ಹಾಲಿಗಾಗಿ ಅಲ್ಲವೇ ಅಲ್ಲ, ಕತ್ತೆಗಳಿಗೆ ಭಾರೀ ಬೇಡಿಕೆ; ಡಾಂಕಿ ಲಕ್ಷ ಲಕ್ಷ ರೂಪಾಯಿಗೆ ಮಾರಾಟ!

author-image
Bheemappa
Updated On
ಹಾಲಿಗಾಗಿ ಅಲ್ಲವೇ ಅಲ್ಲ, ಕತ್ತೆಗಳಿಗೆ ಭಾರೀ ಬೇಡಿಕೆ; ಡಾಂಕಿ ಲಕ್ಷ ಲಕ್ಷ ರೂಪಾಯಿಗೆ ಮಾರಾಟ!
Advertisment
  • ಕತ್ತೆಗಳ ಬೆಲೆಯಲ್ಲಿ ಭಾರೀ ಹೆಚ್ಚಳ ಆಗಲು ಕಾರಣ ಏನಿರಬಹುದು?
  • ವಸ್ತುಗಳ ರವಾನೆಗೆ ಬಳಕೆ ಮಾಡ್ತಿದ್ದ ಕತ್ತೆಗಳಿಗೆ ಈಗ ಬೇಡಿಕೆ ಹೆಚ್ಚು
  • ದೇಶದಲ್ಲಿ ಕೇವಲ ಒಂದು ಕತ್ತೆಯ ಬೆಲೆ ಲಕ್ಷ ಲಕ್ಷ ರೂಪಾಯಿಗಳು

ಎಲ್ಲಿಯಾದರೂ ಯಾರಾದರೂ ತಪ್ಪು ಮಾಡಿದರೆ ಸಾಕು ಅವರಿಗೆ ಕತ್ತೆ ಎಂದು ಬೈಯ್ಯುತ್ತಿರುತ್ತಾರೆ. ತಪ್ಪು ಮಾಡಿದ್ದು ಮನುಷ್ಯ ಆದರೂ ಬೈಯ್ಯಲು ಕತ್ತೆ ಹೆಸರನ್ನು ಬಳಸುತ್ತೇವೆ. ಮೊದಲಿನಿಂದಲೂ ಕತ್ತೆ ಹೆಚ್ಚು ಕೆಲಸ ಮಾಡಿದರೂ ಯಾರೂ ಗುರುತಿಸದೇ ಇದ್ದಿದ್ದರಿಂದ ಇದರ ಹೆಸರು ಈಗಲೂ ಬೈಗುಳಕ್ಕೆ ಉಪಯೋಗಿಸ್ತಾರೆ. ಇದೆಲ್ಲಾ ಯಾಕೆ ಬಿಡಿ, ಇದೀಗ ಪಾಕಿಸ್ತಾನದ ಕತ್ತೆಗಳಿಗೆ ಸಖತ್ ಡಿಮ್ಯಾಂಡ್​ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅದು ಯಾಕೆ ಎಂದು ಇಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನದಲ್ಲಿ ಈಗಲೂ ಕತ್ತೆಗಳೇ ಹೆಚ್ಚು ಉಪಯುಕ್ತವಾದ ಪ್ರಾಣಿಯಾಗಿದೆ. ಯಾವುದೇ ವಸ್ತುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನೆ ಮಾಡಲು ಈ ಕತ್ತೆಗಳನ್ನೇ ಪ್ರಮುಖವಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಒಂದು ಕತ್ತೆಯ ಬೆಲೆ 20 ಸಾವಿರ ರೂಪಾಯಿವರೆಗೆ ಇತ್ತು. ಆದರೆ ಈಗ ಕತ್ತೆಗಳ ದರಗಳಲ್ಲಿ ಭಾರೀ ಏರಿಕೆ ಕಂಡಿದೆ. ಒಂದು ಕತ್ತೆ ಬೆಲೆ 3 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಏನು?.

ಪಾಕಿಸ್ತಾನದಲ್ಲಿ ಕತ್ತೆಗಳು ಹಲವಾರು ಕೈಗಾರಿಕೆಗಳ ಅವಿಭಾಜ್ಯ ಅಂಗವಾಗಿದೆ. ಜೊತೆಗೆ ದೇಶದಲ್ಲಿರುವ ಬಡ ಕೂಲಿ ಕಾರ್ಮಿಕರು ಭಾರವಾದ ವಸ್ತುಗಳನ್ನು ಸಾಗಾಟ ಮಾಡಲು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕತ್ತೆ ಬಂಡಿಗಳನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ಚೀನಾದಿಂದ ಪಾಕ್​ ಕತ್ತೆಗಳಿಗೆ ಬೇಡಿಕೆ ಶುರುವಾಗಿದ್ದರಿಂದ ಒಂದು ಕತ್ತೆ ಬೆಲೆ 3 ಲಕ್ಷ ರೂಪಾಯಿ ಎನ್ನಲಾಗುತ್ತಿದೆ.

ಇದನ್ನೂ ಓದಿ:29ನೇ ವಯಸ್ಸಿನಲ್ಲೇ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!

publive-image

ಚೀನಾದ ಎಜಿಯಾವೊ ಉದ್ಯಮ (Ejiao industry) ದಲ್ಲಿ ಕತ್ತೆಗಳ ಚರ್ಮವನ್ನು ಅಧಿಕವಾಗಿ ಬಳಕೆ ಮಾಡುತ್ತಿದ್ದರಿಂದ ದರ ಏರಿಕೆ ಆಗಿದೆ. ಚೀನಾದ ಸಂಪ್ರದಾಯಿಕ ಔಷಧ ಎಜಿಯಾಲಿಸ್ (Ejialis) ಎಂಬ ಜೆಲಾಟಿನ್​ಗೆ ಪ್ರಮುಖ ಕಾರಣವಾಗಿದೆ. ಕತ್ತೆಯ ಚರ್ಮವನ್ನು ಕುದಿಸಿದಾಗ ದಪ್ಪ ಆಗತ್ತದೆ. ಆಗ ಜೆಲಾಟಿನ್​ಗೆ ಉಪಯೋಗ ಮಾಡಲಾಗುತ್ತದೆ.

ಇದಾದ ನಂತರ, ಇದನ್ನು ಆಯಾಸವನ್ನು ನಿವಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ಗೆಡ್ಡೆಗಳು ಮತ್ತು ರಕ್ತಹೀನತೆಯಂತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈಗಲೂ ಸಾಂಪ್ರದಾಯಿಕ ಚೀನೀ ಔಷಧ ಅಂಗಡಿಗಳಲ್ಲಿ ಜೆಲಾಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಪಾಕಿಸ್ತಾನದ ಕತ್ತೆಗಳಿಗೆ ಚೀನಾದಲ್ಲಿ ದೊಡ್ಡ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment