ಭಾರತದ ಬಳಿ ಮತ್ತೆ ಭಿಕ್ಷೆ ಬೇಡಿದ ಪಾಕಿಸ್ತಾನ.. ಇದೀಗ ಪತ್ರ ಬರೆದು ಬೇಡಿಕೊಂಡಿದ್ದೇನು..?

author-image
Ganesh
Updated On
ಲಂಡನ್​​ನಲ್ಲಿ ಕೂತು ಹೊಂಚು.. ಭಾರತದ ಮೇಲೆ ದಾಳಿಗೆ ಪ್ಲಾನ್ ರೂಪಿಸಿದ ಮಾಸ್ಟರ್​ ಮೈಂಡ್​ ರಿವೀಲ್..!
Advertisment
  • ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ
  • ಕದನ ವಿರಾಮ ಘೋಷಣೆ ಬೆನ್ನಲ್ಲೇ ಪತ್ರ ಬರೆದ ಪಾಕ್
  • ಭಾರತ ಸರ್ಕಾರಕ್ಕೆ ನೀರಿಗಾಗಿ ಪತ್ರ ಬರೆದ ಪಾಕಿಸ್ತಾನ

ಇಂಗು ತಿಂದ ಮಂಗನಂತೆ ಆಗಿರುವ ಪಾಕಿಸ್ತಾನಕ್ಕೆ ಸದ್ಯ, ದಿಕ್ಕು ತೋಚದಂಥ ಅನುಭವ. ಪಹಲ್ಗಾಮ್ ದಾಳಿ ಬಳಿಕ ಸರಿಯಾಗಿ ಪೆಟ್ಟು ತಿಂದಿರುವ ಪಾಕ್​​ಗೆ ಎಲ್ಲಾ ಕಡೆಯಿಂದಲೂ ಸಂಕಷ್ಟ ಎದುರಾಗಿದೆ. ತನಗೆ ಆಗುತ್ತಿರುವ ನಷ್ಟ ಮತ್ತು ಹಾನಿಯ ಆಳ-ಅಗಲವನ್ನು ಅರಿತ ಪಾಪಿಸ್ತಾನ್, ಕೂಡಲೇ ಕದನ ವಿರಾಮ ಘೋಷಿಸಿತ್ತು. ಇದೀಗ ಭಾರತದ ಬಳಿ ನೀರಿಗಾಗಿ ಬೇಡಿದೆ.

ಇದನ್ನೂ ಓದಿ: ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದ ಗಾಯಕ; ಸೋನು ನಿಗಮ್​ ಅರ್ಜಿ ಮುಂದೂಡಿದ ಹೈಕೋರ್ಟ್​​

publive-image

ಪಹಲ್ಗಾಮ್ ದಾಳಿ ಬಳಿಕ ಭಾರತ ಸರ್ಕಾರ, ‘ಸಿಂಧೂ ನದಿ ಜಲ ಒಪ್ಪಂದ’ವನ್ನು ಅಮಾನತು ಮಾಡಿದೆ. ಈ ಒಪ್ಪಂದ ಸಸ್ಪೆಂಡ್ ಆಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀರಿನ ಬಿಕ್ಕಟ್ಟು ಎದುರಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನ ಬರಗಾಲ ಎದುರಿಸಲಿದೆ. ಇದರಿಂದ ಕಂಗಾಲಾಗಿರುವ ಪಾಕಿಸ್ತಾನ, ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಂಡಿದೆ. ಪಾಕಿಸ್ತಾನದ ಜಲ ಸಂಪನ್ಮೂಲ ಇಲಾಖೆಯು ಭಾರತ ಸರ್ಕಾರಕ್ಕೆ ಪತ್ರ ಬರೆದು, ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಸಸ್ಪೆಂಡ್ ಮಾಡಿರೋದನ್ನು ಮರುಪರಿಶೀಲಿಸಿ ಅಂತಾ ಬೇಡಿಕೊಂಡಿದೆ.

ಇದನ್ನೂ ಓದಿ: ಪೂರ್ಣಮ್ ಕುಮಾರ್ ಶಾ ಯಾರು..? 1030 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಯೋಧ..

publive-image

ಏಪ್ರಿಲ್ 22 ರಂದು ಪಹಲ್ಗಾಮ್​​ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಪರಿಣಾಮ 26 ಅಮಾಯಕ ಪ್ರವಾಸಿಗರು ಜೀವ ಕಳೆದುಕೊಂಡಿದ್ದರು. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಸರ್ಕಾರವು, ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಸಸ್ಪೆಂಡ್ ಮಾಡಿದೆ. ಮಾತ್ರವಲ್ಲ, ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಗಡಿಪಾರು ಮಾಡುವಂತಹ ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇದರ ಮುಂದುವರಿದ ಭಾಗವಾಗಿ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ನಡೆಸಿತು. ಬೆನ್ನಲ್ಲೇ, ಭಾರತ ಮತ್ತು ಪಾಕ್ ನಡುವೆ ಯುದ್ಧದ ಬಿಕ್ಕಟ್ಟು ನಿರ್ಮಾಣವಾಗಿತ್ತು. ಭಾರತದ ಪ್ರತಿದಾಳಿಗೆ ಕಂಗಾಲಾದ ಪಾಕಿಸ್ತಾನ, ಕದನ ವಿರಾಮ ಘೋಷಿಸಿದೆ. ಆದರೆ ಭಾರತೀಯ ಸೇನೆಯು ಉಗ್ರರ ವಿರುದ್ಧ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಮುಂದುವರಿದಿದೆ.

ಇದನ್ನೂ ಓದಿ: Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment