/newsfirstlive-kannada/media/post_attachments/wp-content/uploads/2025/04/Pakistan-memes-video-2.jpg)
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತದ ಪ್ರತೀಕಾರ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಿಂದ ಪಾಕ್‌ಗೆ ಹರಿಯುವ ಸಿಂಧೂ, ಚೀನಾಬ್, ಜೀಲಂ ನದಿ ನೀರಿಗೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿಲ್ಲದೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ.
ಸಿಂಧೂ ನದಿ ನೀರನ್ನು ಭಾರತ ತಡೆದು ನಿಲ್ಲಿಸುತ್ತಿರೋದ್ರಿಂದ ಪಾಕಿಸ್ತಾನಿಗಳು ತಮ್ಮ ದೇಶವನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಜನರೇ ಬಗೆ, ಬಗೆಯ ಟ್ರೋಲ್, ಮಿಮ್ಸ್‌ಗಳನ್ನು ಮಾಡೋ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ಪ್ಲೀಸ್.. ಪ್ಲೀಸ್ ನೀರು ಕೊಡಿ!
ಸ್ನಾನ ಮಾಡುವಾಗ ಕಣ್ಣಿಗೆ ಸೋಪಿನ ನೀರು ಹೋಗಿದೆ. ಪ್ಲೀಸ್ ನೀರು ಕೊಡಿ ಭಾರತ ಎಂದು ಓರ್ವ ಪಾಕಿಸ್ತಾನಿ ಹೇಳಿದ್ದಾನೆ. ಮತ್ತೊಬ್ಬ ಭಾರತ, ಪಾಕಿಸ್ತಾನದ ಮೇಲೆ ದಾಳಿ ಮಾಡಬಾರದು. ಏಕೆಂದರೆ ಪಾಕಿಸ್ತಾನ, ವಿಶ್ವದ ಎಲ್ಲಾ ದೇಶಗಳಿಗೂ ಸಾಲ ಕೊಡಬೇಕು ಎಂದಿದ್ದಾನೆ.
ಇನ್ನು ಹಲವು ಟ್ರೋಲ್ ಹಾಗೂ ಮೀಮ್ಸ್‌ಗಳ ಸಂದೇಶ ಚಿತ್ರ, ವಿಚಿತ್ರವಾಗಿದೆ. ಪಾಕಿಸ್ತಾನದ ಸರ್ಕಾರವೇ ಭಾರತ, ಪಾಕ್ ಅನ್ನು ಆಕ್ರಮಿಸಿಕೊಳ್ಳಲಿ ಅಂತ ಬಯಸುತ್ತಿದೆ. ಯಾಕೆಂದರೆ ಪಾಕ್ ಸರ್ಕಾರ ಆಗ ಸಾಲ ಮರು ಪಾವತಿಗೆ ಚಿಂತೆ ಮಾಡಬೇಕಾಗಿರೋದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹೆದರಿದ ಪಾಕ್ ಸೇನಾ ಮುಖ್ಯಸ್ಥ.. ರಾತ್ರೋರಾತ್ರಿ ಕುಟುಂಬವನ್ನು ಲಂಡನ್ಗೆ ಶಿಫ್ಟ್ ಮಾಡಿದ ಮುನೀರ್
ಭಾರತ ಯುದ್ಧ ಮಾಡುವುದಾದರೆ 9 ಗಂಟೆ ಒಳಗೆ ಮಾಡಿ. 9.15ರಿಂದ ಪಾಕಿಸ್ತಾನದಲ್ಲಿ ಗ್ಯಾಸ್ ಬಂದ್ ಆಗುತ್ತೆ. ಭಾರತಕ್ಕೆ ನಾವು ಎಂಥ ಬಡದೇಶದ ಮೇಲೆ ಯುದ್ಧ ಮಾಡುತ್ತಿದ್ದೇವೆ ಅಂತ ಗೊತ್ತಾಗಬೇಕು.
ಭಾರತ, ಲಾಹೋರ್ ಅನ್ನೇ ತಗೊಳ್ಳುವುದಾದರೆ ತಗೊಳ್ಳಿ. ಆದರೆ ಅರ್ಧ ಗಂಟೆಯಲ್ಲಿ ಅದನ್ನು ನೀವೇ ವಾಪಸ್ ಕೊಡ್ತೀರಿ.
This one was posted by Pakistan memer after India suspends Indus waters treaty 😂😂😂 pic.twitter.com/1LTchuwdEa
— 🎀Janvi🌷🩷🎀 (@janugirl7061)
This one was posted by Pakistan memer after India suspends Indus waters treaty 😂😂😂 pic.twitter.com/1LTchuwdEa
— 🎀Janvi🌷🩷🎀 (@janugirl7061) April 25, 2025
">April 25, 2025
ನೀವು ನೀರು ನಿಲ್ಲಿಸುತ್ತೀರಾ, ಈಗಾಗಲೇ ಪಾಕ್‌ನಲ್ಲಿ ನೀರಿಲ್ಲ. ನೀವು ನಮ್ಮನ್ನು ಕೊಲ್ಲುತ್ತೀರಾ, ಈಗಾಗಲೇ ಪಾಕ್ ಸರ್ಕಾರವೇ ನಮ್ಮನ್ನು ಕೊಂದುಬಿಟ್ಟಿದೆ. ಕರಾಚಿಯ ಮೇಲೆ ದಾಳಿ ಮಾಡುತ್ತೀರಾ, ಹಾಗಾದರೆ ಭಾರತದಿಂದಲೇ ಮೊಬೈಲ್ ಫೋನ್ ತನ್ನಿ ಎಂದು ಮತ್ತೊಬ್ಬರು ಟ್ರೋಲ್ ಮಾಡುತ್ತಿದ್ದಾರೆ.
ರೋಸಿ ಹೋದ ಪಾಕ್‌ನಿಂದ ಬ್ಯಾನ್!
ಇಷ್ಟೆಲ್ಲಾ ಟ್ರೋಲ್ ಹಾಗೂ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಮಾನ, ಮರ್ಯಾದೆಯನ್ನು ಹರಾಜು ಮಾಡಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಪಾಕಿಸ್ತಾನ ಇದೀಗ ಈ ಮೀಮ್ಸ್ ವಿಡಿಯೋಗಳನ್ನೇ ಬ್ಯಾನ್ ಮಾಡಿದೆ. ಈ ರೀತಿ ದೇಶದ ಒಳಗೆ ದೇಶಕ್ಕೆ ಅಪಮಾನ ಮಾಡುವುದು ಅಪರಾಧ ಅನ್ನೋ ಆದೇಶ ನೀಡಲು ಚಿಂತನೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ