newsfirstkannada.com

Video: ಬೈಕ್​ನಲ್ಲಿ ಬಂದ ವ್ಯಕ್ತಿ.. ಅಡ್ರೆಸ್ ಕೇಳೋ ನೆಪದಲ್ಲಿ ಬಾಲಕಿಯನ್ನ ಕಿಡ್ನಾಪ್​​ಗೆ ಯತ್ನ

Share :

Published April 23, 2024 at 9:29am

    ಪೋಷಕರೇ ಎಚ್ಚರ.. ಈಗೀಗ ಅಪಹರಣ ಕೇಸ್​ಗಳು ಹೆಚ್ಚುತ್ತಿವೆ

    ವಿಳಾಸ ಕೇಳುವ ನೆಪದಲ್ಲಿ ಹೋಗುತ್ತಿದ್ದ ಬಾಲಕಿಯನ್ನ ಕರೆದಿದ್ದ​

    ಯಾರು ಇಲ್ಲದ ಸ್ಥಳದಲ್ಲಿ ಹಿಂದೂ ಬಾಲಕಿ ಕಿಡ್ನಾಪ್​ಗೆ ಯತ್ನ?

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರು ಅಪ್ರಾಪ್ತ ಹಿಂದೂ ಬಾಲಕಿಯನ್ನು ವಿಳಾಸ ಕೇಳುವ ನೆಪದಲ್ಲಿ ಕರೆದು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮುಖಕ್ಕೆ ಮಸ್ಕ್​ ಹಾಕಿರುವ ವ್ಯಕ್ತಿ ಬೈಕ್​ನಲ್ಲಿ ಹೋಗುತ್ತಿರುತ್ತಾನೆ. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಾಲಕಿಯನ್ನು ಸಮೀಪಕ್ಕೆ ಕರೆದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಬಾಲಕಿಯನ್ನು ತನ್ನತ್ತ ಕರೆದಿದ್ದು. ಹುಡುಗಿ ಸಮೀಪಿಸುತ್ತಿದ್ದಂತೆ, ಅವನು ಬಾಲಕಿಯನ್ನು ಬಲವಾಗಿ ಹಿಡಿದುಕೊಂಡು ಬಾಯಿ ಮುಚ್ಚಲು ಪ್ರಯತ್ನಿಸುತ್ತಾನೆ.

ಆದ್ರೆ ಬಾಲಕಿ ಅವನಿಂದ ತಪ್ಪಿಸಿಕೊಂಡು ತಕ್ಷಣ ಪರಾರಿಯಾಗಿದ್ದಾಳೆ. ಬಳಿಕ ಬೈಕ್​ ಸಮೇತ ಆರೋಪಿ ಎಸ್ಕೇಪ್​ ಆಗಿದ್ದಾನೆ. ಸದ್ಯ ಬಾಲಕಿಯನ್ನು ಕಿಡಿಗೇಡಿ ಅಪಹರಿಸಲು ಯತ್ನಿಸುತ್ತಿರುವ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ಪಾಕಿಸ್ತಾನದವರು ಯಾಕೆ ಚಿಕ್ಕ ಮಕ್ಕಳನ್ನು ಕಿಡ್ನಾಪ್ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ 2ನೇ ವಿಡಿಯೋದಲ್ಲಿ ಬಾಲಕಿಯು ಹಿಂದೂ ಆಗಿದ್ದರಿಂದ ಅನ್ಯ ಕೋಮಿನ ವ್ಯಕ್ತಿ ಕಿಡ್ನಾಪ್ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಬಾಲಕಿ ತಪ್ಪಿಸಿಕೊಂಡು ಹೋಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬೈಕ್​ನಲ್ಲಿ ಬಂದ ವ್ಯಕ್ತಿ.. ಅಡ್ರೆಸ್ ಕೇಳೋ ನೆಪದಲ್ಲಿ ಬಾಲಕಿಯನ್ನ ಕಿಡ್ನಾಪ್​​ಗೆ ಯತ್ನ

https://newsfirstlive.com/wp-content/uploads/2024/04/PAK_GIRL_HINDU.jpg

Load More