newsfirstkannada.com

ಬಾಬರ್​​-ರಿಜ್ವಾನ್​​ ಅಲ್ಲ.. ಪಾಕ್ ಸೂಪರ್​​ ಫ್ಯಾನ್ ಚಾಚಾಗೆ ಟೀಂ ಇಂಡಿಯಾದ ಈತ ನೆಚ್ಚಿನ ಕ್ರಿಕೆಟರ್​​!

Share :

Published August 16, 2023 at 4:01pm

  ಪಾಕಿಸ್ತಾನದ ಸೂಪರ್​ ಫ್ಯಾನ್​​ ಚಾಚಾ ಕ್ರಿಕೆಟರ್​​​!

  ಚಾಚಾಗೆ ಟೀಂ ಇಂಡಿಯಾದ ಈತ ಫೇವರೇಟ್​

  ಈ ಬಗ್ಗೆ ಚಾಚಾ ಕ್ರಿಕೆಟರ್​ ಹೇಳಿದ್ದೇನು ಗೊತ್ತಾ?

ಸದ್ಯದಲ್ಲೇ ಏಕದಿನ ವಿಶ್ವಕಪ್​​ ಟೂರ್ನಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ತಂಡಗಳು ಭಾಗಿಯಾಗಲಿವೆ. 10 ತಂಡಗಳು ಬೆಸ್ಟ್​​ ಟೀಂ ಅನೌನ್ಸ್​ ಮಾಡಲು ಸಾಕಷ್ಟು ಸರ್ಕಸ್​​ ಮಾಡುತ್ತಿವೆ. ಟೀಂ ಇಂಡಿಯಾ ಮಾತ್ರ ಮುಂದಿನ ತಿಂಗಳು ಅಕ್ಟೋಬರ್​​ 8ನೇ ತಾರೀಕಿನಂದು ಆಸ್ಟ್ರೇಲಿಯಾದ ವಿರುದ್ಧ ತನ್ನ ಮೊದಲ ಏಕದಿನ ವಿಶ್ವಕಪ್​​ ಪಂದ್ಯ ಆಡಲಿದೆ. ಇದಾದ ಬಳಿಕ ಅಕ್ಟೋಬರ್​​ 14ನೇ ತಾರೀಕು ಗುಜರಾತ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕಿಸ್ತಾನದ ಮಧ್ಯೆ ನಡೆಯಲಿರೋ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿಶ್ವಕಪ್​​ಗೆ ಮುನ್ನವೇ ಏಷ್ಯಾಕಪ್​​ ಟೂರ್ನಿ ಶುರುವಾಗಲಿದೆ. ಆಗಸ್ಟ್​​ 30ನೇ ತಾರೀಕಿನಿಂದ ನಡೆಯೋ ಏಷ್ಯಾಕಪ್​​ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕ್​ ತಂಡಗಳು ಎದುರಾಗಲಿವೆ. ಈ ಪಂದ್ಯದಲ್ಲಿ ವಿಶೇಷವಾಗಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇಡೀ ಕ್ರೀಡಾ ಲೋಕದ ಕಣ್ಣು ಬಿದ್ದಿದೆ. ಎಲ್ಲರೂ ಕೊಹ್ಲಿ ಬ್ಯಾಟಿಂಗ್​ಗಾಗಿಯೇ ಕಾಯುತ್ತಿದ್ದಾರೆ.

ಯೆಸ್​​, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟರ್​. ಇಡೀ ಜಗತ್ತಿನ ಎಲ್ಲಾ ದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್, ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲೂ ತಮ್ಮ ಆಟದ ಮೂಲಕವೇ ಎಲ್ಲ ಗಮನ ಸೆಳೆಯುತ್ತಾರೆ. ಇವರಿಗೆ ಪಾಕಿಸ್ತಾನದಲ್ಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಪಾಕ್​​ ತಂಡದ ಸೂಪರ್ ಅಭಿಮಾನಿ ‘ಚಾಚಾ ಕ್ರಿಕೆಟ್’ ಕೂಡ ಕೊಹ್ಲಿಯ ಬಿಗ್​ ಫ್ಯಾನ್​​ ಎಂಬ ವಿಚಾರ ಬೆಳಕಿಗೆ ಬಂದಿದೆ.

ಚಾಚಾ ಏನಂದ್ರು?

ಈ ಸಂಬಂಧ ನಾದಿರ್ ಅಲಿ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿರೋ ‘ಚಾಚಾ ಕ್ರಿಕೆಟ್’, ಕೊಹ್ಲಿ ಅತ್ಯಂತ ದೊಡ್ಡ ಆಟಗಾರ. ಕೊಹ್ಲಿ ಹೊಡೆಯೋ ಒಂದೊಂದು ಶಾಟ್​​​ ಎಲ್ಲರಿಗಿಂತಲೂ ಭಿನ್ನ. ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಕೊಹ್ಲಿಗಿಂತ ಉತ್ತಮವಾಗಿ ಆಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಬರ್​​-ರಿಜ್ವಾನ್​​ ಅಲ್ಲ.. ಪಾಕ್ ಸೂಪರ್​​ ಫ್ಯಾನ್ ಚಾಚಾಗೆ ಟೀಂ ಇಂಡಿಯಾದ ಈತ ನೆಚ್ಚಿನ ಕ್ರಿಕೆಟರ್​​!

https://newsfirstlive.com/wp-content/uploads/2023/07/HARDIK_ROHIT_KOHLI.jpg

Load More