/newsfirstlive-kannada/media/post_attachments/wp-content/uploads/2025/02/AMIT-SHAH.jpg)
ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನ ತಿನ್ನೋಕೆ ಗತಿಯಿಲ್ಲದಿದ್ರೂ ಯಾವಾಗಲೂ ಭಾರತದ ಜೊತೆ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಈಗ ಸ್ನೇಹದ ಹಸ್ತ ಚಾಚಿ ಕಾಶ್ಮೀರ ಸಮಸ್ಯೆ ಬಗೆಹರಿಸುವ ಮಾತಾಡ್ತಿದೆ. ಇದೇ ವೇಳೆ ಅಮಿತ್ ಶಾ ಸಭೆ ಕರೆದು ಖಡಕ್ ಸೂಚನೆ ಕೊಟ್ಟಿದ್ದಾರೆ.
ಕಾಶ್ಮೀರ ಸೇರಿ ಭಾರತದ ಜೊತೆಗಿನ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಪಾಕಿಸ್ತಾನ ಬಯಸುತ್ತದೆ ಅಂತ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಕಾಶ್ಮೀರ ಒಗ್ಗಟ್ಟಿನ ದಿನದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಸಕಾಂಗ ಸಭೆಯ ವಿಶೇಷ ಅಧಿವೇಶನವನದಲ್ಲಿ ಈ ಘೋಷಣೆ ಮಾಡಿದ್ದಾರೆ. ಭಾರತವು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಮತ್ತು ಈ ನಿಟ್ಟಿನಲ್ಲಿ ಮಾತುಕತೆ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಗಲ್ಲಿ ಗಲ್ಲಿಯಲ್ಲಿ ಅಕ್ರಮ ವಲಸಿಗರಿಗಾಗಿ ಟ್ರಂಪ್ ಸರ್ಕಾರ ಹುಡುಕಾಟ.. ಭಾರತೀಯರಿಗೂ ಗೇಟ್ ಪಾಸ್
ಭಾರತವು ಆಗಸ್ಟ್ 5, 2019ರ ಚಿಂತನೆಯಿಂದ ಹೊರಬಂದು ಕಾಶ್ಮೀರ ಸಂಬಂಧ ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ಮಾತುಕತೆ ಪ್ರಾರಂಭಿಸಬೇಕು. ನಾವು ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೆಂದು ಬಯಸುತ್ತೇವೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.
ಅತ್ತ ಪಾಕಿಸ್ತಾನ ಹೊಸ ರೀತಿಯ ನಾಟಕ ಮಾಡುತ್ತಿದ್ದಂತೆ ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಜಮ್ಮು ಕಾಶ್ಮೀರ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಶಾ, ಭಯೋತ್ಪಾದಕರ ಅಸ್ತಿತ್ವವನ್ನು ಬೇರು ಸಹಿತ ಕಿತ್ತುಹಾಕುವುದು ನಮ್ಮ ಗುರಿ. ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಇಳಿಕೆಯಾಗಿವೆ ಎಂದಿದ್ದಾರೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಹೆಚ್ಚಿಸುವಂತೆ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ನಿರ್ದೇಶಿಸಿದ್ದಾರೆ. ಒಳನುಸುಳುವಿಕೆ ಮತ್ತು ಭಯೋತ್ಪಾದಕ ಕೃತ್ಯಗಳ ವಿರುದ್ಧ ನಿರ್ದಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ‘ಹಲ್ಲು ಸರಿ ಇಲ್ಲ ಅಂತ ರಿಜೆಕ್ಟ್ ಮಾಡಿದ್ರು’.. ಗಿಣಿರಾಮ ಸೀರಿಯಲ್ ನಟಿ ನಯನಾ ಫೇಮಸ್ ಆಗಿದ್ದು ಹೇಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ