ಭಾರತದ ರಾಷ್ಟ್ರಗೀತೆ ಕೇಳಿಯೇ ಶಾಕ್ ಆದ ಪಾಕಿಸ್ತಾನದ ಸ್ಟೇಡಿಯಂ; ವಿಡಿಯೋ ಫುಲ್‌ ವೈರಲ್‌!

author-image
admin
Updated On
INDvsPAK: ಸವಾಲುಗಳನ್ನ ಮೆಟ್ಟಿ ನಿಂತ್ರೆ ಮಾತ್ರ ಭಾರತಕ್ಕೆ ಅವಕಾಶ; ಪಾಕ್‌ಗೆ ಗೆಲ್ಲೋ ಅಡ್ವಾಂಟೇಜ್ ಜಾಸ್ತಿ!
Advertisment
  • ಮೊದಲೇ ಪಾಕಿಸ್ತಾನಕ್ಕೆ ಕಾಲಿಡುವುದಿಲ್ಲ ಎಂದು ನಿರಾಕರಿಸಿರುವ BCCI
  • ಭಾರತದ ರಾಷ್ಟ್ರಗೀತೆ ಕೇಳಿಯೇ ಬೆಚ್ಚಿ ಬಿದ್ದ ಪಾಕಿಸ್ತಾನದ ಸ್ಟೇಡಿಯಂ!
  • ನಾಳೆಯೇ ಭಾರತ, ಪಾಕಿಸ್ತಾನ ಬದ್ಧ ವೈರಿಗಳ ಜಿದ್ದಾಜಿದ್ದಿನ ಕಾಳಗ

ICC ಚಾಂಪಿಯನ್ ಟ್ರೋಫಿಯ ಭಾರತ, ಪಾಕ್ ಪಂದ್ಯಕ್ಕೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ನಾಳೆ ದುಬೈನಲ್ಲಿ ಬದ್ಧ ವೈರಿಗಳ ಜಿದ್ದಾಜಿದ್ದಿನ ಕಾಳಗ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಲಾಹೋರ್‌ ಸ್ಟೇಡಿಯಂನಲ್ಲಿ ವಿಚಿತ್ರ ಘಟನೆ ನಡೆದಿದ್ದು, ಪಾಕ್‌ ಕ್ರಿಕೆಟ್ ಮಂಡಳಿ ಫುಲ್ ಟ್ರೋಲ್ ಆಗಿದೆ.

ಭಾರತ, ಪಾಕಿಸ್ತಾನದ ಮಧ್ಯೆ ಇರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ಸ್ಟೇಡಿಯಂನಲ್ಲಿ ಆಟ ಆಡಲು ನಿರಾಕರಿಸಿತ್ತು. ಹೀಗಾಗಿ ಚಾಂಪಿಯನ್ ಟ್ರೋಫಿಯ ಭಾರತದ ಎಲ್ಲಾ ಪಂದ್ಯಗಳು ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಉಳಿದ ದೇಶಗಳ ಪಂದ್ಯಗಳಿಗೆ ಮಾತ್ರ ಪಾಕಿಸ್ತಾನ ಆತಿಥ್ಯ ವಹಿಸಿದೆ.

publive-image

ಪಾಕಿಸ್ತಾನದ ಕ್ರೀಡಾಂಗಣಗಳಲ್ಲಿ ಭಾರತ ತಂಡದ ಆಟಗಾರರು ಕಾಲಿಡುವುದಿಲ್ಲ ಎಂದು BCCI ಮೊದಲೇ ಸ್ಪಷ್ಟಪಡಿಸಿತ್ತು. ಬಿಸಿಸಿಐ ತೆಗೆದುಕೊಂಡ ತೀರ್ಮಾನದಂತೆ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನದ ಪ್ರವಾಸ ಕೈಗೊಳ್ಳುತ್ತಿಲ್ಲ. ಆದರೆ ಪಾಕಿಸ್ತಾನದ ಲಾಹೋರ್ ಸ್ಟೇಡಿಯಂನಲ್ಲಿ ಅಚಾನಕ್ ಆಗಿ ಭಾರತದ ರಾಷ್ಟ್ರಗೀತೆಯನ್ನು ಹಾಕಲಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಎಚ್ಚೆತ್ತುಕೊಂಡ ಆಯೋಜಕರು ಭಾರತದ ರಾಷ್ಟ್ರಗೀತೆಯನ್ನು ಬಂದ್ ಮಾಡಿದ್ದಾರೆ.

ಅಸಲಿಗೆ ಆಗಿದ್ದೇನು?
ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವರ್ಸಸ್ ಇಂಗ್ಲೆಂಡ್ ಮಧ್ಯೆ ಚಾಂಪಿಯನ್ಸ್ ಟ್ರೋಫಿಯ ಪಂದ್ಯ ನಡೆದಿತ್ತು. ಈ ವೇಳೆ ಪಂದ್ಯದ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಆದ ಒಂದು ಯಡವಟ್ಟು ಈ ರಾದ್ಧಾಂತಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಬದಲು ಭಾರತದ ಜನಗಣಮನ ಅಧಿನಾಯಕ ಜಯಹೇ ಅನ್ನೋ ರಾಷ್ಟ್ರಗೀತೆಯನ್ನು ಹಾಕಲಾಗಿತ್ತು. ಭಾರತ ಭಾಗ್ಯವಿದಾತ ಅನ್ನೋದು ಪ್ರಸಾರವಾಗುತ್ತಲೇ ತಕ್ಷಣವೇ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಮತ್ತೆ ಬಾಲ ಬಿಚ್ಚಿದ ಪಿಸಿಬಿ; ಟೀಂ ಇಂಡಿಯಾ ಮ್ಯಾಚ್​ಗೂ ಮೊದಲೇ ಕಿರಿಕ್​..! 

ಪಾಕಿಸ್ತಾನಕ್ಕೆ ಭಾರತದ ಆಟಗಾರರು ಕಾಲಿಡದಿದ್ದರೂ ಭಾರತದ ರಾಷ್ಟ್ರಗೀತೆ ಕೇಳಿ ಬಂದಿದ್ದು ಇಡೀ ಲಾಹೋರ್‌ ಸ್ಟೇಡಿಯಂನಲ್ಲೇ ಅಚ್ಚರಿಗೆ ಕಾರಣವಾಗಿತ್ತು. ಭಾರತ -ಪಾಕಿಸ್ತಾನ ಜಿದ್ದಾಜಿದ್ದಿನ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರಗೀತೆ ಸದ್ದು ಮಾಡಿರೋದು ವಿಶೇಷವಾಗಿದೆ. ಈ ಯಡವಟ್ಟಿನ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment