newsfirstkannada.com

4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

Share :

Published April 17, 2024 at 2:49pm

    ವರುಣಾರ್ಭಟದಿಂದ ತೊಂದರೆಗೆ ಒಳಗಾದ ಜನ, ಜಾನುವಾರುಗಳು

    ದೇಶದ ವಿವಿಧೆಡೆ ಹೆಚ್ಚಾಗಿ ಮಳೆಯಾಗುತ್ತಿದ್ದರಿಂದ ಸಾವು- ನೋವು.!

    ಮಳೆಯಿಂದಾಗಿ 1,370 ಮನೆಗಳಿಗೆ ಹಾನಿ, ಕೆಲವು ನೆಲಕ್ಕೆ ಉಳುಳಿವೆ

ಪಾಕಿಸ್ತಾನದಲ್ಲಿ ಕಳೆದ 4 ದಿನಗಳಿಂದ ಧಾರಕಾರವಾಗಿ ಗುಡುಗು, ಮಿಂಚು ಸಮೇತ ಮಳೆಯಾಗುತ್ತಿರುವ ಕಾರಣ ಇಲ್ಲಿವರೆಗೆ 63 ಜನ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ ಎನ್ನಲಾಗಿದೆ.

ಪಾಕ್​ನಲ್ಲಿ ಭಾರೀ ಮಳೆ ಹಾಗೂ ಗುಡುಗಿನಿಂದ 14 ಜನರು ಮೃತಪಟ್ಟರೇ, ದೇಶದ ವಾಯುಭಾಗದಲ್ಲಿ ಮನೆಗಳು ನೆಲಕ್ಕೆ ಉರುಳಿ 32 ನಿವಾಸಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 15 ಮಕ್ಕಳು, 5 ಮಹಿಳೆಯರು ಕೂಡ ಸೇರಿದ್ದಾರೆ. 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು ರಕ್ಷಣಾ ಸಿಬ್ಬಂದಿ ಹುಡುಕಾಟದಲ್ಲಿ ತೊಡಗಿದ್ದಾರೆ. ಬಲೂಚಿಸ್ತಾನ್​​ದಲ್ಲೂ 10 ಮಂದಿ ಸಾವಿಗೀಡಾಗಿದ್ದಾರೆ. 1,370ಕ್ಕೂ ಹೆಚ್ಚು ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಪಾಕಿಸ್ತಾನದ ವರುಣಾರ್ಭಟ ಜೋರಾಗಿದ್ದು ಸಾಕಷ್ಟು ಪ್ರಾಣಿಗಳು ಉಸಿರು ಚೆಲ್ಲಿವೆ ಎಂದು ವರದಿಯಾಗಿದೆ. ಪಾಕಿಸ್ತನಾದ ಹಲವು ಪ್ರದೇಶಗಳು, ಬಲೂಚಿಸ್ತಾನ್ ಹಾಗೂ ಕಾಶ್ಮೀರದ ಕೆಲವೆಡೆ ಮಳೆ ಮುಂದುವರೆಯಲಿದೆ. ಅಲ್ಲದೇ ದುಬೈ, ಯುಎಇ, ಅಫ್ಘಾನ್​ನಲ್ಲೂ ಮಳೆಯಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಇನ್ನು ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು ರಸ್ತೆಗಳು ಗುರುತು ಸಿಗದಂತೆ ಆಗಿದ್ದು ಮನೆಗಳಲ್ಲಿ ನೀರು ತುಂಬಿದೆ. ಮಳೆ ಜೊತೆಗೆ ಗಾಳಿ ಕೂಡ ಬೀಸಿದ್ದರಿಂದ ಮನೆಯ ಮೇಲ್ಛಾವಣೆ ಹಾರಿ ಹೋಗಿವೆ. ಹಲವು ಕಡೆ ಮರಗಳು, ಕರೆಂಟ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಇಲ್ಲದೇ ಜನರು ಪರದಾಡಿದ್ದಲ್ಲದೇ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.

ಇದೇ ತಿಂಗಳಲ್ಲಿ ಪಾಕ್​ನ ನೆರೆಯ ರಾಷ್ಟ್ರ ಅಫ್ಘಾನ್​ನಲ್ಲೂ ಭೀಕರ ಮಳೆ ಸುರಿದಿದ್ದರಿಂದ 33 ಜನರು ಸಾವನ್ನಪ್ಪಿದ್ದರು. ಸುಮಾರು 200 ಜಾನುವಾರುಗಳು ಮೃತಪಟ್ಟರೇ, 600ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದವು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

https://newsfirstlive.com/wp-content/uploads/2024/04/PAK_RAIN_1.jpg

Load More