ಟೀಮ್ ಇಂಡಿಯಾನ ಪಾಕ್​ಗೆ ಆಹ್ವಾನ ಮಾಡಿದ ಹಿಂದಿನ ಉದ್ದೇಶವೇನು.. ದೊಡ್ಡ ಲಾಭವಿತ್ತಾ?

author-image
Bheemappa
Updated On
ಟೀಮ್ ಇಂಡಿಯಾನ ಪಾಕ್​ಗೆ ಆಹ್ವಾನ ಮಾಡಿದ ಹಿಂದಿನ ಉದ್ದೇಶವೇನು.. ದೊಡ್ಡ ಲಾಭವಿತ್ತಾ?
Advertisment
  • ಭಾರತವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳುವ ಹಿಂದಿದ್ದ ಉದ್ದೇಶವೇನು?
  • ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್, ತಮ್ಮ ಆಟಗಾರರಿಗೆ ಕರೆ
  • ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ -ಪಾಕ್ ಕ್ರೇಜ್ ಹೇಗಿದೆ ಎಂದ್ರೆ?

ಯಾವಾಗ.. ಯಾವಾಗ.. ಎನ್ನುತ್ತಿದ್ದ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಚಾಂಪಿಯನ್ಸ್​​ ಟ್ರೋಫಿ ಅಧಿಕೃತವಾಗಿ ಆರಂಭವಾಗ್ತಿದೆ. ಆದ್ರೆ, ವಿಶ್ವ ಕ್ರಿಕೆಟ್​ ಕಾಯ್ತಿರೋದು ಸೂಪರ್​​ ಸಂಡೇಯ ಮಹಾಕದನದಲ್ಲಿ ಭಾರತ- ಪಾಕ್​ ಮುಖಾಮುಖಿಗೂ ಮುನ್ನ ಅಭಿಮಾನಿಗಳಲ್ಲಿ, ಮಾಜಿ ಕ್ರಿಕೆಟರ್​ಗಳಲ್ಲಿ GREATEST RIVALRY ಜಪ ನಡೀತಿದೆ.

ಇಂಡೋ-ಪಾಕ್ ನಡುವಿನ ಕ್ರಿಕೆಟ್​ ಪಂದ್ಯ ಅಂದ್ರೆ ಅದು 2 ತಂಡಗಳ ನಡುವಿನ ಬ್ಯಾಟ್-ಬಾಲ್ ಕದನ ಮಾತ್ರವಲ್ಲ. ಅದಕ್ಕಿಂತ ಹೆಚ್ಚು. ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಂಟಾಗುವ ಉನ್ಮಾದ, ಢವ ಢವ ಅಷ್ಟಿಷ್ಟಲ್ಲ. ಆನ್​​ಫೀಲ್ಡ್​ನಲ್ಲಿ ಆಡೋದು ಜಸ್ಟ್​ 22 ಮಂದಿಯೇ ಆಗಿದ್ರೂ, ಆಫ್​ ದ ಫಿಲ್ಡ್​ನಲ್ಲಿ ಬಿಲಿಯನ್ ಗಟ್ಟಲೇ ಅಭಿಮಾನಿಗಳ ಎಕ್ಸೈಟ್​ಮೆಂಟ್​ ನೆಕ್ಸ್ಟ್​ ಲೆವೆಲ್​ನಲ್ಲಿರುತ್ತೆ.

publive-image

ಇಂಥಹ ಗ್ರೇಟೆಸ್ಟ್​ Rivalry ಕಣ್ತುಂಬಿಕೊಳ್ಳುವ ಫ್ಯಾನ್ಸ್​ಗೆ ಈ ಮ್ಯಾಚ್​ ನಿಜಕ್ಕೂ ಹಬ್ಬವೇ ಆಗಿರುತ್ತೆ. ಈ ಹೈವೋಲ್ಟೇಜ್​ ಮ್ಯಾಚ್​​​​ನ ಪ್ರತಿ ಎಸೆತವನ್ನು ಕಣ್ಣು ಮಿಟಿಕಿಸದೆ ನೋಡೋ ಗಮ್ಮತ್ತೇ ಬೇರೆ. ಈ ಫ್ರೆಷರ್ ಮ್ಯಾಚ್​ನಲ್ಲಿ ಪ್ರತಿ ಆಟಗಾರ ಗೆಲ್ಲೋಕ್ಕಾಗಿ ಜೀವನವನ್ನೇ ಪಣಕ್ಕಿಡ್ತಾರೆ. ಗ್ರೇಟೆಸ್ಟ್​ ಪೈಪೋಟಿ ಹೊಂದಿರುವ ಉಭಯ ದೇಶಗಳ ನಡುವೆ ದ್ವೀಪಕ್ಷೀಯ ಸರಣಿ ನಡೆದು ವರ್ಷಗಳೇ ಉರುಳಿವೆ. ಕೇವಲ ಐಸಿಸಿ ಈವೆಂಟ್ಸ್​ನಲ್ಲಿ ಮಾತ್ರ ಮುಖಾಮುಖಿ ಆಗ್ತಿರೋದು. ಇವರಿಬ್ಬರ ಬ್ಯಾಟಲ್, ಯುದ್ದಕ್ಕಿಂತ ಏನು ಕಡಿಮೆ ಅಲ್ಲ.

ಇಂಡೋ-ಪಾಕ್​ ಥ್ರಿಲ್ಲರ್ ನೋಡಲು ಫ್ಯಾನ್ಸ್​ಗೆ​ ಕಾತರ..!

ಇಂಥಹ ಹಿಸ್ಟಾರಿಕ್ ಪೈಪೋಟಿಗೆ ಇದೀಗ ಕೌಂಟ್​ ಡೌನ್ ಶುರುವಾಗಿದ್ದು, ಈ ಬಿಗ್ ಮ್ಯಾಚ್ ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇವತ್ತಿನಿಂದ ಚಾಂಪಿಯನ್ಸ್​ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಆದ್ರೆ, ಫೆಬ್ರವರಿ 23ರ ಬ್ಯಾಟಲ್​ ನೋಡೋಕೆ, ವಿಶ್ವ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಾಕಂದ್ರೆ, ಅಂದು ಬ್ಯಾಟಲ್ ಫೀಲ್ಡ್​ನಲ್ಲಿ ಮುಖಾಮುಖಿ ಆಗೋದು ಭಾರತ, ಪಾಕಿಸ್ತಾನ.

ಇಂಡೋ, ಪಾಕ್ ಹೈವೋಲ್ಟೇಜ್ ಮ್ಯಾಚ್​ಗೆ 4 ದಿನ ಬಾಕಿ ಉಳಿದಿದೆ. ಆದ್ರೆ, ಫ್ಯಾನ್ಸ್ ಎದೆಯಲ್ಲಿ ಮಾತ್ರ ಈಗಾಗಲೇ ಢವಢವ ಶುರುವಾಗಿದೆ. ಈ ಹೈವೋಲ್ಟೇಜ್ ಮ್ಯಾಚ್​ನಲ್ಲಿ ಬ್ಯಾಟ್, ಬಾಲ್​ ವೆಪನ್​ಗಳಾಗಿ ಬದಲಾದ್ರೆ, ಮೈದಾನ ಅಕ್ಷರಶಃ ಯುದ್ಧಭೂಮಿಯಾಗಿ ಪರಿವರ್ತನೆಯಾಗುತ್ತೆ. ಒಂದೊಂದು ಎಸೆತ, ಒಂದೊಂದು ರನ್​ಗೂ ಅಭಿಮಾನಗಳ ಹಾರ್ಟ್​​ ಬೀಟ್​​ ಜೋರಾಗುತ್ತೆ.. ಇಂಥ ಹೈವೋಲ್ಟೇಜ್ ಥ್ರಿಲ್ಲರ್ ಗೇಮ್​ ನೋಡಲು ಫ್ಯಾನ್ಸ್​ ಕಾತರದಿಂದ ಕಾತ್ತಿದ್ದಾರೆ.

ಸೋಲು ಸಹಿಸಲ್ಲ.. ಗೆಲುವೊಂದೇ ಉಭಯ ತಂಡಗಳ ಗುರಿ..!

ಇಂಡೋ ಪಾಕ್ ಮ್ಯಾಚ್ ಅಂದ್ರೆ, ಯಾವೊಬ್ಬ ಅಭಿಮಾನಿ ಸೋಲನ್ನು ಸಹಿಸಲ್ಲ. ಅಭಿಮಾನಿಗಳೇ ಅಲ್ಲ. ಆನ್​ಫೀಲ್ಡ್​ನಲ್ಲಿ ಆಟಗಾರರು ಗೆಲುವಿಗಾಗಿ ಶಕ್ತಿ ಮೀರಿ ಹೋರಾಡ್ತಾರೆ. ಸರ್ವ ಪ್ರಯತ್ನ ಮಾಡ್ತಾರೆ. ಪ್ರತಿ ಇಂಡಿಯನ್, ಪ್ರತಿ ಪಾಕ್ ಅಭಿಮಾನಿಯೂ ಆಯಾ ತಂಡಗಳ ಗೆಲುವಿಗಾಗಿ ಪ್ರಾರ್ಥಿಸ್ತಾರೆ. ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್, ಟೀಮ್ ಇಂಡಿಯಾವನ್ನ ಸೋಲಿಸಿದ್ರೆ, ಪಾಕ್ ಜನರ ದಿಲ್ ಗೆಲ್ತೀರಿ ಎಂದು ಕರೆ ನೀಡ್ತಾರೆ ಅಂದ್ರೆ, ಆ ಪಂದ್ಯಕ್ಕಿರುವ ಪ್ರತಿಷ್ಠೆ ಎಷ್ಟಿರಬೇಕು?.

ಇದನ್ನೂ ಓದಿ:ಪ್ರತಿಷ್ಠೆಯ ಕದನ; ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಆ 2 ಸೇಡನ್ನು ತೀರಿಸಲೇಬೇಕು!

publive-image

ಒಂದು ದೇಶದ ಅರ್ಥಿಕತೆ ಬೂಸ್ಟ್

ಈ ವಿಶ್ವ ಕ್ರಿಕೆಟ್​ನ ಗ್ರೇಟೆಸ್ಟ್ ಪೈಪೋಟಿಗೆ ಬ್ರಾಡ್ ಕಾಸ್ಟಿಂಗ್ ವಿವರ್ ಶಿಫ್, ರೆಕಾರ್ಡ್​ ಬ್ರೇಕಿಂಗ್​ ಕಾಮರ್ಶಿಯಲ್ಸ್​, ಟಿಕೆಟ್ ಬುಕ್ಕಿಂಗ್ಸ್​, ಹೋಟೆಲ್ RENTS ಜೊತೆಗೆ ಒಂದು ದೇಶದ ಅರ್ಥಿಕತೆ ಬೂಸ್ಟ್​ ನೀಡಲು ಸಹಾಯವಾಗುತ್ತೆ ಎಂದ್ರೆ, ಇಂಡೋ-ಪಾಕ್​ನ ಪೈಪೋಟಿಗೆ ಇರೋ ಕೆಪಾಸಿಟಿ ಏನು ಅನ್ನೋದನ್ನ ನೀವೇ ಒಮ್ಮೆ ಯೋಚಿಸಿ. ಭಾರತ ಪಂದ್ಯವಾಡಲು ಹೋಗಿದ್ದರೇ ಪಾಕ್​ಗೆ ದೊಡ್ಡ ಮಟ್ಟದಲ್ಲಿ ಲಾಭ ಆಗುತ್ತಿತ್ತು. ಇದೇ ಕಾರಣಕ್ಕೆ ಪಾಕ್, ಟೀಮ್ ಇಂಡಿಯಾವನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಮಾಡಿದ ಶತ ಪ್ರಯತ್ನದ ಹಿಂದಿನ ರೀಸನ್.

ಈಗ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ತಟಸ್ಥ ಸ್ಥಳದಲ್ಲಿ ಇಂಡೋ-ಪಾಕ್​ ಪಂದ್ಯ ನಡೀತಿದೆ. ಹಾಗಂತ ಸ್ಟೇಡಿಯಂ ಏನು ಕಾಲಿ ಇರಲ್ಲ. ಕಿಕ್ಕಿರಿದು ತುಂಬೋದು ಪಕ್ಕಾ. ಬದ್ಧವೈರಿಗಳು ನಡುವಿನ ಕದನದ ಕಾವು ದಿನೇ ದಿನೇ ಹೆಚ್ತಿರೋದೇ ಇದಕ್ಕೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment