/newsfirstlive-kannada/media/post_attachments/wp-content/uploads/2025/07/Humaira_2.jpg)
ಪಾಕಿಸ್ತಾನದ ಕರಾಚಿಯ ಅಪಾರ್ಟ್ಮೆಂಟ್ನಲ್ಲಿ ಕಳೆದ ಮಂಗಳವಾರ ನಟಿ ಹುಮೈರ ಅಸ್ಗರ್ ಅಲಿಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಸಾವಿನ ಬಗ್ಗೆ ತನಿಖೆಗೆ ಇಳಿದ ಕರಾಚಿ ಪೊಲೀಸರಿಗೆ ಈಗ ಹೊಸ ವಿಷಯವೊಂದು ತಿಳಿದು ಬಂದಿದೆ. ಹುಮೈರ ಅಸ್ಗರ್ ಅಲಿ, ಈ ವಾರ ಅಲ್ಲ, ಕಳೆದ ವರ್ಷದ ಆಕ್ಟೋಬರ್ ತಿಂಗಳಿನಲ್ಲಿ ಜೀವ ಬಿಟ್ಟಿದ್ದಾರೆ ಎಂಬ ಅಂಶ ತನಿಖೆಯ ವೇಳೆ ತಿಳಿದು ಬಂದಿದೆ.
ಕರಾಚಿಯ ಅಪಾರ್ಟ್ಮೆಂಟ್ನಲ್ಲಿದ್ದ ಹುಮೈರ ಅಸ್ಗರ್ ಅಲಿ ಮೃತದೇಹ ಅಡ್ವಾನ್ಸ್ ಸ್ಟೇಜ್ನಲ್ಲಿದ್ದ ಕೊಳೆತ ಸ್ಥಿತಿಯಲ್ಲಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಸುಮಯಾ ಸೈಯದ್ ಹೇಳಿದ್ದಾರೆ. ಅವರು 9 ತಿಂಗಳ ಹಿಂದೆಯೇ ಜೀವಬಿಟ್ಟಿದ್ದಾರೆ ಎಂದು ಕರಾಚಿ ಪೊಲೀಸರು ಹೇಳಿದ್ದಾರೆ. ಹುಮೈರ ಅಸ್ಗರ್ ಅಲಿ, ಪೋನ್ ಕಾಲ್ ಡೀಟೈಲ್ಸ್ ರೆಕಾರ್ಡ್ ಪ್ರಕಾರ, ಹುಮೈರ ಅಸ್ಗರ್ ಅಲಿ, ಕೊನೆಯದಾಗಿ 2024ರ ಆಕ್ಟೋಬರ್ನಲ್ಲಿ ಕಾಲ್ ಮಾಡಿದ್ದಾರೆ. ಆಕೆಯ ನೆರೆಹೊರೆಯವರು ಕೂಡ ಕಳೆದ ವರ್ಷದ ಆಕ್ಟೋಬರ್ನಲ್ಲಿ ಆಕೆಯನ್ನು ಕೊನೆಯದಾಗಿ ನೋಡಿದ್ದಾರೆ. ಇನ್ನೂ ಅಪಾರ್ಟ್ ಮೆಂಟ್ ಪ್ಲ್ಯಾಟ್‌ಗೆ ಕಳೆದ ವರ್ಷದ ಆಕ್ಟೋಬರ್ನಲ್ಲೇ ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಲಾಗಿದೆ.
ವಿದ್ಯುತ್ ಬಿಲ್ ಕಟ್ಟದೇ ಇದ್ದಿದ್ದರಿಂದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಪ್ಲ್ಯಾಟ್‌ಗೆ ಬೇರೆ ಯಾವುದೇ ಪರ್ಯಾಯ ವಿದ್ಯುತ್ ಸಂಪರ್ಕವೂ ಇಲ್ಲ. ಪ್ಲ್ಯಾಟ್ನಲ್ಲಿ ಯಾವುದೇ ಕ್ಯಾಂಡಲ್ ಕೂಡ ಇಲ್ಲ. ಹೀಗಾಗಿ ಕಳೆದ ವರ್ಷದ ಆಕ್ಟೋಬರ್ನಲ್ಲೇ ನಟಿ ಉಸಿರು ಚೆಲ್ಲಿದ್ದಾರೆ ಎಂಬ ತೀರ್ಮಾನಕ್ಕೆ ಪಾಕಿಸ್ತಾನ ಕರಾಚಿ ಪೊಲೀಸರು ಬಂದಿದ್ದಾರೆ.
ಹುಮೈರ ಅಸ್ಗರ್ ಅಲಿಯ ಮನೆಯ ಫುಡ್ ಕೂಡ ಕಳೆದ ಕೆಲವು ತಿಂಗಳ ಹಿಂದೆಯೇ ಎಕ್ಸ್ ಪೈರ್ ಆಗಿದೆ. ಅಡುಗೆ ಜಾರ್ ತುಕ್ಕು ಹಿಡಿದಿದೆ. ಫುಡ್ 6 ತಿಂಗಳ ಹಿಂದೆಯೇ ಎಕ್ಸ್ ಫೈರ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಹುಮೈರ ಅಸ್ಗರ್ ಅಲಿ ವಾಸ ಇದ್ದ ಪ್ಲ್ಯಾಟ್ನ ಪ್ಲೋರ್ನ ಮತ್ತೊಂದು ಪ್ಲ್ಯಾಟ್ ಕೂಡ ಖಾಲಿ ಇತ್ತು. ಹೀಗಾಗಿ ತಕ್ಷಣವೇ ಕೆಟ್ಟ ವಾಸನೆ ಬಂದಿರುವುದು ಬೇರೆಯವರ ಗಮನಕ್ಕೆ ಬಂದಿಲ್ಲ. ಅಪಾರ್ಟ್ಮೆಂಟ್ನ ಕೆಲವರು ಫೆಬ್ರವರಿಯಲ್ಲಿ ಬಂದಿದ್ದಾರೆ. ಈ ವೇಳೆಗೆ ಶವದ ಕೊಳೆತ ವಾಸನೆ ಕಡಿಮೆಯಾಗಿತ್ತು. ಹುಮೈರ ಅಸ್ಗರ್ ಅಲಿಯ ಕುಟುಂಬಸ್ಥರು ಆಕೆಯ ಶವ ಪಡೆಯಲು ಒಪ್ಪುತ್ತಿಲ್ಲ ಎಂದು ಪೊಲೀಸರು ಈ ಮೊದಲು ಹೇಳಿದ್ದರು. ಆದರೇ, ಆಕೆಯ ಸೋದರ ನವೀದ್ ಅಸ್ಗರ್ ಆಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕರಾಚಿಗೆ ಬಂದಿದ್ದರು. ಶವವನ್ನು ಐಡೆಂಟಿಫೈ ಮಾಡಲು ಡಿಎನ್ಎ ಪರೀಕ್ಷೆ ಕೂಡ ನಡೆಸಲಾಗಿದೆ. ಬಳಿಕ ಕುಟುಂಬಸ್ಥರು ಆಕೆಯ ಶವವನ್ನು ಪಡೆದಿದ್ದಾರೆ.
ಇದನ್ನೂ ಓದಿ:ಸರ್ಕಾರದಿಂದ ಆಘಾತಕಾರಿ ಮಾಹಿತಿ: ಈ ಜಿಲ್ಲೆಯಲ್ಲಿ 14 ಅಪ್ರಾಪ್ತೆಯರು ಗರ್ಭಿಣಿಯರು..
ಹುಮೈರ ಅಸ್ಗರ್ ಅಲಿ, 7 ವರ್ಷಗಳ ಹಿಂದೆ ಲಾಹೋರ್ನಿಂದ ಕರಾಚಿಗೆ ಬಂದಿದ್ದಾರಂತೆ. ಕುಟುಂಬದ ಜೊತೆ ಅಂತರ ಕಾಪಾಡಿಕೊಂಡಿದ್ದರು. ಅಪರೂಪಕ್ಕೆ ಮಾತ್ರ ಕುಟುಂಬದ ಸದಸ್ಯರನ್ನು ಹೋಗಿ ಭೇಟಿಯಾಗುತ್ತಿದ್ದರಂತೆ. ಹೀಗಾಗಿ ಯಾರೊಬ್ಬರು ಕಳೆದ 9 ತಿಂಗಳಲ್ಲಿ ಹುಮೈರ ಅಸ್ಗರ್ ಅಲಿಗೆ ಪೋನ್ ಮಾಡಿಲ್ಲ. ಯೋಗಕ್ಷೇಮ ವಿಚಾರಿಸಿಲ್ಲ. ಆಕೆಯ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಈಗ ತೀವ್ರ ಕೊಳೆತ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಹುಮೈರ ಅಸ್ಗರ್ ಅಲಿ ವಾಸ ಇದ್ದ ಪ್ಲ್ಯಾಟ್ ಮಾಲೀಕ ಆಕೆ, ಪ್ಲ್ಯಾಟ್ ಬಾಡಿಗೆ ನೀಡಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆ ಕೊನೆಯುಸಿರೆಳೆದಿರುವುದು ಬೆಳಕಿಗೆ ಬಂದಿದೆ. ಹುಮೈರ ಅಸ್ಗರ್ ಅಲಿ, ಪಾಕಿಸ್ತಾನದಲ್ಲಿ ಕೆಲ ಧಾರವಾಹಿ, ರಿಯಾಲ್ಟಿ ಶೋಗಳಲ್ಲಿ ನಟಿಸಿದ್ದರು. 2023 ರಲ್ಲಿ ನ್ಯಾಷನಲ್ ವುಮೆನ್ ಲೀಡರ್ಶಿಪ್ ಅವಾರ್ಡ್ ಅನ್ನು ಹುಮೈರ ಅಸ್ಗರ್ ಅಲಿ ಪಡೆದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ