ನಾವು ಕೂಡ ರೆಡಿ.. ಭಾರತವನ್ನು ಕೆರಳಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತು; ಏನಂದ್ರು?

author-image
admin
Updated On
ನಾವು ಕೂಡ ರೆಡಿ.. ಭಾರತವನ್ನು ಕೆರಳಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತು; ಏನಂದ್ರು?
Advertisment
  • ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಜೀವನಾಡಿ ಇದ್ದಂತೆ
  • ಭಾರತಕ್ಕೆ ನಾವು ಸೇನೆಯನ್ನು ಬಳಸಿ ಉತ್ತರ ನೀಡುತ್ತೇವೆ
  • ಪಹಲ್ಗಾಮ್‌ ದಾಳಿಯ ಬಗ್ಗೆ ಶೆಹಬಾಜ್ ಷರೀಫ್ ಹೇಳಿದ್ದೇನು?

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕವೂ ಪಾಕಿಸ್ತಾನದ ಧಿಮಾಕು, ಸೊಕ್ಕು ಕಡಿಮೆ ಆಗಿಲ್ಲ. ಪ್ರವಾಸಿಗರ ನರಮೇಧದ ಬಳಿಕ ಮೊದಲ‌ ಬಾರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ರತಿಕ್ರಿಯೆ ನೀಡಿದ್ದು, ಭಾರತಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಭಾರತ ತಕ್ಷಣವೇ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ಅಮಾನತು ಮಾಡಿದೆ. ಇದು ಪಾಕಿಸ್ತಾನಕ್ಕೆ ಮರ್ಮಾಘಾತವನ್ನು ತಂದಿದೆ. ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಜೀವನಾಡಿ ಇದ್ದಂತೆ. ಸಿಂಧೂ ನದಿಯ ನೀರನ್ನು ಭಾರತ ಬೇರೆ ಕಡೆ ತಿರುಗಿಸಿದರೆ ನಾವು ಸೇನೆಯನ್ನು ಬಳಸಿ ಉತ್ತರ ನೀಡುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.


">April 26, 2025

ನಾವು ಕೂಡ ರೆಡಿ!
2019ರಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಪಹಲ್ಗಾಮ್‌ನಲ್ಲಿ ಉಗ್ರರಿಂದ ಈ ಭೀಕರ ದಾಳಿ ನಡೆದಿದೆ. ಪಹಲ್ಗಾಮ್‌ ದಾಳಿಯ ಬಗ್ಗೆ ಮಾತನಾಡಿರುವ ಶೆಹಬಾಜ್ ಷರೀಫ್ ಅವರು ಪಹಲ್ಗಾಮ್‌ನಲ್ಲಿ ಭಾರತೀಯರು, ನೇಪಾಳದ ನಾಗರಿಕರು ಸೇರಿ 26 ಮಂದಿ ಸಾವನ್ನಪ್ಪಿದ್ದಾರೆ. ನಾವು ಈ ಘಟನೆಯನ್ನು ತಟಸ್ಥವಾಗಿ ತನಿಖೆ ನಡೆಸಲು ರೆಡಿ ಇದ್ದೇವೆ. ಪಾಕಿಸ್ತಾನ ನಂಬಲಾರ್ಹ, ನಿಷ್ಪಕ್ಷಪಾತ ತನಿಖೆಯ ಬಗ್ಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ಲೀಸ್ ನೀರು ಕೊಡಿ ಭಾರತ.. ತಮ್ಮ ದೇಶವನ್ನು ತಾವೇ ಟ್ರೋಲ್ ಮಾಡಿಕೊಂಡ ಪಾಕಿಗಳು! VIDEO 

ಭಾರತ, ಪಾಕಿಸ್ತಾನ ಪರಸ್ಪರ ದೂಷಿಸುವ ಶಾಶ್ವತ ಆಟದಲ್ಲಿ ನಿರತವಾಗಿದೆ. ಇದರ ಮತ್ತೊಂದು ತಾಜಾ ಉದಾಹರಣೆಯೇ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿ. ಪರಸ್ಪರ ದೂಷಿಸುವ ಕಾರ್ಯ ನಿಲ್ಲಬೇಕು. ಉಗ್ರರ ದಾಳಿ ಬಗ್ಗೆ ತಟಸ್ಥವಾದ ತನಿಖೆ ನಡೆಸುವುದಾದರೆ ಸಹಕರಿಸಲು ಪಾಕಿಸ್ತಾನ ಸಿದ್ಧವಿದೆ ಎಂದಿದ್ದಾರೆ.

ಪಾಕ್ ಪ್ರಧಾನಿ ಹೇಳಿದ್ದೇನು?
ಇಂಡಸ್ ವಾಟರ್ ಟ್ರೀಟಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಸಿಂಧೂ ನದಿಯ ಹರಿವನ್ನ ಬದಲಿಸುವ, ನಿಲ್ಲಿಸುವ, ಕಡಿತಗೊಳಿಸುವ ಯಾವುದೇ ಯತ್ನವನ್ನ, ಸಂಪೂರ್ಣ ಬಲದೊಂದಿಗೆ ಎದುರಿಸಲಾಗುತ್ತದೆ. ಯಾರೂ ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ಳುವ ತಪ್ಪು ಕಲ್ಪನೆ, ಅನಿಸಿಕೆಯಲ್ಲಿ ಇರುವುದು ಬೇಡ. ದೇಶದ ಘನತೆಯನ್ನ, ಗಡಿಯ ಐಕ್ಯತೆಯನ್ನ ಕಾಪಾಡೋಕೆ ನಮ್ಮ ವಿವಿಧ ಸಶಸ್ತ್ರ ಬಲಗಳು, ಸಶಕ್ತವಾಗಿವೆ.
2019ರಲ್ಲಿ ಭಾರತ ಮಾಡಿದ ಯತ್ನವನ್ನ ವಿಫಲಗೊಳಿಸಿದಂತೆ, ಈ ಬಾರಿಯೂ ಅವರ ಯತ್ನ ವಿಫಲಗೊಳಿಸಲಾಗುತ್ತೆ. ಸಂಪೂರ್ಣ ವಿಶ್ವಾಸದೊಂದಿಗೆ ನಾನು ಸ್ಪಷ್ಟಪಡಿಸ ಬಯಸುತ್ತೇನೆ. ನಮ್ಮ ಸೇನೆಯ ಬಗ್ಗೆ, ಪಾಕಿಸ್ತಾನದ ಜನರ ಬಗ್ಗೆ ಯಾರೂ ತಪ್ಪು ಕಲ್ಪನೆಯಲ್ಲಿರಬಾರದು. ಯಾವುದೇ ತಪ್ಪು ಹೆಜ್ಜೆ ಇಡಬಾರದು. 240 ಮಿಲಿಯನ್ ಜನರಿರುವ ಈ ದೇಶ, ನಮ್ಮ ಪಾಕಿಸ್ತಾನದ ಇಂಚಿಂಚು ಭೂಮಿಯ ರಕ್ಷಣೆಗೆ ಬದ್ಧವಾಗಿ ನಿಲ್ಲುತ್ತೆ ಅಂತ ಹೇಳಬಯಸುತ್ತೇನೆ.
- ಶೆಹಬಾಜ್ ಷರೀಫ್, ಪಾಕ್ ಪ್ರಧಾನಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment