/newsfirstlive-kannada/media/post_attachments/wp-content/uploads/2025/05/Pakistan-food-1.jpg)
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತ, ಪಾಕ್ ಗಡಿಯಲ್ಲಿ ಸಮಾರಾಭ್ಯಾಸ ಜೋರಾಗಿದೆ. ಯಾವುದೇ ಕ್ಷಣದಲ್ಲಿ ಯಾವ ಪರಿಸ್ಥಿತಿ ಬೇಕಾದರೂ ಎದುರಾಗುವ ವಾತಾವರಣ ಸೃಷ್ಟಿಯಾಗಿದೆ. ಭಾರತದ ಸೇನೆಯ ನಿಗೂಢ ಕ್ರಮಗಳು ಪಾಕಿಸ್ತಾನಕ್ಕೆ ನಡುಕವನ್ನ ಉಂಟು ಮಾಡಿದ್ದು, ಯುದ್ಧದ ಭೀತಿಯಲ್ಲಿ ಮುಂದೇನು ಅನ್ನೋ ಆತಂಕದಲ್ಲಿ ಕಾಲ ಕಳೆಯುವಂತೆ ಆಗಿದೆ.
ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳಿಗೆ ಮಹತ್ವದ ಸೂಚನೆ ನೀಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿರೋ ಒಟ್ಟು 13 ವಿಧಾನಸಭಾ ಕ್ಷೇತ್ರದ ಜನರಿಗೆ ಮುಂದಿನ 2 ತಿಂಗಳಿಗೆ ಬೇಕಾಗುವಷ್ಟು ಆಹಾರ ಮತ್ತು ಔಷಧಗಳನ್ನ ಶೇಖರಣೆ ಮಾಡಿಕೊಳ್ಳಿ ಎಂದು ಪಾಕಿಸ್ತಾನ ಆಡಳಿತದ ಕಾಶ್ಮೀರ ಪ್ರಧಾನಿ ಚೌಧರಿ ಅನ್ವರ್ ಉಲ್ ಹಕ್ ಹೇಳಿದ್ದಾರೆ.
ಆಹಾರ, ಔಷಧ ಮತ್ತು ಮೂಲ ಸೌಕರ್ಯಕ್ಕೆ ಪಾಕ್ ಸರ್ಕಾರ 3.5 ಮಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದೆ. ಆದರೆ ಅಟ್ಟಾರಿ ಗಡಿ ಬಂದ್ ಮಾಡಿರೋದ್ರಿಂದ ಇನ್ಮುಂದೆ ಆಹಾರದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 2 ತಿಂಗಳ ಆಹಾರ ಸಂಗ್ರಹ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿಸಿದ ಭರ್ಜರಿ ಬ್ಯಾಚ್ಯುಲರ್ಸ್ ವೇದಿಕೆ; ಎಲ್ಲರೂ ಭಾವುಕ!
ಮಿಲಿಟರಿ ತಾಲೀಮು!
ಭಾರತ ಯುದ್ಧ ಮಾಡುವ ಭೀತಿಯಲ್ಲಿರುವ ಪಾಕಿಸ್ತಾನ ಸೇನೆಯು ದೊಡ್ಡ ಪ್ರಮಾಣದ ಮಿಲಿಟರಿ ತಾಲೀಮನ್ನು ಕೈಗೊಂಡಿದೆ. ತನ್ನ ಬಳಿ ಇರೋ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ತಂತ್ರಗಳು, ಮಿಲಿಟರಿ ಶಕ್ತಿಯನ್ನು ಪ್ರದರ್ಶನ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ