/newsfirstlive-kannada/media/post_attachments/wp-content/uploads/2025/03/PAK_SPY.jpg)
ಬೆಂಗಳೂರು: ಸಹವಾಸವೇ ಬೇಡ ಎಂದು ಪಾಕಿಸ್ತಾನದಿಂದ ದೂರ ಇದ್ದರೂ ಅದು ಮಾತ್ರ ಭಾರತದ ಕೆಲ ಮಾಹಿತಿ ಮೇಲೆ ಕಣ್ಣಿಟ್ಟಿರುತ್ತದೆ. ಕಾಲು ಕೆದರಿ ಜಗಳಕ್ಕೆ ಬಂದಾಗ ಎಷ್ಟು ಸಾರಿ ಹೊಡೆದೊಡಿಸಿದರೂ ಪಾಕಿಸ್ತಾನ ಮಾತ್ರ ಕಾಗೆ ಬುದ್ಧಿ ಇನ್ನು ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಪಾಕಿಸ್ತಾನದ ಗೂಢಚಾರಿ ಒಬ್ಬನನ್ನು ಬಂಧನ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿನ ಸರ್ಕಾರದ ಪ್ರತಿಷ್ಠಿತ ಬಿಇಎಲ್ (Bharat Electronics Limited) ​ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಎನ್ನುವ ಆರೋಪಿಯನ್ನು ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಯಾರಿಗೂ ಅನುಮಾನ ಬಾರದಂತೆ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಬಿಇಎಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು.
ಬಂಧಿತ ಆರೋಪಿ ದೀಪ್ ರಾಜ್ ಚಂದ್ರ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವನು. ಬೆಂಗಳೂರಿನ ಬಿಇಎಲ್​ನಲ್ಲಿ ಪಿಐಡಿಸಿ ಆಗಿ ಕೆಲಸ ಮಾಡುತ್ತಿದ್ದನು. ಬಿಇಎಲ್​ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us