ಆಪರೇಷನ್ ಸಿಂಧೂರ್​ ವೇಳೆ ಆಗಿದ್ದೇನು? ಪಾಕ್​​ನ ಅಸಲಿ ಬಂಡವಾಳ ಬಯಲು ಮಾಡಿದ ಪಾಕಿಸ್ತಾನಿ ಪ್ರಜೆ..!

author-image
Veena Gangani
Updated On
ಆಪರೇಷನ್ ಸಿಂಧೂರ್​ ವೇಳೆ ಆಗಿದ್ದೇನು? ಪಾಕ್​​ನ ಅಸಲಿ ಬಂಡವಾಳ ಬಯಲು ಮಾಡಿದ ಪಾಕಿಸ್ತಾನಿ ಪ್ರಜೆ..!
Advertisment
  • ‘ಭಾರತ 24 ಮಿಸೈಲ್ ಗಳನ್ನ ಪಾಕಿಸ್ತಾನದ ಮೇಲೆ ಹಾಕಿದೆ’
  • ಭಾರತ ದಾಳಿ ಮಾಡಿರೋದು ಅವರ ಟಾರ್ಗೆಟ್ ಮೇಲೆ ಮಾತ್ರ!
  • ನಾವು ಈ ಸತ್ಯವನ್ನ ಒಪ್ಪಿಕೊಳ್ಳಬೇಕು ಎಂದ ಪಾಕಿಸ್ತಾನದ ಪ್ರಜೆ

ಪಾಕಿಸ್ತಾನದ ಪ್ರಜೆಯಿಂದಲೇ ಪಾಕಿಸ್ತಾನದ ಸತ್ಯ ಬಯಲಾಗಿದೆ. ಪಾಕಿಸ್ತಾನದ ಪ್ರಜೆಯೋರ್ವ ಭಾರತದ ಸೇನೆಯ ಬಗ್ಗೆ ಹೆಮ್ಮೆ ರೀತಿಯಲ್ಲಿ ಮಾತಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋ ಮೂಲಕವೇ ಪಾಕ್​ನ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO


">May 8, 2025

ಭಾರತ 24 ಮಿಸೈಲ್ ಗಳನ್ನ ಪಾಕಿಸ್ತಾನದ ಮೇಲೆ ಹಾಕಿದೆ. ಒಂದೇ ಒಂದು ಮಿಸೈಲ್ ತಡೆಯೋಕು ಪಾಕಿಸ್ತಾನಕ್ಕೆ ಆಗಿಲ್ಲ. ಪಾಕಿಸ್ತಾನದ ಬಳಿ ಮಿಸೈಲ್ ತಡೆಯೋ ಸಿಸ್ಟಮ್ ಇಲ್ಲ. ಭಾರತ ದಾಳಿ ಮಾಡಿರೋದು ಅವರ ಟಾರ್ಗೆಟ್​ಗಳ ಮೇಲೆ ಮಾತ್ರ. ಬೇರೆ ಕಡೆ ದಾಳಿ ಮಾಡಿದ್ರೆ ಅದೆಷ್ಟು ಜನ ಸಾಯ್ತಿದ್ರೊ ಗೊತ್ತಿಲ್ಲ. ಪಾಕಿಸ್ತಾನ ಮೀಡಿಯಾದಲ್ಲಿ ಭಾರತದ ವಿಮಾನ ಹೊಡೆದುರುಳಿಸಲಾಗಿದೆ ಅಂತ ಹೇಳಲಾಗ್ತಿದೆ. ಆ ರೀತಿ ಯಾವ ಘಟನೆಯೂ ಪಾಕಿಸ್ತಾನ ಮಾಡಿಲ್ಲ. ಪಾಕಿಸ್ತಾನ ಮೀಡಿಯಾದಲ್ಲಿ ಬರ್ತಿರೋದು ಎಂಟು ತಿಂಗಳ ಹಳೆ ಅಥವಾ ಒಂದು ವರ್ಷದ ಹಳೆ ವೀಡಿಯೋಗಳು ಬರ್ತಿವೆ. ನಾವು ಈ ಸತ್ಯವನ್ನ ಒಪ್ಪಿಕೊಳ್ಳಬೇಕು ಎಂದು ಪಾಕ್ ಪ್ರಜೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment