ಪಾಕಿಸ್ತಾನಕ್ಕೆ 48 ಗಂಟೆಗಳ ಡೆಡ್​ಲೈನ್.. ಟ್ರೈನ್ ಹೈಜಾಕ್​ಗೆ ಮುಖ್ಯ ಕಾರಣ?

author-image
Bheemappa
Updated On
ಪಾಕಿಸ್ತಾನಕ್ಕೆ 48 ಗಂಟೆಗಳ ಡೆಡ್​ಲೈನ್.. ಟ್ರೈನ್ ಹೈಜಾಕ್​ಗೆ ಮುಖ್ಯ ಕಾರಣ?
Advertisment
  • ಪಾಕ್​ ಟ್ರೈನ್​ನಲ್ಲಿ ಒಟ್ಟು ಎಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು?
  • ಎರಡು ದಿನದ ಒಳಗೆ ತನ್ನ ನಿರ್ಧಾರ ತಿಳಿಸುವಂತೆ ಹೇಳಿದ ಉಗ್ರರು
  • ಪಾಕಿಸ್ತಾನದ 30 ಸೈನಿಕರನ್ನ ಹೊಡೆದುರುಳಿಸಿತಾ ಬಲೂಚ್​​​ ಆರ್ಮಿ?

ಸೆರಗಿನ ಕೆಂಡ ಅಂತಾರಲ್ಲ, ಬಹುಶಃ ಕೇಳಿದ್ದೀರಿ. ಪಾಕಿಸ್ತಾನದ ಪರಿಸ್ಥಿತಿಯೂ ಹಾಗೇ. ಅದು ಒಂಥರಾ ಒಳಗೊಳಗೆ ಕುದಿಯುತ್ತಿರುವ ಬೆಂಕಿ. ನೆರೆಹೊರೆ ಬಿಡಿ, ತನ್ನ ನಾಗರಿಕರ ಮೇಲೆನೇ ಅವರಿಗೆ ಹಗೇತನ. ಜಿದ್ದು, ಸೇಡು, ಅವಿಶ್ವಾಸ. ಬಲೂಚ್​​​ನಲ್ಲಿ ಹರಿಸಿದ ನೆತ್ತರಿಗೆ ಪಾಕಿಸ್ತಾನಕ್ಕೂ ಲೆಕ್ಕ ಸಿಗ್ತಿಲ್ಲ. ಈಗ ಕಾಲ ತಿರುಗಿದೆ. ಬಲೂಚ್​​​ ಲಿಬರೇಷನ್​​​ ಆರ್ಮಿ ತಿರುಗಿ ಬಿದ್ದಿದೆ. ಇತಿಹಾಸದಲ್ಲೇ ಪಾಕ್​​ನ ಎದೆಗೂಡು ಸೀಳಿದ ಬಲೂಚ್​​​ ಆರ್ಮಿ, ಭಯಾನಕ ಟ್ರೈನ್​ ಹೈಜಾಕ್ ಮಾಡಿದೆ.

ಪಾಕಿಸ್ತಾನ, ಆರ್ಥಿಕವಾಗಿ ದಿವಾಳಿಯಾಗಿರುವ ರಾಷ್ಟ್ರ. ತಿನ್ನೋಕೆ ಕಾಸಿಲ್ಲದಿದ್ರೂ ಭಾರತದೊಳಕ್ಕೆ ಉಗ್ರರನ್ನು ಕಳಿಸಿ ಅಶಾಂತಿ ಸೃಷ್ಟಿಸುವ ಪಾಪಿ ಪಾಕಿಸ್ತಾನ. ಇಂತಹ ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನಕ್ಕೆ ಇದೀಗ ಉಗ್ರರೇ ಮಗ್ಗುಲ ಮುಳ್ಳಾಗಿದ್ದಾರೆ.

publive-image

ಭಯಾನಕ ಟ್ರೈನ್​ ಹೈಜಾಕ್.. ಪಾಕ್​ ಎದೆ ಧಸಕ್​​​!

ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್​ ಪ್ರಾಂತ್ಯದಲ್ಲಿ ಭಯಾನಕ ಟ್ರೈನ್​ ಹೈಜಾಕ್​ ನಡೆದಿದೆ.. ಬಲೂಚಿಸ್ತಾನ ಪ್ರಾಂತ್ಯವಾದ ಕ್ವೆಟಾದಿಂದ ಪೇಶಾವರದತ್ತ ಚಲಿಸುತ್ತಿದ್ದ ಜಾಫರ್​ ಎಕ್ಸ್​​ಪ್ರೆಸ್​​ ರೈಲನ್ನ ಬಲೂಚಿಸ್ತಾನ ಪ್ರತ್ಯೇಕತಾವಾದಿ ಉಗ್ರರು ಹೈಜಾಕ್​ ಮಾಡಿದ್ದಾರೆ. ಯೋಧರು ಸೇರಿ ನೂರಕ್ಕೂ ಹೆಚ್ಚು ಮಂದಿಯನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಪ್ರತ್ಯೇಕ ಬಲೂಚಿಸ್ತಾನಕ್ಕೆ ಡಿಮ್ಯಾಂಡ್​ ಇಟ್ಟಿರುವ 'ಬಲೋಚ್‌ ಲಿಬರೇಷನ್‌ ಆರ್ಮಿ' ಅಗಾಗ್ಗೆ ಪಾಕಿಸ್ತಾನದಲ್ಲಿ ದಾಳಿಗಳು ಹಾಗೂ ಸ್ಫೋಟಗಳನ್ನು ನಡೆಸುತ್ತಿತ್ತು. ಆದ್ರೀಗ ಇದೇ ಬಲೋಚ್‌ ಲಿಬರೇಷನ್‌ ಆರ್ಮಿ, 500ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಜಾಫರ್​ ಎಕ್ಸ್​ಪ್ರೆಸ್ ರೈಲನ್ನ ಟಾರ್ಗೆಟ್​ ಮಾಡಿದ್ದು, ಗುಂಡಿನ ದಾಳಿ ನಡೆಸಿ, ಹೈಜಾಕ್ ಮಾಡಿದೆ. ಈ ವೇಳೆ ಪಾಕಿಸ್ತಾನದ 30 ಯೋಧರ ಕತೆ ಮುಗಿಸಲಾಗಿದೆ ಎಂದು ಬಲೂಚ್ ಆರ್ಮಿ ಹೇಳಿದೆ ಎನ್ನಲಾಗಿದೆ.

ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೆ ಹುಷಾರ್..!​ ಎಂದ ಆರ್ಮಿ

ನೂರಕ್ಕೂ ಹೆಚ್ಚು ಪ್ರಯಾಣಿಕರನ್ನ ಒತ್ತೆಯಾಳಾಗಿರಿಸಿಕೊಂಡ ಬಲೂಚ್​ ಲಿಬರೇಷನ್​ ಆರ್ಮಿ, ಪಾಕಿಸ್ತಾನ ಸರ್ಕಾರಕ್ಕೆ ಹಿಂಸೆಯ ಎಚ್ಚರಿಕೆ ನೀಡಿದೆ. ಜೊತೆಗೆ ಒತ್ತೆಯಾಳುಗಳ ಬದಲಾಗಿ ಬಲೂಚ್​ ಆರ್ಮಿಯ ಕೈದಿಗಳನ್ನ ಬಿಡುಗಡೆ ಮಾಡಿ ಅಂತ ಡಿಮ್ಯಾಂಡ್​ ಇಟ್ಟಿದೆ.

ಟ್ರೈನ್ ಹೈಜಾಕ್‌ಗೆ ಕಾರಣವೇನು?

  • ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೇಳ್ತಿರುವ ಬಲೂಚ್ ಆರ್ಮಿ
  • ಬಲೂಚಿಸ್ತಾನವನ್ನ ಪ್ರತ್ಯೇಕ ದೇಶ ಮಾಡಲು ಹೋರಾಟ
  • ಹಲವು ವರ್ಷಗಳಿಂದ ಪ್ರತ್ಯೇಕವಾದಿಗಳು ಸಂಘರ್ಷ
  • ಚೀನಾ ಜತೆ ಕೈಜೋಡಿಸಿರುವ ಪಾಕ್​​, ಹಲವು ಯೋಜನೆ
  • ​ಚೀನಾಗೂ ಬಲೋಚ್‌ ಪ್ರತ್ಯೇಕವಾದಿಗಳಿಂದ ತೊಂದರೆ
  • ಕಳೆದ ವರ್ಷ ವಿಮಾನ ನಿಲ್ದಾಣದ ಬಳಿ ಸ್ಫೋಟ ಘಟನೆ
  • ಸ್ಫೋಟ ಘಟನೆಯಲ್ಲಿ ಚೀನಾದ ಹಲವು ಪ್ರಜೆಗಳು ಸಾವು
  • ಈ ಘಟನೆ ನಂತರ ಹಲವು ಉಗ್ರರನ್ನ ಬಂಧಿಸಿದ್ದ ಸೇನೆ

publive-image

ಸದ್ಯ, ಬಲೂಚ್​​​ ಲಿಬರೇಷನ್​​ ಆರ್ಮಿ ಪಾಕಿಸ್ತಾನ ಸೇನೆಗೆ 48 ಗಂಟೆಗಳಲ್ಲಿ ಡೆಡ್​ಲೈನ್​ ಕೊಟ್ಟಿದೆ. ಸದ್ಯ, ಪ್ರಜೆಗಳನ್ನ ಸುರಕ್ಷಿತವಾಗಿ ಹೊರತರವುದೇ ಪಾಕ್​ಗೆ ದೊಡ್ಡ ಸವಾಲು. ಪ್ರತ್ಯೇಕತಾವಾದಿಗಳನ್ನ ಮನವೊಲಿಸುತ್ತಾ ಅಥವಾ ಅವರ ಬೇಡಿಕೆಗಳನ್ನ ಈಡೇರಿಸುತ್ತಾ? ಗೊತ್ತಿಲ್ಲ. ಆದ್ರೆ ಪಾಕಿಸ್ತಾನದಲ್ಲಿ ಮತ್ತೊಂದು ಬಾಂಗ್ಲಾ ಉದಯ ಆಗುವ ಲಕ್ಷಣವಂತು ಕಾಣ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment