/newsfirstlive-kannada/media/post_attachments/wp-content/uploads/2024/02/Pakistani-ISI-Agent.jpg)
ಮೀರತ್: ಪಾಪಿ ಪಾಕಿಸ್ತಾನದ ನರಿ ಬುದ್ಧಿ ಇಂದು ನಿನ್ನೆಯದಲ್ಲ. ಎಂದೆಂದಿಗೂ ಭಾರತದ ಮೇಲೆ ಸಂಚು ರೂಪಿಸುವ ಪಾಕಿಗಳ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಸ್ಫೋಟಕ ಕಾರ್ಯಾಚರಣೆ ನಡೆಸಿದ್ದು ಮೀರತ್‌ನಲ್ಲಿ ಪಾಕಿಸ್ತಾನದ ISI ಏಜೆಂಟ್ ಅನ್ನು ಬಂಧಿಸಿದೆ.
ಮೀರತ್‌ನಲ್ಲಿ ಬಂಧಿಸಿರುವ ಪಾಕ್ ISI ಏಜೆಂಟ್ ಅನ್ನು ಸತ್ಯೇಂದ್ರ ಸಿವಾಲ್ ಎಂದು ಗುರುತಿಸಲಾಗಿದೆ. ಈತ ರಷ್ಯಾದ ಮಾಸ್ಕೋದಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಬಗ್ಗೆ ಉತ್ತರಪ್ರದೇಶ ಭಯೋತ್ಪಾದಕ ನಿಗ್ರಹ ದಳ ಖಚಿತ ಮಾಹಿತಿ ಕಲೆ ಹಾಕಿ ಮಹತ್ವದ ಕಾರ್ಯಾಚರಣೆ ನಡೆಸಿದೆ.
/newsfirstlive-kannada/media/post_attachments/wp-content/uploads/2023/09/Ind-Pakistan-Flag.jpg)
ಪಾಕಿಸ್ತಾನದ ISI ಏಜೆಂಟ್ ಸತ್ಯೇಂದ್ರ ಸಿವಾಲ್, ಉತ್ತರಪ್ರದೇಶದ ಹಾಪುರ್ ಎಂಬ ಪುಟ್ಟ ಗ್ರಾಮದವನು ಎನ್ನಲಾಗಿದೆ. ಇನ್ನೂ ಆಶ್ಚರ್ಯದ ಸಂಗತಿ ಏನಂದ್ರೆ ಸತ್ಯೇಂದ್ರ ಸಿವಾಲ್ ಭಾರತೀಯ ವಿದೇಶಾಂಗ ಇಲಾಖೆಯಿಂದ ರಷ್ಯಾದ ಮಾಸ್ಕೋ ಭಾರತೀಯ ರಾಯಭಾರ ಕಚೇರಿಗೆ ನೇಮಕ ಗೊಂಡಿದ್ದ. 2021ರಲ್ಲಿ ಸತ್ಯೇಂದ್ರ ಸಿವಾಲ್ ಅನ್ನು ವಿದೇಶಾಂಗ ಇಲಾಖೆ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಾಗಿ ನೇಮಿಸಿತ್ತು.
ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ; ಆಕೆ ಮಾಡಿದ ತಪ್ಪೇನು?
ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನದ ISI ಏಜೆಂಟ್ ಪತ್ತೆದಾರಿಯಾಗಿ ಕೆಲಸ ಮಾಡುತ್ತಿದ್ದ. ಇವನ ನಿಗೂಢ ಚಲನವಲನಗಳ ಮೇಲೆ ಸಾಕಷ್ಟು ಅನುಮಾನ ಬಂದಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸತ್ಯೇಂದ್ರ ಸಿವಾಲ್ ಸರಿಯಾದ ಉತ್ತರಗಳನ್ನು ಕೊಟ್ಟಿಲ್ಲ. ಬಹಳ ದಿನಗಳಿಂದ ಕಣ್ಣಿಟ್ಟಿದ್ದ ಭಯೋತ್ಪಾದನಾ ನಿಗ್ರಹ ದಳಕ್ಕೆ ಈತ ಪಾಕಿಸ್ತಾನದ ಏಜೆಂಟ್ ಅನ್ನೋದು ಖಚಿತವಾಗಿದೆ. ಇದೀಗ ರಹಸ್ಯ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ
ಪಾಕಿಸ್ತಾನದ ISI ಏಜೆಂಟ್ ಸತ್ಯೇಂದ್ರ ಸಿವಾಲ್ ಭಯೋತ್ಪಾದಕ ನಿಗ್ರಹ ದಳದ ವಿಚಾರಣೆಯಲ್ಲಿ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಭಾರತೀಯ ಸೇನೆಯ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಹಣದ ಆಮಿಷ ನೀಡಲು ಪ್ರಯತ್ನಿಸಿದ್ದ. ಭಾರತೀಯ ವಿದೇಶಾಂಗ ಇಲಾಖೆ, ರಕ್ಷಣೆ, ರಾಯಭಾರ ಕಚೇರಿಯ ರಹಸ್ಯ ಮಾಹಿತಿಯನ್ನು ISI ಸಂಪರ್ಕದಲ್ಲಿರುವವರಿಗೆ ರವಾನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us