newsfirstkannada.com

5 ವರ್ಷದ ಬಾಲಕನಿಗೆ ಕುರ್ಚಿ ಬಿಟ್ಟು ಕೊಟ್ಟ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್; ವಿಡಿಯೋ!

Share :

Published March 30, 2024 at 6:13am

Update March 30, 2024 at 8:22am

    ನಾನೇ ಈಗ ಪ್ರಧಾನಮಂತ್ರಿ ಎಂದ ಪಾಕಿಸ್ತಾನದ ಅತ್ಯಂತ ಕಿರಿಯ ವ್ಲಾಗರ್

    ಮೊಹಮ್ಮದ್ ಸಿರಾಜ್ ಮಾತಿಗೆ ಪ್ರಧಾನಿ ಶೆಹಬಾಜ್ ಷರೀಫ್ ಫುಲ್ ಖುಷ್!

    ಮೊಹಮ್ಮದ್ ಶಿರಾಜ್ ಹಾಗೂ ಮುಸ್ಕಾನ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಹೈಡ್ರಾಮಾ ನಡೆದು ಇನ್ನೂ ಒಂದು ತಿಂಗಳು ಕಳೆದಿಲ್ಲ. 24ನೇ ಪ್ರಧಾನಮಂತ್ರಿಯಾಗಿ ಶೆಹಬಾದ್ ಷರೀಫ್‌ ಅವರು ಅಧಿಕಾರ ಸ್ವೀಕರಿಸಿ ಆಡಳಿತ ನಡೆಸುತ್ತಿದ್ದಾರೆ. ಪೊಲಿಟಿಕಲ್‌ ಹಂಗಾಮದ ಮಧ್ಯೆ ಪಾಕಿಸ್ತಾನದಲ್ಲಿ ಒಂದು ಅಪರೂಪದ ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು 5 ವರ್ಷದ ಪುಟ್ಟ ಬಾಲಕನನ್ನು ಪ್ರಧಾನಮಂತ್ರಿ ಕುರ್ಚಿಯಲ್ಲಿ ಕೂರಿಸಿದ್ದಾರೆ. ಕುರ್ಚಿ ಕೂತ ಬಾಲಕನು ಅದೇ ಜೋಶ್‌ನಲ್ಲಿ ನಾನೇ ಈಗ ಪ್ರಧಾನಮಂತ್ರಿ ಎಂದಿದ್ದಾನೆ.

ಪಾಕಿಸ್ತಾನದ ಅತ್ಯಂತ ಕಿರಿಯ ವ್ಲಾಗರ್ ಮೊಹಮ್ಮದ್ ಶಿರಾಜ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದಾರೆ. ಪಾಕ್‌ ಪ್ರಧಾನಿಯನ್ನು ಭೇಟಿ ಮಾಡಿರುವ ಶಿರಾಜ್‌ ತನ್ನ ಖುಷಿಯಾದ ಕ್ಷಣಗಳನ್ನು ವಿಡಿಯೋ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಚೋಟಾ ಪ್ರಧಾನಿ ಅನ್ನೋ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಚೀನಿಯರ ಮೇಲೆಯೇ ಪಾಕ್​ ಭಯೋತ್ಪಾದಕರಿಂದ ಅಟ್ಯಾಕ್​​.. ಉಗ್ರರ ಆತ್ಮಾಹುತಿ ದಾಳಿಗೆ ಐವರು ಬಲಿ

ಯಾರು ಈ ಕಿರಿಯ ವ್ಲಾಗರ್?

ಮೊಹಮ್ಮದ್ ಶಿರಾಜ್ ಹಾಗೂ ಮುಸ್ಕಾನ್. ಪಾಕಿಸ್ತಾನದ ಅತಿ ಕಿರಿಯ ವ್ಲಾಗರ್‌ಗಳು. ಅಕ್ಕ-ತಮ್ಮ ಮಾಡುವ ವಿಡಿಯೋಗಳು ಲಕ್ಷಾಂತರ ವೀವ್ಸ್‌ಗಳನ್ನ ಪಡೆದುಕೊಳ್ಳುತ್ತದೆ. ಇವರ ಕೈಯಲ್ಲಿ ವಿಡಿಯೋ ಮಾಡಿಸಲು ಎಷ್ಟೋ ಜನ ಮುಗಿಬಿದ್ದು ಕಾಯುತ್ತಾರೆ. ಪಾಕಿಸ್ತಾನದ ಕಿರಿಯ ವ್ಲಾಗರ್ ಅಂತಾನೇ ಈ ಅಕ್ಕ-ತಮ್ಮ ಫೇಮಸ್ ಆಗಿದ್ದಾರೆ.

ಪುಟಾಣಿ ವ್ಲಾಗರ್ ಅನ್ನು ಭೇಟಿ ಮಾಡಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭೇಟಿ ಮಾಡಲು ಅವಕಾಶ ನೀಡಿದ್ದರು. ಈಗಾಗಲೇ ಪ್ರಧಾನಿ ಕಚೇರಿಗೆ ಆಗಮಿಸಿದ್ದ ಮೊಹಮ್ಮದ್ ಶಿರಾಜ್ ಹಾಗೂ ಮುಸ್ಕಾನ್ ಹೊಸ ವ್ಲಾಗರ್ ವಿಡಿಯೋ ಮಾಡಿದ್ದಾರೆ.

View this post on Instagram

A post shared by Shehbaz Sharif (@shehbazsharif)

ಪ್ರಧಾನಿ ಕುರ್ಚಿ ಮೇಲೆ ಕೂತಿರುವ 5 ವರ್ಷದ ಬಾಲಕನ ಜೊತೆ ಶೆಹಬಾಜ್ ಷರೀಫ್ ನನ್ನ ಹೆಸರೇನು ಅಂತ ಕೇಳಿದ್ದಾರೆ. ಅದಕ್ಕೆ ಮೊಹಮ್ಮದ್ ಶಿರಾಜ್ ಶೆಹಬಾಜ್ ಷರೀಫ್ ಅಂಕಲ್ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ ಇವತ್ತು ನಾನೇ ಪ್ರಧಾನ ಮಂತ್ರಿ ಎಂದು ಹೇಳಿರೋದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಇಸ್ಲಾಮಾಬಾದ್‌ ಪ್ರಧಾನಮಂತ್ರಿ ಕಚೇರಿಯಲ್ಲಿ ವ್ಲಾಗರ್ ಕೆಲ ಕಾಲ ಎಲ್ಲರೂ ಖುಷಿಯಲ್ಲಿ ತೇಲಾಡುವಂತೆ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ವರ್ಷದ ಬಾಲಕನಿಗೆ ಕುರ್ಚಿ ಬಿಟ್ಟು ಕೊಟ್ಟ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್; ವಿಡಿಯೋ!

https://newsfirstlive.com/wp-content/uploads/2024/03/Pakistan-PM.jpg

Load More