ಪಾಕ್ಗೆ ಮೊದಲ ಚಿನ್ನ ತಂದು ಕೊಟ್ಟ ಅರ್ಷದ್ ನದೀಮ್
ಒಲಿಂಪಿಕ್ಸ್ಗೆ ಕಳುಹಿಸಲು ಪಾಕ್ ಬಳಿ ಹಣವಿಲ್ಲ.. ಕೊನೆಗೆ ಪ್ಯಾರಿಸ್ ಹೋಗಿದ್ದೇಗೆ?
27 ವರ್ಷದ ಅರ್ಷದ್ ನದೀಮ್ ಸಾಹಸಗಾಥೆ ವಿಭಿನ್ನ.. ಇದು ಗುರುವಿಲ್ಲದೆ ಗುರಿ ತಲುಪಿದ ಕತೆ
ಕಷ್ಟ ಯಾರಿಗೆ ಇರಲ್ಲ ಹೇಳಿ?. ಕಷ್ಟವನ್ನು ದಾಟಿ ಮುಂದೆ ಬರೋದೇ ಜೀವನ. ಸತತ ಪ್ರಯತ್ನ ಮುಂದೊಂದು ದಿನ ಜೀವನದ ದಿಕ್ಕನ್ನೇ ಬದಲಾಯಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಜಾವೆಲಿನ್ ಖರೀದಿಸಲು ಹಣವಿಲ್ಲದ ವ್ಯಕ್ತಿ ಇಂದು ದೇಶಕ್ಕಾಗಿ ಚಿನ್ನಗೆದ್ದ ಸಾಹಸಗಾಥೆ ಇದು.
ಹೆಸರು ಅರ್ಷದ್ ನದೀಮ್. ನೆರೆಯ ಪಾಕಿಸ್ತಾನ ದೇಶದವರು. ನಿನ್ನೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೇಶಕ್ಕಾಗಿ ಚಿನ್ನ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಆದರೆ ಒಲಿಂಪಿಕ್ಸ್ಗೆ ಬರೋದಕ್ಕೂ ಮುನ್ನ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅವಘಡ.. ಆತ್ಮಹ* ಮಾಡಿಕೊಂಡ 49 ವರ್ಷದ ವ್ಯಕ್ತಿ
27 ವರ್ಷದ ಅರ್ಷದ್ ನದೀಮ್ ಪಂಜಾಬ್ನ ಖನೇವಾಲ್ ಗ್ರಾಮದ ನಿವಾಸಿ. 6 ಅಡಿ ಎತ್ತರದ ಇವರು ನಿನ್ನೆ ಜಾವೆಲಿನ್ ವಿಭಾಗದಲ್ಲಿ 92.97 ಮೀಟರ್ ಎಸೆದು ಇತಿಹಾಸ ನಿರ್ಮಿಸಿದ್ದಾರೆ. ಅಂತಿಮ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಅವರಿಗೆ ಪೈಪೋಟಿ ನೀಡಿ ಮೊದಲ ಸ್ಥಾನ ಕಬಳಿಸಿದ್ದಾರೆ.
ಇದನ್ನೂ ಓದಿ: ದಂಡಪಿಂಡ ಅಂತ ಕರೆದಿದ್ದಕ್ಕೆ ಚಾಕು ಎಸೆದ ಅಣ್ಣ.. ತಮ್ಮನ ಎದೆಗೆ ಬಂದು ಚುಚ್ಚಿದ ಚೂರಿ.. ಅಲ್ಲೇ ಸಾವು
ಗುರುವಿಲ್ಲದೆ ಗುರಿ ಹೊಡೆದ ನದೀಮ್
ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ಪಡೆಯಲೆಂದು 2 ವರ್ಷಗಳಿಂದ ಸತತ ಅಭ್ಯಾಸ ಮಾಡಿದ್ದಾರೆ. ಫಿನ್ಲ್ಯಾಂಡ್ ಮತ್ತು ಜರ್ಮನಿಯಲ್ಲಿ ತಯಾರಿ ನಡೆಸಿದ್ದಾರೆ. ಆದರೆ ಅರ್ಷದ್ ನದೀಮ್ ಕತೆ ಹಾಗಲ್ಲ. ಅವರ ಬಳಿ ಜಾವೆಲಿನ್ ಖರೀದಿಸಲು ಹಣವೇ ಇರಲಿಲ್ಲ. ತರಬೇತುದಾರರು ಯಾರಿಲ್ಲ. ಮತ್ತೊಂದೆಡೆ ನದೀಮ್ರನ್ನ ಒಲಿಂಪಿಕ್ಸ್ಗೆ ಕಳುಹಿಸಲು ಪಾಕ್ ಸರ್ಕಾರದ ಬಳಿ ಫಂಡ್ ಕೂಡ ಇರಲಿಲ್ಲ.
ಇದನ್ನೂ ಓದಿ: ಮೊದಲ ಮದುವೆ ಮುಚ್ಚಿಟ್ಟ, 2ನೇ ಮದುವೆಗೆ ಮುಂದಾದ.. ಹೆಣ್ಣು ಕೊಡೋಕೆ ಒಪ್ಪದ ಕುಟುಂಬದ ಮೇಲೆ ಸರ್ಕಾರಿ ನೌಕರ ದ್ವೇಷ
ಪಾಕ್ಗೆ ಮೊದಲ ಚಿನ್ನ ಗಿಫ್ಟ್
ಅರ್ಷದ್ ನದೀಮ್ ಚಿನ್ನ ಗೆದ್ದಿದ್ದೇ ತಡ ಆತನ ತಂದೆ ಮಾಧ್ಯಮದ ಮುಂದೆ ಮನಬಿಚ್ಚಿ ಮಾತನಾಡಿದ್ದಾರೆ. ‘ಅರ್ಷದ್ ಈ ಸ್ಥಾನಕ್ಕೆ ಹೇಗೆ ತಲುಪಿದರು ಎಂದು ಜನರಿಗೆ ತಿಳಿದಿಲ್ಲ. ಆತನ ತರಬೇತಿಗೆ, ಆಟದಲ್ಲಿ ಭಾಗವಹಿಸಲು ಗ್ರಾಮಸ್ಥರು ಮತ್ತು ಸಂಬಂಧಿಕರು ಹೇಗೆ ಹಣದ ಸಹಾಯ ಮಾಡಿದ್ದಾರೆ ಎಂಬುದು ನನಗಷ್ಟೇ ಗೊತ್ತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2024 Olympics: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ
ಅಚ್ಚರಿಯ ಸಂಗತಿ ಎಂದರೆ ಪಾಕಿಸ್ತಾನ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಮೊದಲ ಚಿನ್ನವನ್ನು ಗೆದ್ದುಕೊಂಡಿದೆ. ಅರ್ಷದ್ ನದೀಮ್ ಅವರು ದೇಶಕ್ಕಾಗಿ ಚಿನ್ನ ಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ