/newsfirstlive-kannada/media/post_attachments/wp-content/uploads/2025/03/Train_Hijack_2.jpg)
ಪಾಕಿಸ್ತಾನದಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಹೆಚ್ಚಾಗಿದೆ. ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಬಲೂಚ್​​ ಆರ್ಮಿ ಟ್ರೈನ್​ ಹೈಜಾಕ್​ ಮಾಡಿ ಪಾಕಿಸ್ತಾನಕ್ಕೆ ದೊಡ್ಡ ಶಾಕ್​ ಕೊಟ್ಟಿತ್ತು. ಸದ್ಯ, ಪಾಕಿಸ್ತಾನಿ ದೊಡ್ಡ ಬಿಕ್ಕಟ್ಟಿನಿಂದ ಪಾರಾಗಿದ್ದಾಗಿ ಹೇಳಿಕೊಳ್ತಿದೆ. ನೂರಕ್ಕೂ ಹೆಚ್ಚು ನಾಗರಿಕರನ್ನು ರಕ್ಷಣೆ ಮಾಡಿದ್ದಾಗಿ ತಿಳಿಸಿದೆ. ಆದ್ರೆ, ಬಲೂಚ್​ ಉಗ್ರರು ಮಾತ್ರ ಹೇಳ್ತಿರೋದು ಬೇರೆನೆ.
ಬಲೂಚ್​​ ಲಿಬರೇಷನ್​ ಆರ್ಮಿ, ಇಡೀ ಪಾಕಿಸ್ತಾನದ ನಡಬಗ್ಗಿಸಿ ಗಡಗಡ ನಡುಗಿಸಿದೆ. ಟ್ರೈನ್​ ಹೈಜಾಕ್​​ ಮಾಡಿ, ನೂರಕ್ಕೂ ಹೆಚ್ಚು ಜನರನ್ನ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಪಾಕ್​ಗೆ ದೊಡ್ಡ ಶಾಕ್​ ಕೊಟ್ಟಿದೆ. ಒತ್ತೆಯಾಳುಗಳ ಬಿಡುಗಡೆಗೆ ಭಾರಿ ಡಿಮ್ಯಾಂಡ್​ ಮಾಡಿತ್ತು. ಸದ್ಯ ಬಲೂಚ್​ ಆರ್ಮಿ ಮತ್ತು ಪಾಕಿಸ್ತಾನದ ಸಮರ ಅಂತ್ಯ ಕಂಡಿದೆ.
346 ಜನ ಸೇಫ್​​​​, 21 ಜನ ಒತ್ತೆಯಾಳುಗಳ ಸಾವು
ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಪಾಕಿಸ್ತಾನ ಜಾಫರ್​ ಎಕ್ಸ್​​ಪ್ರೆಸ್​​ ರೈಲು ಹೈಜಾಕ್​ ಅಪರೇಷನ್ ಅಂತ್ಯವಾಗಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಬಲೂಚ್​​ ಲಿಬರೇಷನ್​ ಆರ್ಮಿ ವಶದಲ್ಲಿದ್ದ 150ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ರಕ್ಷಿಸಲಾಗಿದೆ. ಬಲೂಚಿಗಳು ಮತ್ತು ಪಾಕ್​ ಸೇನೆ​ ನಡುವಿನ ಕಾದಾಟದಲ್ಲಿ 27 ಸೇನಾ ಸಿಬ್ಬಂದಿ ಹಾಗೂ 21 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಅಂತ ಪಾಕಿಸ್ತಾನ ಹೇಳಿಕೊಂಡಿದೆ. ಹೈಜಾಕ್ ಮಾಡಿದ 33 ಉಗ್ರರ ಸಂಹರಿಸಿದ್ದಾಗಿ ಕೊಚ್ಚಿಕೊಂಡಿದೆ.
ಪಾಕ್​ ಸೇನೆಯ ಹೇಳಿಕೆ ಅಲ್ಲಗಳೆದ ಬಲೂಚಿಗಳು
ಚಲಿಸುತ್ತಿದ್ದ ಟ್ರೈನ್​ನ ಹಳಿ ತಪ್ಪಿಸಿದ್ದ ಬಲೂಚ್​​ ಆರ್ಮಿ, ಗುಂಡಿನ ದಾಳಿ ನಡೆಸಿತ್ತು. ಟ್ರೈನ್​ ಹೈಜಾಕ್​ ಮಾಡಿ ಸುರಂಗದಲ್ಲಿರಿಸಿತ್ತು. ಆದ್ರೆ, ಆಪರೇಷನ್​​​ ಅಂತ್ಯ ಅಂತ ಹೇಳಿದ್ದ ಪಾಕ್​​ಗೆ ಬಲೂಚ್​ ಲಿಬರೇಷನ್​ ಆರ್ಮಿ, ತಿರುಗೇಟು ನೀಡಿದೆ. ನಮ್ಮ ಡಿಮ್ಯಾಂಡ್​ ಒಪ್ಪದಿದ್ದರೇ 50 ಒತ್ತೆಯಾಳುಗಳನ್ನ ಗಲ್ಲಿಗೇರಿಸುವುದಾಗಿ ಹೇಳಿಕೊಂಡಿದೆ.
ಇದನ್ನೂ ಓದಿ: Jaffar Express ಹೈಜಾಕ್.. ಪಾಕ್​ನಿಂದ ಬಲೂಚ್ ಬಂಡುಕೋರರು ಬಯಸುತ್ತಿರೋದು ಏನೇನು?
ಬಲೂಚ್​ ಲಿಬರೇಷನ್​ ಆರ್ಮಿಯ ಈ ಹೇಳಿಕೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಆದ್ರೆ, ಪಾಕಿಸ್ತಾನ ಸರ್ಕಾರ ಮಾತ್ರ ಎಲ್ಲವೂ ಸರಿ ಇದೆ ಅಂತ ಹೇಳ್ತಿರೋದು ಸಾಕಷ್ಟು ಅನುಮಾನಕ್ಕೆ ಕಾರಣ ಆಗಿದೆ. ಇದರ ಮಧ್ಯೆ ಟ್ರೈನ್​ ಹೈಜಾಕ್​​ ಆದ ಸ್ಥಳಕ್ಕೆ ಪಾಕಿಸ್ತಾನ ಸೇನೆ ಸುಮಾರು 100ಕ್ಕೂ ಹೆಚ್ಚು ಶವಪಟ್ಟಿಗೆಗಳನ್ನ ರವಾನಿಸುತ್ತಿರುವ ದೃಶ್ಯ ಕಂಡು ಬಂದಿದೆ. ಇದು ವಿಶ್ವದ ಮುಂದೆ ಪಾಕಿಸ್ತಾನ ಎಂಬ ಉತ್ತರಕುಮಾರನ ಪೌರುಷತನದ ಬಣ್ಣಗೇಡಿತನ, ಕಪಟಿತನ ಬಯಲು ಮಾಡಿದೆ.
ಇಷ್ಟೊಂದು ದೊಡ್ಡ ಮಟ್ಟದ ಹೈಜಾಕ್ ನಡೆಸಿರುವ ಬಲೂಚ್ ಲಿಬರೇಶನ್ ಆರ್ಮಿ, ಪಾಕಿಸ್ತಾನ ಸರ್ಕಾರ ಹಾಗೂ ಸೇನೆಗೆ ಮಾತ್ರವಲ್ಲದೇ ಚೀನಾಕ್ಕೂ ಸೆಡ್ಡುಹೊಡೆದಿದೆ. ಹೊಸ ಬಲೂಚ್​​​ ದೇಶದ ಉದಯಕ್ಕೆ ಪಣ ತೊಟ್ಟು ನಿಂತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ