ ತೀರ್ಪು ಇದಾಗಿದೆ.
/newsfirstlive-kannada/media/post_attachments/wp-content/uploads/2023/08/Imran-Khan.jpg)
71 ವರ್ಷದ ಇಮ್ರಾನ್ ಖಾನ್ ಅವರು ಸರ್ಕಾರದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೆ, ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಮತ್ತೊಂದು ಪ್ರಕರಣದಲ್ಲಿ ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಜತೆ 14 ವರ್ಷಗಳ ಸೆರೆವಾಸ ವಿಧಿಸಲಾಗಿತ್ತು. ಬುಶ್ರಾ ಬೀಬಿ ಅವರ ಮೊದಲ ಪತಿ ಖಾವರ್ ಮೇನಕಾ ಅವರು ದೂರು ದಾಖಲಿಸಿದ್ದರು. ಎರಡು ಮದುವೆಗಳ ನಡುವಿನ ಕಡ್ಡಾಯ ಅಂತರ ಅಥವಾ ಇದ್ದತ್ ಪಾಲಿಸುವ ಇಸ್ಲಾಮಿಕ್ ನಿಯಮವನ್ನು ಬುಶ್ರಾ ಉಲ್ಲಂಘಿಸಿದ್ದಾರೆ ಅಂತಾ ಆರೋಪಿಸಿದ್ದರು.
ಇದನ್ನು ಓದಿ: VIDEO: ಡ್ರೋನ್ ಪ್ರತಾಪ್, ಜಗ್ಗೇಶ್ ಮಧ್ಯೆ ನಿಜಕ್ಕೂ ನಡೆದಿದ್ದೇನು? ಅಸಲಿ ವಿಷಯ ಬಾಯ್ಬಿಟ್ಟ ಗೆಳೆಯ!
ಅಲ್ಲದೆ ತಮ್ಮ ಮಾಜಿ ಪತ್ನಿ ಮತ್ತು ಇಮ್ರಾನ್ ಖಾನ್ ಇಬ್ಬರೂ ಮದುವೆಗೂ ಮುನ್ನ ಅನೈತಿಕ ಸಂಬಂಧ ಹೊಂದಿದ್ದರು ಎಂದೂ ದೂರಿದ್ದರು. ಈ ಅಪರಾಧಕ್ಕೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಬಹುದಾಗಿದೆ. ಈಗ ಅಕ್ರಮವಾಗಿ ಮದುವೆಯಾದ ಆರೋಪದಲ್ಲಿ ಅವರಿಗೆ ಏಳು ವರ್ಷ ಸಜೆ ಜತೆ, ತಲಾ 5 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. ಸದ್ಯ ಇಮ್ರಾನ್ ಖಾನ್​ ರಾವಲ್ಪಿಂಡಿಯ ಗ್ಯಾರಿಸನ್ ನಗರದ ಕಾರಾಗೃಹದಲ್ಲಿ ಇದ್ದಾರೆ. ಅವರ ಹೆಂಡತಿಗೆ ಇಸ್ಲಾಮಾಬಾದ್‌ನ ಹಿಲ್‌ಟಾಪ್ ಬಂಗಲೆಯಲ್ಲಿಯೇ ಶಿಕ್ಷೆ ಅವಧಿ ಕಳೆಯಲು ಅನುಮತಿ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us