ಭಾರತದ ಟಾರ್ಗೆಟ್‌ಗೆ ಬೆಚ್ಚಿ ಬಿದ್ದ ಪಾಕ್.. ದಿಢೀರ್ ಕದನ ವಿರಾಮಕ್ಕೆ ಅಂಗಲಾಚಲು 8 ಕಾರಣ; ಏನದು?

author-image
admin
Updated On
ಭಾರತದ ಟಾರ್ಗೆಟ್‌ಗೆ ಬೆಚ್ಚಿ ಬಿದ್ದ ಪಾಕ್.. ದಿಢೀರ್ ಕದನ ವಿರಾಮಕ್ಕೆ ಅಂಗಲಾಚಲು 8 ಕಾರಣ; ಏನದು?
Advertisment
  • ಪಾಕಿಸ್ತಾನದ ಸೇನಾ ಉಗ್ರಾಣಗಳು, ಸೇನಾ ನೆಲೆಗಳೇ ಟಾರ್ಗೆಟ್!
  • ಭಾರತದ ಯುದ್ಧ ತಂತ್ರಕ್ಕೆ ದಿಕ್ಕೆಟ್ಟು ವಿಚಲಿತವಾದ ಬಿಕಾರಿ ಪಾಕಿಸ್ತಾನ
  • ಭಾರತ ಮಾಡಿದ ಕೌಂಟರ್ ಅಟ್ಯಾಕ್‌ ಪಾಕಿಸ್ತಾನಕ್ಕೆ ಮರ್ಮಾಘಾತ!

ನವದೆಹಲಿ: ಭಾರತದ ಆಪರೇಷನ್ ಸಿಂಧೂರಕ್ಕೆ ಪ್ರತಿದಾಳಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬಿಕಾರಿ ಪಾಕಿಸ್ತಾನ ದಿಢೀರ್ ಮಂಡಿಯೂರಿದೆ. IMF ಸಾಲಕ್ಕಾಗಿ ಅಂಗಲಾಚಿದ ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿದೆ. ನಿನ್ನೆ ಮಧ್ಯಾಹ್ನ ಭಾರತದ ಡಿಜಿಎಂಒಗೆ ಕರೆ ಮಾಡಿ ಕದನ ವಿರಾಮಕ್ಕೆ ಮನವಿ ಮಾಡಲು ಹಲವು ಕಾರಣಗಳಿವೆ.

ಪಾಕ್ ನಡುಗಿದ್ದೇಕೆ?
ಕಳೆದ ಮೇ 9, 10ರ ರಾತ್ರಿ ಭಾರತ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ರಣ ಭೀಕರ ದಾಳಿ ನಡೆಸಿತ್ತು. ಪಾಕಿಸ್ತಾನದ ಎಲ್ಲಾ ಡ್ರೋನ್, ಕ್ಷಿಪಣಿಗಳನ್ನ ಭಾರತ ಹೊಡೆದುರುಳಿಸಿತ್ತು. ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಎದುರಾಳಿಯ ಕ್ಷಿಪಣಿಗಳನ್ನ ಸಮರ್ಥವಾಗಿ ದಾಳಿ ತಡೆಯುವಲ್ಲಿ ಯಶಸ್ವಿಯಾಗಿತ್ತು.

publive-image

ಭಾರತ ಮಾಡಿದ ಕೌಂಟರ್ ಅಟ್ಯಾಕ್‌ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತ್ತು. ಇಷ್ಟಾದರೂ ಪಾಕಿಸ್ತಾನ ಭಾರತದ ವಾಯು ನೆಲೆಗಳನ್ನ ಟಾರ್ಗೆಟ್ ಮಾಡಿ ದಾಳಿ ಮಾಡಲು ಯತ್ನಿಸಿತ್ತು. ಇದಕ್ಕೆ ಕೌಂಟರ್ ಆಗಿ ಭಾರತ ಬ್ರಹ್ಮೋಸ್ ಮಿಸೈಲ್​ಗಳಿಂದ ದಾಳಿ ಮಾಡಿತ್ತು.

ಇದನ್ನೂ ಓದಿ: ಕದನ ವಿರಾಮದ ಕಳ್ಳಾಟ.. ಪಾಕ್‌ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ 

ಪಾಕಿಸ್ತಾನದ ಪ್ರಮುಖ ವಾಯು ನೆಲೆಗಳಾದ ಚಕ್ಲಾಲ, ಸರ್ಗೋದಾ ಸೇರಿದಂತೆ ನಾಲ್ಕು ವಾಯು ನೆಲೆಗಳು ಬ್ರಹ್ಮೋಸ್ ಕ್ರೂಸ್ ಮಿಸೈಲ್​ಗಳಿಂದ ಧ್ವಂಸಗೊಂಡಿವೆ. ಇದಿಷ್ಟೇ ಅಲ್ಲದೇ ಪಾಕಿಸ್ತಾನಕ್ಕೆ ನ್ಯೂಕ್ಲಿಯರ್ ಕಮಾಂಡ್​ನ ವ್ಯವಸ್ಥೆ ಮೇಲೆ ದಾಳಿ ಆಗೋ ಭೀತಿ ಇದೆ. ಇದೇ ಆತಂಕದಲ್ಲಿ ಪಾಕಿಸ್ತಾನ ತುರ್ತಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಗೆ ಮನವಿ ಮಾಡಿದ್ದು, ಅಮೆರಿಕಾ ಎರಡೂ ದೇಶಗಳ ಜೊತೆ ಸಂಪರ್ಕ ಸಾಧಿಸಲು ಮುಂದಾಗಿದೆ.

ಭಾರತದ ವೈಮಾನಿಕ ದಾಳಿಯಿಂದ ಪಾಕಿಸ್ತಾನ ದಯನೀಯ ಸ್ಥಿತಿಗೆ ಹೋಗಿದ್ದು, ಕದನ ವಿರಾಮಕ್ಕೆ ಅಮೆರಿಕದ ಮುಂದೆ ಅಂಗಲಾಚಿದೆ. ಭಾರತ ಸತತ ದಾಳಿ ಮುಂದುವರಿಸಿದ್ರೆ ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರಗಳನ್ನ ಕಳೆದುಕೊಳ್ಳುವ ಭೀತಿಯಿಂದ ಕದನ ವಿರಾಮಕ್ಕೆ ಮುಂದಾಗಿದೆ.

ಪಾಕ್‌ಗೆ ಬರ್ಬಾದ್ ಭೀತಿ!
1. ಪಾಕ್ ಸೇನಾ ಬಲವನ್ನೇ ಟಾರ್ಗೆಟ್ ಮಾಡಿ ಭಾರತ ಅಟ್ಯಾಕ್‌
2. ಪಾಕಿಸ್ತಾನದ ಸೇನಾ ಉಗ್ರಾಣಗಳು, ಸೇನಾ ನೆಲೆಗಳೇ ಟಾರ್ಗೆಟ್
3. ಚಕ್ಲಾಲ, ಸರ್ಗೋದಾ ಸೇರಿದಂತೆ 4 ವಾಯು ನೆಲೆಗಳು ಧ್ವಂಸ
4. ಭಾರತದ ದಾಳಿಯಿಂದಾಗಿ ಪಾಕ್‌ನ ವಾಯು ಕಾರ್ಯಕ್ಷಮತೆ ಕುಸಿತ
5. ಪಾಕ್‌ ವಾಯು ರಕ್ಷಣೆ ಮತ್ತು ವಾಯುದಾಳಿ ಕ್ಷಮತೆಗೆ ಭಾರತದ ಪೆಟ್ಟು
6. ಪಾಕಿಸ್ತಾನದ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೂ ಪೆಟ್ಟು ಕೊಟ್ಟಿರೋ ಭಾರತ
7. ಶಸ್ತ್ರಾಸ್ತ್ರಗಳು ಖಾಲಿಯಾದ್ರೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬೀಳೋದು ಪಕ್ಕಾ
8. ಭಾರತದ ಯುದ್ಧ ತಂತ್ರಕ್ಕೆ ದಿಕ್ಕೆಟ್ಟು ವಿಚಲಿತವಾದ ಪಾಕಿಸ್ತಾನದಿಂದ ಕದನ ವಿರಾಮ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment